ಓದಿದ್ದು ಬರಿ ಹತ್ತನೇ ಕ್ಲಾಸ್ ತನ್ನ ಕೈ ಚಳಕದಿಂದ ಬೈಕ್ ಪ್ರಿಯರ ಕಣ್ಣು ಹುಬ್ಬೇರುವಂತೆ ಮಾಡಿದ ಕನ್ನಡಿಗ ಇಷ್ಟಕ್ಕೂ ಈ ವ್ಯಕ್ತಿ ಯಾರು ಅನ್ನೋದನ್ನ ಒಮ್ಮೆ ಪರಿಚಿಯಿಸಿಕೊಡುತ್ತೇವೆ ಬನ್ನಿ. ಇವರು ಯಾವುದೇ ಮೆಕಾನಿಕಲ್ ಇಂಜಿನಿಯರ್ ಓದಿಲ್ಲ ಆದ್ರೆ ತನ್ನ ಬುದ್ದಿವಂತಿಕೆಯಿಂದ ಹಾಗೂ ಕೈ ಚಳಕದಿಂದ ಒಂದು ಅದ್ಬುತ ವಿನ್ಯಾಸ ಹಾಗೂ ಉತ್ತಮ ಶೈಲಿಯಲ್ಲಿ ಬೈಕ್ ತಯಾರಿಸುತ್ತಾರೆ ಈ ವ್ಯಕ್ತಿ.
ಹೆಸರು ಪುರುಷೋತ್ತಮ್ ಎಂಬುದಾಗಿ ಚಾಮರಾಜನಗರದ ಚನ್ನಿಪುರಮೋಳೆ ಹೊಸ ಬಡಾವಣೆ ನಿವಾಸಿ ಇವರು ಓದಿರೋದು ಬರಿ ಹತ್ತನೇ ಕ್ಲಾಸ್ ಆದ್ರೆ ದೇಶ ವಿದೇಶದ ಬೈಕ್ ಕಂಪನಿಗಳನ್ನು ನಾಚಿಸುವಂತೆ ಇವರು ಸ್ಟೈಲಿಶ್ ಬೈಕ್ ರೆಡಿ ಮಾಡುತ್ತಾರೆ. ಇನ್ನು ಇವರು ರೆಡಿ ಮಾಡೋ ಬೈಕ್ ಗಳು ಬೈಕ್ ಕ್ರೆಜ್ ಇರೋರಿಗೆ ಸಿಕ್ಕ ಪಟ್ಟೆ ಇಷ್ಟವಾಗುವಂತೆ ಮಾಡುತ್ತದೆ.
ಇನ್ನು ಇವರು ಈ ಬೈಕ್ ಅನ್ನು ಹೇಗೆ ತಯಾರಿಸಿದ್ದಾರೆ ಅನ್ನೋದನ್ನ ನೋಡುವುದಾದರೆ, ತಮ್ಮಲ್ಲಿ ಇದಂತಹ ಹಳೆಯ ಮೋಟಾರ್ ಬೈಕ್ ನ ಇಂಜಿನ್ ಅನ್ನು ಬಳಸಿ ಬಿಡಿ ಭಾಗಗಳನ್ನು ತಂದು ಸುಮಾರು ಆರು ತಿಂಗಳು ಕಿತ್ತು ಜೋಡಿಸಿ ಮಾಡಿ ಹೊಸ ವಿನಿಸದಲ್ಲಿ ಒಂದು ಬೈಕ್ ರೆಡಿ ಮಾಡುವಂತೆ ಆಗಿದೆ. ಹೀಗೆ ಒಂದು ಬೈಕ್ ಅನ್ನು ಕೂಡ ತಯಾರಿಸಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ನೀಡಿ ಸ್ಟೈಲಿಶ್ ಬೈಕ್ ಖರೀದಿ ಮಾಡ್ತೀವಿ ಆದ್ರೆ ಈ ವ್ಯಕ್ತಿ ಕಡಿಮೆ ಖರ್ಚಿನಲ್ಲಿ ಉತ್ತಮ ಬೈಕ್ ರೆಡಿಮಾಡಿದ್ದಾರೆ ನಿಜಕ್ಕೂ ಇವರು ತಯಾರಿಸಿರುವಂತ ಬೈಕ್ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿರೋದಂತು ನಿಜ ಅನ್ನಬಹುದು.