ಈ ಒಂದು ಜಾಗದಲ್ಲಿ ತಪ್ಪಿತಸ್ಥರನ್ನು ಮೇಲಿನಿಂದ ಕೆಳಗೆ ತಳ್ಳಿ ಸಾಯಿಸಲಾಗುತ್ತಿತ್ತು. ಈ ಬೆಟ್ಟದ ಸೂರ್ಯೋದಯ ಅತ್ಯಂತ ಅದ್ಭುತ ಹಾಗೂ ಮನೋಹರವಾಗಿ ಇರತ್ತೆ. ಈ ಬೆಟ್ಟ ಬೆಂಗಳೂರಿನವರಿಗೆ ಅಂತೂ ವೀಕೆಂಡ್ ಅಡ್ಡ ವೇ ಆಗಿ ಹೋಗಿದೆ. ಇಷ್ಟೆಲ್ಲ ಹೇಳ್ತಾ ಇದ್ದರೆ ಅದು ಯಾವ ಬೆಟ್ಟ ಅಂತ ಯೋಚನೆ ಮಾಡ್ತಾ ಇದ್ದೀರಾ? ಅದೇ ಅದ್ಭುತಗಳ ಅದ್ಭುತ ನಂದಿ ಬೆಟ್ಟ. ನಂದಿ ಬೆಟ್ಟ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸುಮಾರಾಗಿ ಎಲ್ಲರೂ ಕೂಡ ಹೋಗಿರ್ತೀರ ಇನ್ನೂ ಕೆಲವು ಜನರು ಹೊಗದೆಯು ಇರಬಹುದು. ಅಂತವರಿಗಾಗಿ ಇಲ್ಲಿದೆ ನಂದಿ ಬೆಟ್ಟದ ಬಗ್ಗೆ ಪುಟ್ಟ ಮಾಹಿತಿ.
ನಂದಿ ಬೆಟ್ಟ ಕರ್ನಾಟ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೆ. ನಂದಿ ಬೆಟ್ಟ ಅಥವಾ ನಂದಿ ದುರ್ಗ ಅಂತ ಕರೆಯಲ್ಪಡುವ ಈ ಬೆಟ್ಟ ಒಂದು ಪುರಾತನ ಕಾಲದ ಕೋಟೆ ಮತ್ತು ಅತ್ಯುತ್ತಮ ಪರ್ವತ ಶ್ರೇಣಿ ಆಗಿದೆ. ನಂದಿ ಬೆಟ್ಟ ಬೆಂಗಹರಿನ ಜನರಿಗೆ ಅಂತೂ ವಾರದ ಅಂತ್ಯದ ರಜಾ ದಿನಗಳ ತಾಣವೇ ಆಗಿದೆ. ಈ ಗಗನ ಚುಂಬಿ ಶಿಖರ ಅಂದರೆ ನಂದಿ ಬೆಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 4851 ಅಡಿ ಅಂದರೆ, 1478 ಮೀಟರ್ ಎತ್ತರದಲ್ಲಿ ಇದೆ. ನಂದಿ ಬೆಟ್ಟ ಪೆನ್ನರ್, ಪಾಲಾರ್ ಮತ್ತು ಅರ್ಕಾವತಿ ನದಿಗಳ ಮೂಲ ಆಗಿದೆ. ನಂದಿ ಬೆಟ್ಟ ದ ಹಿನ್ನೆಲೆಯು ಹಲವಾರು ಸ್ವಾರಸ್ಯಕರ ಹಿನ್ನೆಲೆಯನ್ನು ಒಳಗೊಂಡಿದೆ. ಚೋಳರ ಆಳ್ವಿಕೆಯ ಕಾಲದಲ್ಲಿ ಇದನ್ನ ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು. ಇನ್ನೊಂದು ದಂತ ಕಥೆಯ ಪ್ರಕಾರ ಯೋಗಿ ನಂದೀಶ್ವರರು ಇಲ್ಲಿ ಕುಳಿತು ತಪಸ್ಸು ಮಾಡಿದ್ದರಿಂದ ಇದನ್ನು ನಂದಿ ಬೆಟ್ಟ ಎಂದು ಕರೆಯಾಲಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿರುವ 1300 ವರ್ಷಗಳಷ್ಟು ಹಳೆಯದಾದ ದ್ರಾವಿಡ ಶೈಲಿಯ ನಂದಿ ದೇವಸ್ಥಾನದಿಂದ ಇದಕ್ಕೆ ಈ ಹೆಸರು ಬಂದಿರಬಹುದು ಎಂದು ಇನ್ನೊಂದು ಕಥೆ ಹೇಳುತ್ತದೆ.
