ಮೀನಿನ ತೊಟ್ಟಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಒಲೆಯದು ಅನ್ನುವದರ ಬಗ್ಗೆ ಈ ಲೇಖನದಲ್ಲಿ ನಾವಿಂದು ತಿಳಿದುಕೊಳ್ಳೋಣ. ಮನೆಯಲ್ಲಿ ಮೀನು ಇರುವ ತೊಟ್ಟಿಯನ್ನು ಅಥವಾ ಮೀನು ಇರುವ ಬಟ್ಟಲು, ಮೀನು ಇರುವ ಗಾಜಿನ ಬಾಟಲಿಯನ್ನು ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದರೆ ಜನರ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಮನೆಯು ಚೆನ್ನಾಗಿದೆ ಎಂದು ನಾವು ಅಕ್ವೇರಿಯಂ, ಪಾರಿವಾಳ, ಗಿಳಿ, ಗುಬ್ಬಿ, ನವಿಲು, ಲವ್ ಬರ್ಡ್ಸ್ ಇತ್ಯಾದಿ ಹಕ್ಕಿಗಳನ್ನ ಮನೆಯಲ್ಲಿ ಇಟ್ಟು ಆರೈಕೆ ಮಾಡುವುದನ್ನ ಹಲವಾರು ಮನೆಗಳಲ್ಲಿ ನೋಡಿರುತ್ತೇವೆ.
ಅಕ್ವೇರಿಯಂ ಇಟ್ಟು ಅವುಗಳ ಬಣ್ಣ ಬಣ್ಣದ ಹೊರ ಮೈ ಅಂಚಲ್ಲಿ ತಾವು ಈಜುತ್ತಾ ತೆವಳುತ್ತಾ ಹೊರಬರಲಾರದ ಗಾಜಿನ ಗೋಡೆಗಳಿಗೆ ಮೂತಿ ಬಡಿದುಕೊಳ್ಳುತ್ತಾ ಅತ್ತಿಂದಿತ್ತ ಓಡಾಡುವ ಮೀನುಗಳು ಕಣ್ಣಿಗೆ ಅಲ್ಹಾದವನ್ನು ಏನೋ ನೀಡುತ್ತವೆ ನಿಜ. ಆದರೆ ಯಾವುದೇ ಕಾರಣಕ್ಕೂ ಮೀನು ಇರುವ ತೊಟ್ಟಿ, ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬಾರದು. ಅಷ್ಟೇ ಅಲ್ಲದೇ ಮಲಗುವ ಕೋಣೆಯಲ್ಲಿ ನೀರು ಇರುವಂತಹ ಯಾವುದೇ ಪಾತ್ರೆಗಳು, ಗಿಂಡಿಗಳು, ತೊಟ್ಟಿ, ಬಟ್ಟಲು ಇವುಗಳನ್ನು ಇಟ್ಟುಕೊಳ್ಳಬಾರದು ಇವುಗಳೆಲ್ಲ ಅಶುಭ ಸೂಚಕವಾಗಿದೆ.
