ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲಿ ತಿಳಿಸಿಕೊಡಲಾಗುತ್ತಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೇಗೆ ಪಡೆದುಕೊಳ್ಳೋದುಬಿದರಿಂದ ನಮಗೆ ಆಗುವ ಲಾಭಗಳು ಏನು ಅನ್ನೋದರ ಬಗ್ಗೆ ಹಾಗೂ ಇದನ್ನ ಪಡೆಯಲು ಏನೆಲ್ಲ ಡಾಕ್ಯುಮೆಂಟ್ಸ್ ಬೇಕು ಯಾರೆಲ್ಲ ಈ ಕಾರ್ಡ್ ಅನ್ನು ಪಡೆಯಬಹುದು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ರೈತರು, ಮೀನುಗಾರರು, ಪಶುಸಂಗೋಪನೆ (ಇದರಲ್ಲಿ ಹೈನುಗಾರಿಕೆ ಅಂದರೆ, ಪಶು, ಕುರಿ, ಕೋಳಿ, ಇವುಗಳ ಸಾಕಾಣಿಕೆ ಮಾಡುವವರನ್ನೂ ಸೇರಿಸಿ) ಮಾಡುವವರು ಇವರಿಗೆಲ್ಲಾ ಈ ಕಾರ್ಡ್ ಅನ್ನು ಪಡೆಯಲು ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ. ಈಗ ನಮ್ಮ ದೇಶದಾದ್ಯಂತ 2.5 ಕೋಟಿ ಜನರು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹಿಮಡಿರುವ ರೈತರಿಗೆ 2.5 ಲಕ್ಷ ಕೋಟಿ ರೂಪಾಯಿ ಹಣವನ್ನು ಸಾಲ ನೀಡಲು ಬಳಸಲಾಗಿದೆ. ಇನ್ನೂ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಮಾಡುವವರೆಗೂ ಕೂಡ ಹಣವನ್ನ ನೀಡುವುದಾಗಿ ಸರ್ಕಾರ ತಿಳಿಸಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದು ಹೇಗೆ? ಅರ್ಜಿ ಸಲ್ಲಿಸುವವರಿಗೆ ಮೊದಲು ಒಂದು ಸೆವಿಂಗ್ ಅಕೌಂಟ್ ಇರಬೇಕು. ಅಂದರೆ ಪಬ್ಲಿಕ್, ಪ್ರೈವೇಟ್ ಅಥವಾ ಯಾವುದೇ ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ನಿಮ್ಮ ಖಾತೆಯನ್ನು ಹೊಂದಿರಬೇಕು. ಈ ಕಾರ್ಡ್ ಅನ್ನು ಪಡೆಯಲು ಒನ್ಲೈನ್ ಅಥವಾ ಆಫ್ ಲೈನ್ ಮೂಲಕವೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಒನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ, ಉದಾಹರಣೆಗೆ SBI ನಲ್ಲಿ ಅಕೌಂಟ್ ಇದ್ದರೆ, SBI ವೆಬ್ಸೈಟ್ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು. ತಿಳಿಯದೇ ಇದ್ದರೆ, ನಿಮ್ಮ ಹತ್ತಿರದ SBI ಬ್ಯಾಂಕಿಗೆ ಹೋಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಕೇಳಿದರೆ, ಇದಕ್ಕೆ ಸಂಬಂಧಿಸಿದ ಒಂದು ಅಪ್ಲಿಕೇಶನ್ ಪೇಪರ್ ಕೊಡುತ್ತಾರೆ ಅದನ್ನ ತುಂಬಿ ಎಲ್ಲಾ ವಿವರಗಳ ಜೊತೆಗೆ ಬ್ಯಾಂಕಿಗೆ ನೀಡಬೇಕು. ಒಂದುವೇಳೆ ಬ್ಯಾಂಕ್ನಲ್ಲಿ ಸರಿಯಾಗಿ ವಿವರಣೆ ನೀಡದೇ ಇದ್ದರೆ, ಕಾಮನ್ ಸರ್ವಿಸ್ ಸೆಂಟರ್ ಇದೆ. ಇಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ಕೇಳಿದರೆ, ಅವರಿಗೆ ನಿಮ್ಮ ಎಲ್ಲಾ ವಿವರಗಳನ್ನು ನೀಡಿದರೆ ಅವರೇ ಅರ್ಜಿ ತುಂಬಿ ನೀಡುತ್ತಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು , ಅರ್ಜಿ ತುಂಬಲು ನಿಮ್ಮ ಬಳಿ ಇರಬೇಕಾದ ದಾಖಲೆಗಳು ಯಾವುದು? ಬ್ಯಾಂಕ್ ಅಥವಾ ಕಾಮನ್ ಸರ್ವಿಸ್ ಸೆಂಟರ್ ನಲ್ಲಿ ಓಂದು ಅಪ್ಲಿಕೇಶನ್ ಫಾರ್ಮ್ ಅನ್ನು ಕೊಡುತ್ತಾರೆ. ಅದನ್ನ ಸರಿಯಾಗಿ ವಿವರಗಳೊಂದಿಗೆ ಭರ್ತಿ ಮಾಡಿ ಕೆಳಗಡೆ ನಿಮ್ಮ ಸಹಿ ಇರುವ ಜಾಗದಲ್ಲಿ ನಿಮ್ಮ ಸಹಿಯನ್ನು ಹಾಕಬೇಕು. ನಂತರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸನ್ಸ್ ಇವಿಷ್ಟರಲ್ಲಿ ಯಾವುದೇ ಒಂದರ ಸರಿಯಾಗಿ ಇರುವ ಜೆರೋಕ್ಸ್ ಪ್ರತಿ ಒಂದು ಬೇಕು. ನಂತರ ನೀವು ಇರುವ ವಿಳಾಸವನ್ನು ಖಚಿತ ಪಡಿಸಲು ನೀವು ವಾಸವಿರುವ ಸ್ಥಳದ ವಾಸ್ತವ ಪತ್ರ ಬೇಕು. ಹಾಗೆ ಜಮೀನಿನ ಭೂ ಪತ್ರ ಹಾಗೆ ಪಾಸ್ ಪೋರ್ಟ್ ಸೈಜಿನ 2 ಫೋಟೋ ಕೂಡಾ ಬೇಕಾಗತ್ತೆ. ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸೋಕೆ ಇವಿಷ್ಟು ದಾಖಲೆಗಳು ಬೇಕು.

ಕಿಸಾನ್ ಕ್ರೆಡಿಟ್ ಕಾರ್ಡ್ ಹೇಗೋ ಮಾಡಿಸಿಕೊಂಡು ಏನೋ ಆಯ್ತು. ಆದ್ರೆ ಇದರಿಂದ ನಮಗೆ ಏನು ಉಪಯೋಗ ಆಗತ್ತೆ? ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ಲೋನ್ ಪಡೆಯಬಹುದು. ಸುಲಭವಾಗಿ 2 ಲಕ್ಷದವರೆಗೂ ಕಡಿಮೆ ಬಡ್ಡಿದರದಲ್ಲೂ ಸಹ ಲೋನ್ ಪಡೆಯಬಹುದು. ಇನ್ನೂ ಗೊಬ್ಬರ, ಬಿತ್ತನೆ ಬೀಜಗಳನ್ನು ಖರೀದಿ ಮಾಡಬೇಕು ಎಂದಾಗ ಈ ಕಾರ್ಡ್ ಇದ್ದರೆ ತುಂಬಾ ಸಹಾಯಕ್ಕೆ ಬರತ್ತೆ. ನಮ್ಮೆಲ್ಲ ರೈತರಿಗೆ ಈ ವಿಚಾರ ತಲುಪುವಂತೆ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *