ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ಹೂವು ಯಾವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ. ತುಂಬಾ ಜನರಿಗೆ ದೇವರನ್ನ ನಂಬಿ ಭಕ್ತಿಯಿಂದ ಪೂಜೆ ಮಾಡುವಂತಹ ಜನರಿಗೆ ಯಾವ ದೇವರಿಗೆ ಯಾವ ಯಾವ ರೀತಿಯ ಹೂವುಗಳಿಂದ ಪೂಜೆ ಮಾಡಬೇಕು ಹೇಗೆ ಪೂಜಿಸಬೇಕು ಅನ್ನುವುದರ ಬಗ್ಗೆ ಹಲವಾರು ಗೊಂದಲಗಳು ಇರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ.
ಉದಾಹರಣೆಗೆ ಆಚಾರ್ಯರು ಮೂಲತಃ ಸಿಹಿ ಪ್ರಿಯರು. ಇವರಿಗೆ ಊಟದಲ್ಲಿ ಒಂದು ಐಹಿ ಇರಲೇಬೇಕು ಅಥವಾ ಸಿಹಿಯಾದ ಹಣ್ಣು ಆದರೂ ಇರಬೇಕು. ಊಟದ ಮೊದಲು ಸ್ವಲ್ಪ ಸಿಹಿ ಹಾಗೂ ಊಟದ ನಂತರವೂ ಸ್ವಲ್ಪ ಸಿಹಿ ಕೊಟ್ಟರೆ ಆಚಾರ್ಯರು ಸಂತೃಪ್ತರಾಗಿ ಮನತುಂಬಿ ಹರಸಿ ಆಶೀರ್ವಾದ ಮಾಡುತ್ತಾರೆ. ಎಲ್ಲರಿಗೂ ಅವರವರಿಗೆ ಒಂದೊಂದು ರೀತಿಯ ತಿಂಡಿ ತಿನಿಸುಗಳು ವಸ್ತುಗಳು ಇಷ್ಟ ಆಗುವ ಹಾಗೆಯೇ ಲಕ್ಷ್ಮೀ ದೇವಿಯೂ ಕೂಡಾ ತುಂಬಾ ಇಷ್ಟ ಆಗುವ ಹೂವು ಇದೆ. ಈ ಒಂದು ಪುಷ್ಪವನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿ ಬೇಗ ಸಂಪ್ರೀತಳಾಗುತ್ತಾಳೆ. ಅದು ಯಾವ ಪುಷ್ಪ ಅಂತ ಯೋಚನೆ ಮಾಡ್ತೀರಾ? ಅದು ಬೇರೆ ಯಾವುದೂ ಅಲ್ಲ, ಕಮಲದ ಹೂವು.
ಶ್ವೇತ ಕಮಲದ ಪುಷ್ಪವನ್ನು ಲಕ್ಷ್ಮೀ ದೇವರಿಗೆ ಸಮರ್ಪಣೆ ಮಾಡಿದರೆ, ತುಂಬಾ ಸಂತುಷ್ಟಗೊಳ್ಳುತ್ತಾಳೆ. ಲಕ್ಷ್ಮೀ ದೇವಿ ವರ ಪೂಜಿತೆ. ಶಿವನಿಂದಲೇ ಮಹಾಲಕ್ಷ್ಮಿ ಅಮ್ಮನವರಿಗೆ ಕಮಲದ ಹೂವು.. ಸಹಸ್ರ ಕಮಲದ ಹೂವನ್ನು ಇಟ್ಟು ಯಾರು ಪೂಜೆ ಮಾಡುತ್ತಾರೋ ಅವರು ಸಹಸ್ರ ಕೋಟಿಗೆ ಬದುಕುತ್ತಾರೆ. ಹಾಗಾಗಿಯೇ ಕೆಲವು ಶ್ರೀಮಂತರು ಲಕ್ಷ್ಮೀ ದೇವಿಗೆ ಬಂಗಾರದ ಕಮಲದ ಹೂವನ್ನು ಮಾಡಿಸಿ ಸಮರ್ಪಿಸುತ್ತಾರೆ. ಕಮಲದ ಹೂವಿನ ಹಾರವನ್ನೇ ಮಾಡಿಸಿಯೂ ಸಮರ್ಪಿಸುತ್ತಾರೆ. ಅಂತಹ ಶಕ್ತಿ ನಮಗೆ ಇರುವುದಿಲ್ಲ. ಇಡೀ ಈ ವಿಶ್ವವೇ ಭಾಗವಂತನದ್ದೇ ಆಗಿರುವಾಗ ಭಗವಂತನನ್ನು ಬಂಗಾರದಿಂದ ಆಗಲಿ ಅಥವಾ ಹಣದಿಂದ ಆಗಲೀ ಅಳೆಯುವ ಶಕ್ತಿ ಅಥವಾ ತೃಪ್ತಿ ಪಡಿಸಲು ನಮಗೆ ಆಗುವುದಿಲ್ಲ. ಅದು ತಪ್ಪು ಕೂಡ. ಹಾಗಾಗಿ ಕೇವಲ ಭಕ್ತಿ ಭಗವಂತನನ್ನು ಒಲಿಸಿಕೊಳ್ಳಲು ಇರುವ ಮಾರ್ಗ. ಅದಕ್ಕಾಗಿ ಭಕ್ತಿಯಿಂದ ಐದು ಕಮಲದ ಹೂವನ್ನು ಶುಕ್ರವಾರದಂದು ಲಕ್ಷ್ಮೀ ಪೂಜೆ ಮಾಡುವ ಸಂದರ್ಭದಲ್ಲಿ ಮಹಾಲಕ್ಷ್ಮಿಗೆ ಸಮರ್ಪಣೆ ಮಾಡಬೇಕು.
ಸಂತೃಪ್ತಳಾಗಿ ಲಕ್ಷ್ಮೀ ದೇವಿ ಕಮಲದ ಹೂವನ್ನು ದೇವಿಗೆ ಸಮರ್ಪಿಸಿದರೆ ಲಕ್ಷ್ಮಿ ದೇವಿಯಲ್ಲಿ ಬರುವ ಗಾಂಭೀರ್ಯ ನೂರು ಪುಷ್ಪವನ್ನು ಇಟ್ಟರೂ ಅಥವಾ ನೂರು ನೈವೇದ್ಯವನ್ನು ಮಾಡಿ ಇಟ್ಟರೂ ಸಹ ಐದೇ ಐದು ಕಮಲದ ಹೂವನ್ನು ಇಟ್ಟರೆ ಅದರ ತೂಕವೇ ಬೇರೆ ಆಗುತ್ತದೆ. ಮುಖ್ಯವಾಗಿ ನೆನಪಲ್ಲಿ ಇಟ್ಟುಕೊಳ್ಳಬೇಕಾದ ವಿಷಯ ಎಂದರೆ, ನೂರಾರು ಬಗೆ ಬಗೆಯ ನೈವೇದ್ಯವನ್ನು ಮಾಡಿ ಅರ್ಪಿಸುವ ಬದಲಿ ಕಮಲದ ಹೂವನ್ನು ಮಾತ್ರ ಇಡುವುದರಿಂದ ಲಕ್ಷ್ಮೀ ದೇವಿ ಸಾಕಷ್ಟು ಸಂತೃಪ್ತಿ ಹೊಂದುತ್ತಾಳೆ. ಲಕ್ಷ್ಮಿ ದೇವಿಗೆ ಕಮಲದ ಹೂವು ಬಹಳ ಇಷ್ಟ ಆಗಿರುವುದರಿಂದ ಮಹಾ ವಿಷ್ಣು ಸಮೇತವಾಗಿ ಪದ್ಮಾವತಿ ಕ್ಷೇತ್ರದಲ್ಲಿ ಬಹು ವಿಶೇಷವಾಗಿ ಕಮಲದ ಪುಷ್ಪಗಳಿಂದಲೇ ಅಮ್ಮನವರಿಗೆ ಸೇವೆಯನ್ನು ಮಾಡಬೇಕು. ಕಮಲದ ಹೂವು ಬಹಳ ಪ್ರಿಯ ಆಗಿರುವುದರಿಂದ ಲಕ್ಷ್ಮೀ ದೇವಿಗೆ ಕಮಲದ ಹೂವನ್ನು ಅರ್ಪಿಸುವುದರಿಂದ ಸಂತುಷ್ಟಗೊಳ್ಳುತ್ತಾಳೆ ಹಾಗೆ ನಿಮ್ಮ ಕೋರಿಕೆಗಳನ್ನು ಸಹ ಪೂರೈಸುತ್ತಾಳೆ.