ಈ ಬೆಟ್ಟವನ್ನು ಕೆಲವೊಮ್ಮೆ ನಂದಿ ದುರ್ಗ ಎಂದೂ ಸಹ ಕರೆಯಲಾಗುತ್ತದೆ. ಏಕೆಂದರೆ ಹಿಂದೆ ಮೈಸೂರು ರಾಜನಾಗಿದ್ದ ಟಿಪ್ಪು ಸುಲ್ತಾನನು ಗಂಗರ ಕಾಲದಲ್ಲಿ ಕಟ್ಟಿದ್ದಂತಹ ಕೋಟೆಯನ್ನ ಬೀಳಿಸಿ ಇಲ್ಲಿ ತನ್ನ ಬೇಸಿಗೆಯ ಅರಮನೆಯನ್ನು ಕಟ್ಟಿದ್ದನಂತೆ. ನಂತರದ ದಿನಗಳಲ್ಲಿ ಇದು ಬ್ರಿಟೀಷ್ ಅಧಿಕಾರಿಗಳಿಗೆ ಬೇಸಿಗೆಯ ತಂಗುದಾಣ ಆಗಿತ್ತು ಈ ನಂದಿಬೆಟ್ಟ. ಫ್ರಾನ್ಸೆಸ್ ಕನ್ನಿಂಗ್ ಹ್ಯಾಮ್ ಎಂಬ ಬ್ರಿಟಿಷ್ ಅಧಿಕಾರಿ ಕಬ್ಬನ್ ಮಾರ್ಕ್ ನ ಜೊತೆ ಇಲ್ಲಿಯೇ ಒಂದು ಮನೆಯನ್ನ ಕಟ್ಟಿಕೊಂಡು ಬೇಸಿಗೆಯ ರಜೆಯನ್ನು ಕಳೆಯುತ್ತಿದ್ದ ಅದಲ್ಲದೆ ಎಷ್ಟೋ ದೂರದಿಂದ ಈ ಬೆಟ್ಟವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಲಗಿರುವ ನಂದಿಯ ಹಾಗೆ ಕಾಣುವುದರಿಂದ ನಂದಿ ಬೆಟ್ಟ ಎಂದು ಕರೆಯಲಾಗುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಇವುಗಳ ಹಿಂದೆ ಇರುವ ಸತ್ಯ ಏನೇ ಇದ್ದರೂ ಸಹ ಪ್ರವಾಸದ ದೃಷ್ಟಿಯಿಂದ ಇದೊಂದು ಅದ್ಭುತವಾದ ಪ್ರದೇಶ ಅನ್ನೋದಂತೂ ನಿಜ.
ನಂದಿ ಬೆಟ್ಟ ಅಥವಾ ನಂದಿ ದುರ್ಗಾ ಇದು ಚಿಕ್ಕಬಳ್ಳಾಪುರ ದಿಂದ ಕೇವಲ ೧೦ km ದೂರದಲ್ಲಿ ಇದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕೇವಲ ೬೦ km ದೂರದಲ್ಲಿದೆ. ಬೆಂಗಳೂರಿನಿಂದ ಹೈದ್ರಾಬಾದ್ ರಸ್ತೆಯಲ್ಲಿ ಹೋಗುವಾಗ ಸುಮಾರು ೨೦ km ದೂರದವರೆಗೂ ನಂದಿ ಬೆಟ್ಟವನ್ನು ನೋಡಬಹುದು. ನಂದಿ ಬೆಟ್ಟಕ್ಕೆ ಯಾವ ಸಮಯದಲ್ಲಿ ಬೇಕಿದ್ದರೂ ಭೇಟಿ ನೀಡಬಹುದು. ಯಾಕಂದರೆ ಈ ಸ್ಥಳಕ್ಕೆ ಯಾವಾಗ ಹೋದರೂ ಕೂಡಾ ಅದೇ ಇಂದು ರೀತಿಯ ಚಂದ ಅಂದ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಹೋದರೆ ಅಂತೂ ಅಲ್ಲಿ ಬೀಸುವ ಗಾಳಿಗೆ ಮೈ ಮರೆಯುವುದು ಖಂಡಿತ.
