Actor Vishnuvardhan ಸಾಹಸಸಿಂಹ ವಿಷ್ಣುವರ್ಧನ್ ಅವರು ತಮ್ಮ ಅಭಿಮಾನಿಗಳನ್ನು ಮಕ್ಕಳಂತೆ ನೋಡುತ್ತಿದ್ದರು. (Vishnuvardhan) ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ದಿನ ಅಭಿಮಾನಿಗಳು ಕೇಕ್ ಮತ್ತು ಹಾರ ತೆಗೆದುಕೊಂಡು ಬಂದಾಗ ಅಭಿಮಾನಿಗಳನ್ನು ಪಕ್ಕಕ್ಕೆ ಕರೆದು ಇವೆಲ್ಲವನ್ನು ನನಗೆ ತರುವುದರ ಬದಲು ನಿಮ್ಮ ಅಪ್ಪ ಅಮ್ಮನಿಗೆ ಬಟ್ಟೆಯನ್ನು ನೀಡಿದ್ದರೆ ಅವರು ಎಷ್ಟು ಖುಷಿ ಪಡುತ್ತಿದ್ದರು ಗೊತ್ತೇ ಎಂದು ಹೇಳಿ ಅವರ ಜೊತೆ ಫೋಟೋವನ್ನು ತೆಗೆಸಿಕೊಂಡು ನಂತರ ಅಭಿಮಾನಿಗಳನ್ನು ವಿಷ್ಣುವರ್ಧನ್ ಕಳುಹಿಸುತ್ತಿದ್ದರು.
ಒಬ್ಬ ವ್ಯಕ್ತಿ ಯಾವಾಗಲೂ ಮಧ್ಯಪಾನವನ್ನು ಮಾಡಿಕೊಂಡು ಯಾವಾಗಲೂ ವಿಷ್ಣುವರ್ಧನ್ (Vishnuvardhan) ಅವರು ಮನೆಯಿಂದ ಹೋಗಬೇಕಾದರೆ ಅವರ ಮನೆ ಮುಂದೆ ಬರುತ್ತಿದ್ದನು ಹಾಗೂ ವಿಷ್ಣುವರ್ಧನ್ ಅವರಿಗೆ ವಿಶ್ ಮಾಡಿ ಹೋಗುತ್ತಿದ್ದನು. ಮೊದಲಿಗೆ ಇದನ್ನು ನೋಡಿ ವಿಷ್ಣುವರ್ಧನ್ ಅವರು ಸುಮ್ಮನಾಗುತ್ತಾರೆ, ಆದರೆ ಒಂದು ವಾರಗಳ ಕಾಲ ಪ್ರತೀ ದಿನ ಇದೇ ರೀತಿ ಆ ವ್ಯಕ್ತಿ ಮಾಡುತ್ತಿದ್ದಾಗ ಒಂದು ದಿನ ಕಾರನ್ನು ನಿಲ್ಲಿಸಿ ಆ ವ್ಯಕ್ತಿಯನ್ನು ಕರೆದು ನೀನು ಯಾರು ಎಂದು ವಿಚಾರಿಸುತ್ತಾರೆ.
ಆಗ ವಿಷ್ಣುವರ್ಧನ್ ಅವರು ನೀನು ಏನು ಕೆಲಸ ಮಾಡುತ್ತೀಯಾ ಎಂದು ಕೇಳಿದಾಗ, ಆ ವ್ಯಕ್ತಿ ನಿಮ್ಮನ್ನು ಪ್ರತಿದಿನ ನೋಡುತ್ತೇನೆ ಎಂದು ಹೇಳುತ್ತಾನೆ, ಆಗ ವಿಷ್ಣುವರ್ಧನ್ ಅವರು ಅದನ್ನು ಬಿಟ್ಟು ಜೀವನ ನಡೆಸುವುದಕ್ಕೆ ಏನು ಮಾಡುತ್ತೀಯಾ ಎಂದು ಕೇಳಿದಾಗ ,ಏನು ಇಲ್ಲ ಎಂದು ಹೇಳುತ್ತಾನೆ. ಆಗ ವಿಷ್ಣುವರ್ಧನ್ ಅವರು ನಿನ್ನ ಮುಖದಲ್ಲಿ ಒಂದು ತೇಜಸ್ಸು ಕಾಣುತ್ತಿದೆ, ಆದ್ದರಿಂದ ಕುಡಿಯುವುದನ್ನು ಬಿಟ್ಟು ಜೀವನ ನಡೆಸುವುದಕ್ಕೆ ಯಾವುದಾದರೂ ಕೆಲಸವನ್ನು ಮಾಡು ಎಂದು ಬುದ್ಧಿ ಮಾತನ್ನು ಹೇಳುತ್ತಾರೆ.
