ಅಂಜೂರ ಮಿರಸಿ ಕುಟುಂಬಕ್ಕೆ ಸೇರಿದ ಒಂದು ಮರ ಆಗಿರುತ್ತದೆ. ಇದರ ಹಣ್ಣುಗಳನ್ನು ತಿನ್ನಲು ಬಳಸುತ್ತಾರೆ. ಪೈಕಸ್ ಕ್ಯಾರಿಕ ಅನ್ನುವುದ ಅಂಜೂರ ಹಣ್ಣಿನ ವೈಜ್ಞಾನಿಕ ಹೆಸರು. ಈ ಹಣ್ಣಿನಲ್ಲಿ ಕಬ್ಬಿಣ, ವಿಟಮಿನ್ ಎ, ಬಿ, ಸಿ ಮತ್ತು ಡಿ ಅಂಶಗಳು ಹೇರಳಾವಾಗಿ ದೊರೆಯುತ್ತವೆ. ಅಂಜೂರ ಹಣ್ಣಿನಲ್ಲಿ ಅನೇಕ ಅಗತ್ಯ ಇರುವ ಪೋಷಕಾಂಶಗಳು ಹೇರಳವಾಗಿ ಇರುತ್ತದೆ. ಅಂಜೂರದ ಹಣ್ಣನ್ನು ದಿನಕ್ಕೆ ಎರಡು ಹಣ್ಣನ್ನು ತಿಂದರೆ ಸಾಕು ನಮ್ಮ ದೇಹಕ್ಕೆ ಅಗತ್ಯ ಇರುವ ಹಲವರು ಪೋಷಕಾಂಶಗಳು ಸಿಗುತ್ತವೆ. ಮಕ್ಕಳನ್ನು ಪಡೆಯಬೇಕು ಎಂದು ಬಯಸುವವರು ಪ್ರತೀ ನಿತ್ಯ ಅಂಜೂರದ ಹಣ್ಣನ್ನು ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ಇಷ್ಟೆಲ್ಲ ನಮ್ಮ ದೇಹಕ್ಕೆ ಲಾಭ ಇರುವ ಅಂಜೂರದ ಹಣ್ಣಿನ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಅಂಜೂರದ ಹಣ್ಣಿನಲ್ಲಿ ಕಬ್ಬಿಣ ಮತ್ತು ಸಕ್ಕರೆಯ ಅಂಶ ಹೇರಳಾವಾಗಿ ಇರುವುದರಿಂದ ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಕಬ್ಬಿಣ ಮತ್ತು ತಾಮ್ರದ ಅಂಶ ಇತರೆ ಹಣ್ಣುಗಳಿಗಿಂತ ಅಂಜೂರದ ಹಣ್ಣಿನಲ್ಲಿ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಸತುವಿನ ಅಂಶ ಸ್ವಲ್ಪ ಇರತ್ತೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುತ್ತದೆ. ವಿಟಮಿನ್ ಬಿ ಮತ್ತು ವಿಟಮಿನ್ ಡಿ ಅಂಶ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಇದೊಂದು ಔಷಧೀಯ ವಸ್ತುವೂ ಹೌದು. ಅಂಜೂರದ ಹಣ್ಣಿನಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು. 3ಈ ಹಣ್ಣು ಮೂತ್ರಸ್ರಾವಕ್ಕೆ ಉತ್ತೇಜನಕಾರಿ ಆಗಿ ಹೆಚ್ಚು ಕಾಲ ಬಳಸುವುದರಿಂದ ಆಹಾರದ ಕೊರತೆ ಮತ್ತು ರಕ್ತ ಹೀನತೆಯನ್ನು ಉಂಟು ಮಾಡುವುದನ್ನು ತಪ್ಪಿಸುತ್ತದೆ.