ನಂದಿ ಬೆಟ್ಟದ 10 ಆಕರ್ಷಣೀಯ ಪ್ರದೇಶಗಳು ಏನೇನು ಇವೆ ಅನ್ನೋದನ್ನ ನೋಡೋಣ. ಮೊದಲಿಗೆ ಟಿಪ್ಪು ಡ್ರಾಪ್ : ಹಿಂದೆ ಟಿಪ್ಪುವಿನ ಕಾಲಾವಧಿಯಲ್ಲಿ ತಪ್ಪಿತಸ್ತರು ಎಂದು ಪರಿಗಣಿಸಲ್ಪಟ್ಟ ಖೈದಿಗಳನ್ನ ಈ ಬೆಟ್ಟದ ಮೇಲಿನಿಂದ ತಳ್ಳಿ ಸಾಯಿಸಲಾಗುತ್ತಿತ್ತು. ಇದರಿಂದ ಈ ಸ್ಥಳವು ಕುಖ್ಯಾತಿ ಮತ್ತು ಪ್ರಖ್ಯಾತಿಯು ಆಗಿದೆ. ಅದಕ್ಕೆ ಇದನ್ನ ಟಿಪ್ಪು ಡ್ರಾಪ್ ಎಂದೇ ಕರೆಯಲಾಗುತ್ತದೆ.
ಅಮೃತ ಸರೋವರ :ಇದು ಬೆಟ್ಟದಲ್ಲಿ ಇರುವ ಒಂದು ಹೊಳೆಯುವ ನೀರಿನ ಹೊಂಡ ಆಗಿದೆ. ಇದು ವರ್ಷ ಪೂರ್ತಿ ತುಂಬಿ ತುಳುಕೋವ ಸುಂದರ ಸರೋವರ ಆಗಿದೆ. ಮಳೆಗಾಲದ ಸಮವದಲ್ಲಿ ಇಲ್ಲಿಗೆ ಬಂದರೆ ನಿಮ್ಮನ್ನು ಹೊಂಡದ ತುಂಬಾ ಕಮಲದ ಹೂವುಗಳನ್ನು ತುಂಬಿಕೊಂಡು ಆಕರ್ಷಸಿಸುತ್ತದೆ. ಕಮಲದ ಹೂವು ತುಂಬುದ ಈ ನೋಟವನ್ನ ಕಣ್ಣು ತುಂಬಿಕೊಳ್ಳುವುದೇ ಇಂದು ರೀತಿಯ ಅದ್ಭುತ.
ಟಿಪ್ಪು ಸಮ್ಮರ್ ಪ್ಯಾಲೇಸ್ : ಗಂಗರ ಕಾದಲ್ಲಿ ಅವರ ಮುಖ್ಯಸ್ಥನು ಚಿಕ್ಕಬಳ್ಳಾಪುರದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದ್ದನು. ಟಿಪ್ಪು ಇದನ್ನ ಬಲಗೊಳಿಸಿ ಒಂದು ವಿಶ್ರಾಂತಿ ಗ್ರಹವನ್ನು ನಿರ್ಮಿಸಿದ. ಇದನ್ನು ಟಿಪ್ಪುವಿನ ಬೇಸಿಗೆಯ ಮಹಲ್ ಎಂದೇ ಕರೆಯಲಾಗುತ್ತದೆ. ಆದರೆ ಇದು ಸಾಮಾನ್ಯ ನಾಗರೀಮರಿಗೆ ಲಭ್ಯ ಇರುವುದಿಲ್ಲ. ಕೇವಲ ವಿ ಐ ಪಿ ಗಳಿಗೆ ಮಾತ್ರ ಲಭ್ಯವಿದೆ ಅಷ್ಟೇ. ಆದರೆ ಹೊರಗಿಂದ ಇದರ ಸುಂದರ ಕಲಾಕೃತಿಯನ್ನು ನೋಡಿದಾಗ ಮೈ ಮರೆಯುವುದು ನಿಜ.