ಇದಾದ ನಂತರ ವಿಷ್ಣುವರ್ಧನ್ ಅವರು ಆ ವ್ಯಕ್ತಿಯಿಂದ ಇನ್ನು ಮುಂದೆ ನೀನು ಕುಡಿಯಬಾರದು ಎಂದು ಭಾಷೆಯನ್ನು ಸಹ ತೆಗೆದುಕೊಳ್ಳುತ್ತಾರೆ. ಈ ಘಟನೆ ನಡೆದ ನಂತರ ಆ ವ್ಯಕ್ತಿ ವಿಷ್ಣುವರ್ಧನ್ ಅವರಿಗೆ ಕೊಟ್ಟ ಮಾತಿನಂತೆ ಕುಡಿಯುವುದನ್ನು ನಿಲ್ಲಿಸಿ ಒಂದು ಸಣ್ಣ ಅಂಗಡಿಯನ್ನು ತೆರೆಯುತ್ತಾನೆ. ಈಗ ಅಂಗಡಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಿ ಆ ಹಣದಲ್ಲಿ ಸ್ವಲ್ಪ ಹಣವನ್ನು ವಿಷ್ಣುವರ್ಧನ್ ಅವರ ಹೆಸರಿನಲ್ಲಿ ದಾನ, ಧರ್ಮವನ್ನು ಕೂಡ ಮಾಡುತ್ತಿದ್ದಾನೆ.
ಆ ವ್ಯಕ್ತಿ ಹಣವನ್ನು ಸಂಪಾದನೆ ಮಾಡಲು ಶುರು ಮಾಡಿದ ಮೇಲೆ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ನೀವು ಅಂದು ಹೇಳಿದ್ದರಿಂದ ನಾನು ಈಗ ಈ ರೀತಿ ಬದಲಾಗಲು ಸಾಧ್ಯವಾಯಿತು ಎಂದು ಹೇಳಿದಾಗ, ವಿಷ್ಣುವರ್ಧನ್ ಅವರು ಅಂದು ನಿನ್ನ ಮುಖದಲ್ಲಿ ತೇಜಸ್ಸು ಕಾಣುತ್ತಿತ್ತು, ಅದಕ್ಕೆ ನಾನು ನಿನಗೆ ಬುದ್ಧಿ ಮಾತನ್ನು ಹೇಳಿದೆ, ಜೀವನದಲ್ಲಿ ಇನ್ನು ಮುಂದೆ ಚೆನ್ನಾಗಿ ಇರು ಎಂದು ಹೇಳಿ ಕಳುಹಿಸುತ್ತಾರೆ.
ಇನ್ನು ಇನ್ನೊಬ್ಬ ವ್ಯಕ್ತಿ ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾವನ್ನು ನೋಡಿ ಉಪ್ಪಿನಕಾಯಿ ಬಿಸಿನೆಸ್ ಶುರು ಮಾಡಿ ವಿಷ್ಣುವರ್ಧನ್ ಅವರಿಂದಲೇ ಅಂಗಡಿಯ ಉದ್ಘಾಟನೆಯನ್ನು ಮಾಡಿಸಿ ಇಂದು ಉಪ್ಪಿನಕಾಯಿ ಬಿಸಿನೆಸ್ ಅಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ವಿಷ್ಣುವರ್ಧನ್ ಇದೇ ರೀತಿ ತಮ್ಮ ಅಭಿಮಾನಿಗಳಿಗೆ ಹಲವಾರು ರೀತಿಯಲ್ಲಿ ಉತ್ತೇಜನ ನೀಡುತ್ತಿದ್ದರು ಎಂದರೆ ತಪ್ಪಾಗಲಾರದು.