Scholarship: ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಮತ್ತು ಶಾಲೆ ತೊರೆಯುವುದನ್ನು ತಡೆಯಲು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿದ್ಯಾರ್ಥಿವೇತನ ಯೋಜನೆಯು 2021ರ ಸೆಪ್ಟೆಂಬರ್ 5 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾಂಕೇತಿಕವಾಗಿ ರೈತರ ಮಕ್ಕಳಿಗೆ ಚೆಕ್‌ ವಿತರಣೆ ಮಾಡುವ ರಾಜ್ಯ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿಯ ಮತ್ತು ಅತೀ ಅಗತ್ಯದ ಯೋಜನೆ ಇದಾಗಿದೆ. ಸುಮಾರು 17 ಲಕ್ಷಕ್ಕೂ ಅಧಿಕ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ.

8,9,10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ನೀಡುವ ವಿದ್ಯಾರ್ಥಿವೇತನ ಸೌಲಭ್ಯವನ್ನು ವಿಸ್ತರಿಸಿ 2021-22 ನೇ ವರ್ಷದಿಂದ ವಾರ್ಷಿಕ ತಲಾ 2,000 ರೂ ವಿದ್ಯಾರ್ಥಿವೇತನ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಂತೆ 2022-23 ನೇ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮವನ್ನು ಮೀನುಗಾರರ ಮೀನು ಕೃಷಿಕರ ಮಕ್ಕಳಿಗೂ ವಿಸ್ತರಿಸಿದ್ದು, ಮೀನು ಕೃಷಿಕರ ಮಕ್ಕಳ 8 ರಿಂದ 10 ನೇ ತರಗತಿ ವರೆಗೆ (ಹೆಣ್ಣು ಮಕ್ಕಳಿಗೆ ಮಾತ್ರ ಮತ್ತು SSLC, PUC ಮತ್ತು ನಂತರದ ಕೋರ್ಸುಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು, ಮುಖ್ಯಮಂತ್ರಿ ಮೀನುಗಾರರ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬೇಕು.

ಶಿಷ್ಯವೇತನ ಯೋಜನೆಯ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ. “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಾರ್ಷಿಕ ಶಿಷ್ಯವೇತನದ ವಿವರ 8,9,10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ರೂ 2,000. ಪಿಯುಸಿ/ಐಟಿಐ/ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ 2,500 ವಿದ್ಯಾರ್ಥಿನಿಯರಿಗೆ ರೂ 3,000. ಬಿ.ಎ/ಬಿ.ಎಸ್.ಸಿ/ಬಿ.ಕಾಂ ಇನ್ನತರೆ ಪದವಿ ವಿದ್ಯಾರ್ಥಿಗಳಿಗೆ ರೂ 5,000 ವಿದ್ಯಾರ್ಥಿನಿಯರಿಗೆ ರೂ 5,500.

ಇದನ್ನೂ ಓದಿ..ಅಮೆಜಾನ್‌ ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ ಇಲ್ಲಿದೆ ಸಂಪೂರ್ಣ ವಿವರ

LLB/ಪ್ಯಾರಾಮೆಡಿಕಲ್/ಬಿ.ಫಾರ್ಮ್/ ನರ್ಸಿಂಗ್ ಇನ್ನಿತರೆ ವೃತಿಪರ ಕೋರ್ಸುಗಳಿಗೆ ವಿದ್ಯಾರ್ಥಿಗಳಿಗೆ ರೂ 7,500 ವಿದ್ಯಾರ್ಥಿನಿಯರಿಗೆ ರೂ 8,000. ಎಂ.ಬಿಬಿ.ಎಸ್/ಬಿ.ಇ/ಬಿ.ಟೆಕ್/ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸುಗಳಿಗೆ ವಿದ್ಯಾರ್ಥಿಗಳಿಗೆ ರೂ 10,000 ವಿದ್ಯಾರ್ಥಿನಿಯರಿಗೆ ರೂ 11,000. ರೈತ ವಿದ್ಯಾನಿಧಿ ಶಿಷ್ಯವೇತನ ಪಡೆಯಲು ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ(SSP Portal https://ssp.postmatric.karnataka.gov.in/) ತಂತ್ರಾಂಶ ಹಾಗೂ ಕೃಷಿ ಇಲಾಖೆಯಲ್ಲಿ ರೈತರು ನೋಂದಾವಣೆಯಾಗಿರುವ ಪ್ರೋಟ್ಸ್ (Fruitshttps://fruits.karnataka.gov.in/) Co ಮತ್ತು ಪಡಿತರ ಚೀಟಿ ವಿತರಿಸುವ ಕುಟುಂಬ https://kutumba.karnataka.gov.in/kn/Ind ex) ಈ ಮೂರು ತಂತ್ರಾಂಶಗಳ ದತ್ತಾಂಶ ಸಂಗ್ರಹಿಸಿ ಅರ್ಹ ಪಲಾನುಭಾವಿಗಳಿಗೆ ನೇರವಾಗಿ ತಮ್ಮ ಖಾತೆಗೆ ಹಣ ವರ್ಗವಾಣೆ ಮಾಡಲಾಗುತ್ತದೆ. ಹೊಸ ಆದೇಶದ್ವಯ ಯಾವುದೇ ವಿದ್ಯಾರ್ಥಿ ವೇತನ ಪಡೆದರೂ ರೈತ ವಿದ್ಯಾನಿಧಿಗೆ ಅರ್ಹರು. ರೈತ ಕುಟುಂಬದ ಎಲ್ಲಾ ಮಕ್ಕಳು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.

ರೈತ ವಿದ್ಯಾನಿಧಿ ಶಿಷ್ಯವೇತನ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ರಾಜ್ಯ ವಿದ್ಯಾರ್ಥಿ ವೇತನ (SSP Portal) ತಂತ್ರಾಂಶ ಹಾಗೂ ಕೃಷಿ ಇಲಾಖೆಯಲ್ಲಿ ರೈತರು ನೋಂದಾವಣೆಯಾಗಿರುವ ಪ್ರೋಟ್ಸ್ ತಂತ್ರಾಂಶ ಮತ್ತು ಪಡಿತರ ಚೀಟಿ ವಿತರಿಸುವ ಕುಟುಂಬ ರ್ಪೋಟಲ್ ಈ ಮೂರು ತಂತ್ರಾಂಶಗಳ ದತ್ತಾಂಶದ ಸಂಗ್ರಹಿಸಿ ಅರ್ಹ ಪಲಾನುಭಾವಿಗಳಿಗೆ ನೇರವಾಗಿ ತಮ್ಮ ಖಾತೆಗೆ ಹಣ ವರ್ಗವಾಣೆ ಮಾಡಲಾಗುತ್ತದೆ.

ಇದನ್ನೂ ಓದಿ..SSLC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

ಕುಟುಂಬದ ಎಲ್ಲಾ ಮಕ್ಕಳು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿಧ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಸದರಿ ಉದ್ದೇಶಕ್ಕೆ ರೈತ ಕುಟುಂಬ ಎಂದರೆ ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಾಹಿಸುತ್ತಿರುವ ಕುಟುಂಬ ತಂತ್ರಾಶದಲ್ಲಿ ದಾಖಲಾಗಿರುವ ಸದಸ್ಯರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಸಹಾಯವಾಣಿ ಸಂಖ್ಯೆ: 1800 425 3553.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!