ನಂದಿ ಬೆಟ್ಟದ ದೇವಾಲಯಗಳು : ನಂದಿ ಬೆಟ್ಟದಲ್ಲಿ ಹಲವಾರು ದೇವಾಲಯಗಳು ಇವೆ. ಅದರಲ್ಲಿ ಮುಖ್ಯವಾಗಿ ಶ್ರೀ ಭೋಗ ನರಸಿಂಹ, ಶ್ರೀ ಉಗ್ರ ನರಸಿಹ ಹಾಗೂ ಸುಂದರವಾದ ಪುರಾತನ ದೇವಾಲಯಗಳನ್ನು ಕಾಣಬಹುದು. ಗವಿ ವಿವರಭದ್ರೇಶ್ವರ ಸ್ವಾಮಿ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ. ಇದು ತಿಪಲು ಅರಮನೆಯಿಂದ ಹೋಗುವಾಗ ಸುಲ್ತಾನ ಪೇಟೆಯ ದಾರಿಯಲ್ಲಿ ಸಾಮಾನ್ಯವಾಗಿ ಇಂದು ಕಲ್ಲು ಬಂಡೆಯಿಂದ ನಿರ್ಮಿತವಾದ ಒಂದು ಮಹತ್ವವಾದ ದೇವಾಲಯ ಆಗಿದೆ.
ಮಕ್ಕಳ ಆಟದ ಮೈದಾನ : ಇಲ್ಲಿನ ಕೈಗಾರಿಕಾ ಇಲಾಖೆಯು ಸುಂದರಾವಾದ ಕೈ ತೋಟ ಮತ್ತು ಮಕ್ಕಳ ಆಟದ ಜೋಕಾಲಿಗಳು, ಸ್ಲಯಿಡ್ಸ್ ಗಳನ್ನು ನಿರ್ಮಿಸಿ ಮಕ್ಕಳಿಗೆ ಸಂತೋಷ ನೀಡಲು ಸಹಾಯಕ ಆಗಿದೆ.
ನೆಹರೂ ನಿಲಯ : ಇದು ನಿದೆ ನೆಹರು ಇಲ್ಲಿಗೆ ಬಂದಾಗ ಉಳಿದುಕೊಳ್ಳುವ ತೋಟಗಾರಿಕಾ ಇಲಾಖೆಯ ಪ್ರವಾಸಿ ಸ್ಥಳ ಆಗಿದೆ.
ಗಾಂಧೀ ಹೌಸ್ :ಇದು ನೆಹರೂ ನಿಲಯದ ಪಕ್ಕದಲ್ಲೇ ಇದೆ. ಗಾಂಧಿ ಹೌಸ್ ಅಥವಾ ಗಾಂಧಿ ನಿಲಯ ಅಂತ ಕರೀತಾರೆ. ಇತಿಹಾಸದ ಪ್ರಕಾರ ಬೇಸಿಗೆಯ ಸಮಯದಲ್ಲಿ ಗಾಂಧೀ ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳುವ ಸ್ಥಳ ಇದಾಗಿತ್ತು. ಇಂದು ಇದು ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದು ಪ್ರತಿಷ್ಠಿತ ವ್ಯಕ್ತಿಗಳಿಗಾಗಿ ಕಾಯ್ದಿರಿಸಲಾಗಿದೆ. ತೋಟಗಾರಿಕಾ ಇಲಾಖೆಯು ಇಲ್ಲಿ ಒಂದು ಸಸ್ಯಾಹಾರಿ ಹೋಟೆಲ್ ಅನ್ನು ಕಿದಾ ನಡೆಸುತ್ತಿದೆ. ನಂದಿ ಬೆಟ್ಟದಲ್ಲಿ ಇತ್ತೀಚೆಗೆ ಬೈಕ್ ರೇಸ್, ಸೈಕಲಿಂಗ್ ಮತ್ತು ಇನ್ನಿತರ ಚಟುವಟಿಕೆಗಳು ತುಂಬಾ ಆರಂಭ ಆಗಿವೆ. ಬೆಂಗಳೂರಿಗೆ ಭೇಟಿ ನೀಡಿದರೆ, ತಪ್ಪದೇ ನಂದಿ ಬೆಟ್ಟಕ್ಕೂ ಇಮ್ಮೆ ಭೇಟಿ ನೀಡಿ. ಇವಷ್ಟು ನಂದಿ ಬೆಟ್ಟದ ಕುರಿತಾದ ಪುಟ್ಟ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು ಶುಭವಾಗಲಿ