ಅಂಜೂರದ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಾರಿನ ಅಂಶ ಹೆಚ್ಚಾಗಿ ಇರುವ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ದೇಹದ ಜೀರ್ಣ ವ್ಯವಸ್ಥೆ ಸರಿಯಾಗಿ ಆಗುತ್ತದೆ. ಚಿಕ್ಕ ಮಕ್ಕಳಿಗೆ ಮತ್ತು ತುಂಬಾ ಜನರಿಗೆ ಮಲಬದ್ಧತೆಯ ಸಮಸ್ಯೆಗೆ ದಿನಕ್ಕೆ ಎರಡು ಬಾರಿ ಅಂಜೂರದ ಹಣ್ಣನ್ನು ಸೇವಿಸಲು ಕೊಡುವುದರಿಂದ ಈ ಸಮಸ್ಯೆಯಿಂದ ನಿವಾರಿಸಿಕೊಳ್ಳಬಹುದು. ಅಂಜೂರದಲ್ಲಿ ಇರುವ ಮೆಗ್ನಿಶಿಯಂ, ಮೆಗ್ನಾಸಿಸ್, ಜಿಂಕ್ ಅಂತಹ ಅಂಶಗಳು ಸಂತಾನ ಸಫಲತೆಯನ್ನು ಹೆಚ್ಚಿಸಲು ಸಹಕಾರಿ ಆಗಿರುತ್ತದೆ. ಇತ್ತೀಚಿಗೆ ಸಾಮಾನ್ಯವಾಗಿ ಕಂಡುಬರುವ ರಕ್ತದ ಒತ್ತಡ ಸಮಸ್ಯೆಗೆ ಅಂಜೂರದ ಹಣ್ಣು ಒಂದು ಉತ್ತಮ ಔಷಧ.
ಈ ಹಣ್ಣು ಹಸಿಯಾಗಿದ್ದರೂ ಅಥವಾ ಒಣಗಿದ್ದರೂ ಇದನ್ನು ತಿನ್ನುವುದರಿಂದ ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸಬಹುದು. ಇದರಲ್ಲಿ ಹೇರಳವಾಗಿ ಇರುವಂತಹ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ ಹಾಗೆ ಚಿಕ್ಕ ವಯಸ್ಸಿನಿಂದಲೂ ಅಂಜೂರದ ಹಣ್ಣನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹದಲ್ಲೂ ರಕ್ತ ಚೆನ್ನಾಗಿ ಇರುತ್ತದೆ. ಆರೋಗ್ಯಕರವಾದ ಶಾರೀರಿಕ ಬೆಳವಣಿಗೆ ಕೂಡ ಸಿಗುತ್ತದೆ. ಮಹಿಳೆಯರು ಇದನ್ನು ದಿನ ನಿತ್ಯ ತಿನ್ನುವುದರಿಂದ ರಕ್ತ ಹೀನತೆಯನ್ನು ನಿವಾರಿಸಿಕೊಳ್ಳಬಹುದು. ಅಂಜೂರದ ಹಣ್ಣನ್ನು ತಿಂದರೆ ದೇಹದಲ್ಲಿ ಅನಗತ್ಯವಾದ ಕೊಬ್ಬಿನ ಅಂಶ ಸೇರುವುದಿಲ್ಲ ಇದರ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಿಕೊಳ್ಳಬಯಸುವವರು ಪ್ರತೀ ನಿತ್ಯ ಈ ಹಣ್ಣನ್ನು ಎರಡು ಹಣ್ಣನ್ನು ತಿನ್ನಬೇಕು. ಊಟಕ್ಕೆ ಮೊದಲೇ ಒಂದು ಲೋಟ ಅಂಜೂರದ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಬೇಗನೆ ಹೊಟ್ಟೆ ತುಂಬಿದ ಹಾಗೆಯೇ ಅನಿಸುತ್ತದೆ ಹಾಗೆ ಬೇಗ ಮತ್ತೆ ಮತ್ತೆ ಹಸಿವು ಕೂಡಾ ಆಗದಂತೆ ನೋಡಿಕೊಳ್ಳುತ್ತದೆ. ಈ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇವಿಷ್ಟು ಅಂಜೂರದ ಹಣ್ಣಿನ ಪ್ರಯೋಜನಗಳು