ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಚಿಂತೆ ಎಂಬುದು ಮಾಮೂಲು, ಜಗತ್ತಿನಲ್ಲಿ ಎಲ್ಲರ ಮನೆಯ ಅಂಗಳದಲ್ಲಿಯೂ ಸಹ ಚಿಂತೆ ಎನ್ನುವಂತಹ ಕಸ ಬಿದ್ದೆ ಬೀಳುತ್ತದೆ ನಿಮ್ಮ ಜೀವನದಲ್ಲಿ ಬಂದ ಚಿಂತೆಗಳು ಹಾಗೆ ಇರುವುದಿಲ್ಲ ನಿಮ್ಮನ್ನು ಗೊಂದಲಗಳಿಗೆ ಒಳಪಡಿಸುತ್ತದೆ ಇದನ್ನೇ ಜೀವನ ಎಂದು ಕರೆಯುತ್ತಾರೆ

ಇತಿಹಾಸದ (History) ಪುಟವನ್ನ ತಿರುವಿ ನೋಡಿದರೆ ಜೀವನವೆಂದರೆ ಜನನ ಅಂದರೆ ಭೂಮಿಗೆ ಬರುವುದು ತಮಗೆ ತಿಳಿದವನ್ನು ಹಂಚುವುದು ಮರಣ ಹೊಂದುವುದು ಇಷ್ಟೇ ಆಗಿದೆ ಕಾಲ ಬದಲಾದಂತೆ ಪ್ರತಿಯೊಬ್ಬ ಮನುಷ್ಯನ ಜೀವನಶೈಲಿಯು ಬದಲಾಗುತ್ತದೆ ಶ್ರೀಮಂತರು (Rich And Poor) ಬಡವರಾಗುತ್ತಾರೆ ಬಡವರು ಶ್ರೀಮಂತರಾಗುತ್ತಾರೆ ಕಾಲವು ಎಂದಿಗೂ ಸ್ಥಿರತೆಯಿಂದ ಇರುವುದಿಲ್ಲ

ನಾವು ಎಷ್ಟೇ ನಿಯತ್ತಿನಿಂದ ಬದುಕಿದರು ಸ್ನೇಹ ಭಾವದಿಂದ ಬರರನ್ನು ಕಂಡರೂ ಸಹ ಶಾಶ್ವತವಾಗಿ ಭೂಮಿಯ ಮೇಲೆ ಉಳಿಯಲು ಸಾಧ್ಯವಿಲ್ಲ ಯಾವುದು ಶಾಶ್ವತವಲ್ಲ ಎಂದ ಮೇಲೆ ಮಾನವನಿಗೆ ಚಿಂತೆ ಮಾಡುವ ಅವಶ್ಯಕತೆ ಆದರೂ ಏನಿರುತ್ತದೆ ಇರುವುದನ್ನ ಅಷ್ಟೇ ಸಮಯದಲ್ಲಿ ಅನುಭವಿಸಬೇಕು ಅದು ಸಮಯ ಕಳೆದ ನಂತರ ನಮ್ಮಿಂದ ದೂರವಾಗುತ್ತದೆ ಎಂದು ಅದರ ಬಗ್ಗೆ ಚಿಂತಿಸಬಾರದು ಹೀಗೆ ಚಿಂತೆ ಮಾಡಿದರೆ ಅದು ದುಃಖಕ್ಕೆ ಕಾರಣವಾಗುತ್ತದೆ

ಇದನ್ನೂ ಓದಿ..ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸ್ಪೆಷಲ್ ಗಿಫ್ಟ್ ಜೊತೆಗೆ 1 ಸಾವಿರ ರೂಪಾಯಿ

ವಾಲ್ಮೀಕಿ ಅವರ ರಾಮಾಯಣದಲ್ಲಿ ಬರುವ ರಾಮ ಸೀತೆಯರ ಸಂಬಂಧ ಎಷ್ಟೊಂದು ಅನ್ಯೋನ್ಯ ವಾಗಿತ್ತೆಂದರೆ ಸೌಂದರ್ಯ ಬುದ್ಧಿವಂತಿಕೆ ಸಾತ್ವಿಕತೆ ಗುಣಶೀಲತೆ ಇಂತಹ ಮೌಲ್ಯಯುತ ಗುಣಗಳು ಆ ದಂಪತಿಗಳಲ್ಲಿ ಇದ್ದವು ಆದರೆ ಅವರಿಗೂ ಸಂಕಷ್ಟ ತಪ್ಪಲಿಲ್ಲ ಅವರು ಜೊತೆಯಾಗಿರಲು ವಿಧಿ ಬಿಡಲಿಲ್ಲ 14 ವರ್ಷಗಳ ವನವಾಸ ಪ್ರಾಪ್ತಿಯಾಯಿತು ವನವಾಸದಲ್ಲೂ ಪತಿಯ ಜೊತೆಗಿದ್ದ ಸೀತಾದೇವಿ ವನವಾಸ ಮುಗಿದ ನಂತರವೂ ಸುಖವನ್ನು ಅನುಭವಿಸಲು ಅವಕಾಶ ಸಿಗಲಿಲ್ಲ ಹೀಗೆ ಜೀವನದಲ್ಲಿ ಯಾವುದು ಶಾಶ್ವತವಾಗಿರುವುದಿಲ್ಲ

ಸುಖವಾಗಲಿ ದುಃಖವಾಗಲಿ ಎಲ್ಲವೂ ಕಾಲಕ್ಕೆ ಅನುಗುಣವಾಗಿ ಬದಲಾಗುತ್ತದೆ ಹೀಗೆ ಆಗುತ್ತದೆ ಎಂದು ಚಿಂತೆ ಮಾಡುವ ಬದಲು ಏನಾದರೂ ಆಗಲಿ ಎಂದು ಯೋಚಿಸಿದರೆ ಒತ್ತಡ ಕಡಿಮೆಯಾಗುತ್ತದೆ ಹಾಗೆಂದು ಚಿಂತೆ ಎಂಬುದು ಇಂದು ಬಂದು ನಾಳೆ ಹೋಗುವುದಲ್ಲ ಇದು ಜೀವನ ಪರ್ಯಂತ ಮಾನವನ ಜೊತೆಯಲ್ಲಿಯೇ ಇರುತ್ತದೆ ಕೆಲವೊಮ್ಮೆ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆಗಬಹುದಷ್ಟೇ ನಮಗೆ ಹೋಲಿಸಿದರೆ ಭಿಕ್ಷುಕನಿಗೆ ಚಿಂತೆ ಅತ್ಯಂತ ಕಡಿಮೆ

ಆತನ ಸ್ವತ್ತು ಕೇವಲ ಆತನ ಭಿಕ್ಷಾ ಪಾತ್ರ ಒಂದೇ ಆಗಿರುತ್ತದೆ ಅದರ ಬಗ್ಗೆ ಎಷ್ಟೇ ಆತ ಚಿಂತಿಸಬಲ್ಲ ಆದರೆ ನಮ್ಮ ಜೀವನದಲ್ಲಿ ಮನೆಯ ಚಿಂತೆ ಸಾಮಾಜಿಕ ಚಿಂತೆ ಕುಟುಂಬದ ಬಗ್ಗೆ ಚಿಂತೆ, ಪರರ ಬಗ್ಗೆ ಚಿಂತೆ ಹೇಗೆ ಅನೇಕ ಚಿಂತೆಗಳು ತಲೆಯಲ್ಲಿ ಮನೆ ಮಾಡಿರುತ್ತದೆ ನಮ್ಮಿಂದ ಹೋದ ವಸ್ತುಗಳಿಗಾಗಲಿ ಅಥವಾ ಇನ್ನೂ ಬರುವ ವಸ್ತುಗಳಿಗಾಗಿ ಕಾಯುವುದಕ್ಕಾಗಲಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಹೀಗೆ ಯಾರೂ ಚಿಂತೆಯನ್ನು ಮಾಡುವುದಿಲ್ಲ ಅವರೇ ಬುದ್ಧಿವಂತರು ಚಿಂತೆ ಇರಬೇಕು

ಇದನ್ನೋ ಓದಿ..ಮಾತನಾಡುವ ಆಂಜನೇಯ ನಿಮ್ಮ ಕಿವಿಗೆ ಕೇಳಿಸುತ್ತೆ, ಆಂಜನೇಯ ಮಾತನಾಡುವ ಶಬ್ದಗಳು ಅಷ್ಟಕ್ಕೂ ಇದು ಇರೋದೆಲ್ಲಿ ಗೊತ್ತಾ

ಸತ್ಯವನ್ನ ಅರಿತುಕೊಳ್ಳುವ ಚಿಂತೆ ಸತ್ಯವನ್ನು ಅನುಭವಿಸುವ ಚಿಂತೆ ಇವು ಬಹಳ ಮಹತ್ವವಾದದು ಜಗತ್ತಿನ ವಸ್ತುಗಳ ಬಗ್ಗೆ ನಾವು ಇಷ್ಟೇ ಚಿಂತೆ ಮಾಡಿದರು ಅದು ವ್ಯರ್ಥ ಪ್ರತಿಯೊಬ್ಬ ವ್ಯಕ್ತಿಯ ಬಯಕೆಯೂ ಬೇರೆ ಬೇರೆಯಾಗಿರುತ್ತದೆ ಪ್ರತಿಯೊಬ್ಬ ವ್ಯಕ್ತಿಯ ಆಲೋಚನಾ ಶಕ್ತಿಯು ಬೇರೆ ಬೇರೆಯಾಗಿರುತ್ತದೆ ಆದ್ದರಿಂದ ವಿಧಿಯು ಯಾರ ಮಾತನ್ನು ಕೇಳುವುದಿಲ್ಲ ದೈವ ಇಚ್ಛೆಯಂತೆ ಆಗುತ್ತದೆ ಇಲ್ಲಿ ಮಾನವನ ಪಾತ್ರ ಏನು ಇಲ್ಲ ಈ ಜಗತ್ತಿನಲ್ಲಿ ಮಾನವನ ಪಾತ್ರ ಅತ್ಯಂತ ಸಾಮಾನ್ಯವಾದಾಗಿದೆ ಮಾನವನಿಗೆ ಇಲ್ಲಿ ಯಾವ ಸ್ವಾತಂತ್ರ್ಯವೂ ಇಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!