ಇದೆ ಕಾರಣಕ್ಕೆ ಮಲಗಿರುವಾಗ ಸುಪ್ತ ಅವಸ್ಥೆಗೂ ಮತ್ತು ನೀರಿನ ಜಲ ತತ್ವಕ್ಕೂ ಒಂದು ಇನ್ನೊಂದನ್ನ ಭೇದಿಸಿ ಮನೆಯ ಯಜಮಾನನಿಗೆ ಅಶುಭವನ್ನು ತಂದಿಡುವ ಸೂಚನೆಗಳಾಗಿವೆ. ಆಕ್ವೆರಿಯಮ್ ಜಾಡಿಯನ್ನು ಹೊರಗಿನ ಹಾಲ್ ನಲ್ಲಿ ಇಡಬಹುದು. ಹೊಸದಾಗಿ ಮದುವೆ ಆದ ಜೋಡಿಗಳಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಹೊರಗೆ ಇಡುವುದು ಉತ್ತಮ. ಹೀಗಿರೋವಾಗ ಅಕ್ವೇರಿಯಂ ಪೂರ್ತಿಯಾಗಿ ಕಡುಗಪ್ಪು ಬಣ್ಣದ ಮೀನುಗಳು ಇರದಂತೆಯೇ ಲಕ್ಷ್ಯ ವಹಿಸಿ . ಬಂಗಾರ ಬಣ್ಣದ ಮೀನು, ನಸು ನೀಲಿ, ನಸು ಕೆಂಪು ಬಣ್ಣದ ಮೀನು, ಬಿಳಿ ಕಪ್ಪು ಪಟ್ಟೆಯ ಅಲೆಯ ಹಾಗೇ ಇರುವ ವಜ್ರದ ಹಾಗೆ ಇರುವ ಪುಟ್ಟ ಮೀನುಗಳು ಅತೀ ಉತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ತಿರುಗಿಸುತ್ತಾ ಇರಲಿ. ಸೂರ್ಯ ಬರುವ ಮುನ್ನ ಮೀನುಗಳಿಗೆ ಆಹಾರವನ್ನು ನೀಡುವ ರೂಢಿ ಮಾಡಬೇಡಿ. ಸೂರ್ಯೋದಯ ಆದ ನಂತರವೇ ಆಹಾರವನ್ನು ನೀಡುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಇನ್ನು ನೀರು ಹೊರಗೆ ಪ್ರತಿಫಲಿಸುವಂತೆಯೇ ಬೆಳಕಿನಲ್ಲಿ ಇಟ್ಟಿಕೊಳ್ಳಬೇಕು.
ಹಾಗೇ ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನದಲ್ಲಿ ಇರಿಸಿದ ಹಕ್ಕಿಗಳು ಇರಬಾರದು. ಇನ್ನು ಗುಬ್ಬಿಗಳ ವಿಷಯ ಬಂದರೆ ಬಂಧನದಲ್ಲಿ ಇರದಿದ್ದರೂ ಸಹ ಮನೆಯಲ್ಲಿ ಗುಬ್ಬಿಗಳು ಗೂಡು ಕಟ್ಟಿಕೊಂಡು ಇರಬಾರದು. ಯಾಕಂದ್ರೆ ಗುಬ್ಬಿಗಳು ಅವುಗಳ ಆಹಾತವಾದ ಕೀಟಗಳನ್ನು ಹಿಡಿದು ಮನೆಯೊಳಗೆ ತಂದು ಅಲ್ಲಿಯೇ ಕೊಂದು ತಿನ್ನುವ ಅವುಗಳ ಆಹಾರ ವಿಶೇಷ ಸಂಭವಿಸಬಾರದು. ಗುಬ್ಬಿಗಳ ಈ ವಿಶೇಷವನ್ನು ಮನುಷ್ಯ ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಾಗಿ ಗುಬ್ಬಿಗಳು ಮನೆಯಲ್ಲಿ ನಿಷಿದ್ಧವೇ ಆಗಿದೆ. ಇನ್ನೂ ಗಿಳಿಗಳು, ಲವ್ ಬರ್ಡ್ಸ್, ಪಾರಿವಾಳಗಳೂ ಸಹ ಮನೆಯ ಒಳಗೆ ನಿಷಿದ್ಧ ಆಗಿದೆ. ಇವುಗಳು ಮನೆಯ ಒಳಗೆ ತಾನಾಗಿ ತಾನೇ ಗೂಡನ್ನು ನಿರ್ಮಿಸಿಕೊಳ್ಳುವುದು ಬೇಡ. ಪಂಜರದಲ್ಲಿ ಹಾಕಿತ್ತು ರೆಕ್ಕೆಗಳನ್ನು ಅಲ್ಲೇ ಸಂಯೋಜಿಸಿ ಬಂಧನದ ಜೀವನ ನಡೆಸುವುದು ಬೇಡ. ಹಾಗಾಗಿ ಇವುಗಳ ಬಗ್ಗೆ ಎಚ್ಚರಿಕೆ ತೆಗೆದುಕೊಂಡು ಮನೆಯಲ್ಲಿ ಅದರಲ್ಲೂ ಮಲಗುವ ಕೋಣೆಯಲ್ಲಿ ಅಂತೂ ಇವುಗಳನ್ನೆಲ್ಲ ಇಡುವುದು ಬೇಡವೇ ಬೇಡ ಎನ್ನುತ್ತಾರೆ ವಾಸ್ತು ತಜ್ಞರು.