ಮನುಷ್ಯ ಎಷ್ಟೇ ಒಳ್ಳಯನಾಗಿದ್ದರು ಒಂದಲ್ಲ ಒಂದು ತಪ್ಪು ಅಥವಾ ಪಾಪಕಾರ್ಯಗಳಲ್ಲಿ ತೊಡಗಿರುತ್ತಾನೆ ಅನ್ನೋದನ್ನ ವೇದ ಗ್ರಂಥಗಳು ಹೇಳುತ್ತವೆ. ಈ ಜಗತ್ತಿನಲ್ಲಿ ಪಾಪ ತಪ್ಪು ಮಾಡದೇ ಇರುವಂತವನು ಒಬ್ಬನಾದ್ರು ಇಲ್ಲ ಎಂಬುದಾಗಿ. ಆದ್ದರಿಂದ ನಾವುಗಳು ಮಾಡುವಂತ ಪಾಪ ನಿವಾರಣೆಗೆ ಹಾಗು ಪಾಪ ಕರ್ಮಗಳನ್ನು ಕಳೆದುಕೊಳ್ಳಲು ಇಂತಹ ವ್ಯಕ್ತಿಗಳನ್ನು ಮನೆಗೆ ಕರೆದು ಊಟ ಹಾಕೋದ್ರಿಂದ ದಾನಪ್ರತಿಯಾಗುತ್ತೆ ಅನ್ನೋದನ್ನ ಪಂಡಿತರು ಹೇಳುತ್ತಾರೆ.

ಇನ್ನು ಮಾಡಿದಂತ ಪಾಪ ಕರ್ಮಗಳನ್ನು ಕಳೆಯಲು ದೇವರ ಮೊರೆ ಹೋಗುತ್ತಾನೆ, ಹಲವು ರೀತಿಯ ಪೂಜೆ ಮಂತ್ರ ಯಜ್ಞ ಯಾಗಾದಿಗಳನ್ನು ಮಾಡಿಸುತ್ತಾನೆ. ಎಲ್ಲ ದಾನಗಳಲ್ಲೂ ಶ್ರೇಷ್ಠವಾದ ದಾನ ಅನ್ನದಾನ ಆದ್ದರಿಂದ ಒಬ್ಬರ ಹೊಟ್ಟೆಗೆ ಅನ್ನವನ್ನು ನಿಡೋದ್ರಿಂದ ಅದೇವರು ನಮ್ಮ ನಮ್ಮ ಪಾಪ ಕರ್ಮಗಳನ್ನು ನಿವಾರಿಸುತ್ತಾನೆ ಅನ್ನೋದನ್ನ ಹೇಳಲಾಗುತ್ತದೆ.

ಮಹಾಭಾರತಾಲ್ಲಿ ಇದರ ಸಲುವಾಗೇ ಒಂದು ಶ್ಲೋಕವನ್ನು ಕಾಣಬಹುದು ಅದರ ಅನುಗುಣವಾಗಿ ಈ ಮೂಲಕ ತಿಳಿಯುವುದಾದರೆ, ಪಂಡಿತರು ಋಷಿಮುನಿಗಳು ಇವರನ್ನು ಕರೆದು ಊಟ ಹಾಕುವುದರಿಂದ ಮಾಡುವಂತ ಕೆಲಸದಲ್ಲಿ ಯಾವುದೇ ಅದೇ ತಡೆ ಇರೋದಿಲ್ಲ ಮಾಡುವಂತ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು.

ಇನ್ನು ಶ್ರಾದ್ಧ ಪಕ್ಷದಲ್ಲಿ ಪಿತೃಗಳಿಗೆ ಊಟ ನೀಡುವುದರಿಂದ ಪಿತೃಗಳಿಗೆ ತೃಪ್ತಿ ಸಿಗುತ್ತದೆ, ಶ್ರದ್ದಾ ಪಕ್ಷದಂದು ಪೂರ್ಣ ಶ್ರದ್ಧಾ ಭಕ್ತಿಯಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸುತ್ತಾರೋ ಅವರ ಕಷ್ಟಗಳೆಲ್ಲಾ ದೂರವಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅಷ್ಟೇ ಅಲ್ದೆ ಮನೆಗೆ ಬರುವಂತ ಅಥಿತಿಗಳಿಗೆ ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದರಿಂದ ಅಂದರೆ ‘ಅತಿಥಿ ದೇವೋ ಭವ ಎಂಬುದಾಗಿ ಹೇಳಲಾಗುತ್ತದೆ ಆದ್ದರಿಂದ ಮನೆಗೆ ಬಂದಿರುವ ಅಥಿತಿಗಳಿಗೆ ಊಟ ಹಾಕಿ ಚನ್ನಾಗಿ ನೋಡಿಕೊಂಡರೆ ಆ ದೇವರು ನಮಗೆ ಒಳ್ಳೆಯ ರೀತಿಯಲ್ಲಿ ಇಟ್ಟಿರುತ್ತಾನೆ ಅನ್ನದ ಕೊರತೆ ಇರೋದಿಲ್ಲ ಧನ ಪ್ರಾಪ್ತಿಯಾಗುವುದು.

ದಿಕ್ಕಿಲ್ಲಿದವರಿಗೆ ಬಡವರಿಗೆ ಭಿಕ್ಷುಕರಿಗೆ ಮನೆಮಠ ಕಳೆದು ಕೊಂಡವರಿಗೆ ಊಟ ಹಾಕೋದ್ರಿಂದ ಭಗವಂತ ಕಷ್ಟಗಳಿಗೆ ಸ್ಪಂದಿಸೋರಿಗೆ ಉತ್ತಮ ರೀತಿಯಲ್ಲಿ ಇಟ್ಟಿರುತ್ತಾನೆ ಹಾಗು ಅವರ ಕೆಲಸ ಕಾರ್ಯಗಳಲ್ಲಿ ಸಫಲತೆಯನ್ನು ನೀಡುತ್ತಾನೆ ಒಟ್ಟಾರೆಯಾಗಿ ಈ ರೀತಿಯ ವ್ಯಕ್ತಿಗಳಿಗೆ ಊಟ ಹಾಕಿ ಸತ್ಕಾರ್ಯ ಮಾಡೋದ್ರಿಂದ ಪಾಪ ಕರ್ಮಗಳು ನಿವಾರಣೆಯಾಗಿ ಧನ ಪ್ರಾಪ್ತಿಯಾಗುವುದು.

By

Leave a Reply

Your email address will not be published. Required fields are marked *