ವಾಸ್ತು ಗಿಡಗಳನ್ನ ಮನೆಯಲ್ಲಿ ಬೆಳೆಸುವುದರ ಬಗ್ಗೆ ಜನರಲ್ಲಿ ಸಾಕಷ್ಟು ನಂಬಿಕೆಗಳು ಇವೆ. ಈ ವಾಸ್ತು ಗಿಡಗಳನ್ನ ಮನೆಯಲ್ಲಿ ಬೆಳೆಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುಯ್ತದೆ ಅನ್ನುವ ನಂಬಿಕೆ ಹಲವರಲ್ಲಿದೆ. ಆದರೆ ಈ ವಾಸ್ತು ಗಿಡಗಳು ಯಾವುದು ಇದನ್ನ ಮನೆಯ ಯಾವ ದಿಕ್ಕಿನಲ್ಲಿ ಬೆಳೆಸಬಹುದು ಅನ್ನೋದರ ಕುರಿತು ಈ ಲೇಖನವನ್ನು ಓದಿ ತಿಳಿದುಕೊಳ್ಳಿ
ತುಳಸೀ ಗಿಡ. ಇದು ವಾಸ್ತು ಪ್ರಕಾರ ಹಾಗೂ ಹಿಂದೂ ಪುರಾಣಗಳ ತುಳಸೀ ಗಿಡ ಒಂದು ಪವಿತ್ರವಾದ ಗಿಡ. ಇದು ಹೆಚ್ಚಿನ ಧನಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ತುಳಸೀ ಗಿಡವನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯ ಜನರ ಆರೋಗ್ಯದಲ್ಲಿ ಸುಧಾರಣೆ ಆಗತ್ತೆ.
ಬಿದಿರಿನ ಗಿಡ ಇದು ಹೆಸರಿನಲ್ಲಿ ಅದೃಷ್ಟ ತರುವ ಗಿಡ, ದುಷ್ಟ ಶಕ್ತಿಗಳನ್ನು ನಿವಾರಣೆ ಮಾಡುವ ಗಿಡ ಎಂದೇ ಬಿಂಬಿತ ಆಗಿದೆ. ಇದನ್ನ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಆರೋಗ್ಯ ಸುಧಾರಣೆ ಹಾಗೂ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ, ಹಣಕಾಸಿನ ಅಭಿವೃದ್ಧಿ ಉಂಟಾಗತ್ತೇ
ಅಲೋವೆರ ಅಥವಾ ಲೋಳೆ ಸರ ಇದೂ ಕೂಡಾ ಒಂದು ವಾಸ್ತು ಗಿಡಗಳ ಪಟ್ಟಿಗೆ ಸೇರತ್ತೆ. ಅಲೋವೆರ ಇದು ಇದರ ಔಷಧೀಯ ಗುಣಗಳಿಂದ ಮಹತ್ವ ಪಡೆದಿದೇ.
ಮನಿ ಪ್ಲಾಂಟ್ ಅಥವಾ ದುಡ್ಡಿನ ಗಿಡ ಇದರ ಹೆಸರೇ ಹೇಳುವಂತೆ ಮನಿ ಪ್ಲಾಂಟ್ ಅಂತ ಅಂದುಕೊಂಡು ಇದು ಸಂಪತ್ತನ್ನು ಹೆಚ್ಚು ಏನೂ ಮಾಡಲ್ಲ. ವಾತಾವರಣದ ಶುದ್ಧ ಗಾಳಿಯನ್ನು ನೀಡುತ್ತದೆ ಅಷ್ಟೇ. ಈ ಗಿಡವನ್ನ ಟಿವಿ ಕಂಪ್ಯೂಟರ್ ಪಕ್ಕಕ್ಕೆ ಇಡುವುದರಿಂದ ಇವುಗಳಿಂದ ಹ
ಹೊರ ಬರುವ ವಿಕಿರಣಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಇದು ಮನೆಯಲ್ಲಿ ಇರುವ ಉದ್ವೇಗ, ಒತ್ತಡವನ್ನು ಕಡಿಮೆ ಮಾಡಿ ಮನೆಯಲ್ಲಿ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡತ್ತೆ. ಇದನ್ನ ಆಗ್ನೇಯ ದಿಕ್ಕಿನಲ್ಲಿ ಇಡಬೇಕು ಅನ್ನುವುದು ವಾಸ್ತುವಿನಲ್ಲಿ ಇರುವ ಅಂಶ.
ಇನ್ನೂ ರಬ್ಬರ್ ಪ್ಲಾಂಟ್ ಇದು ಐಶ್ವರ್ಯ ವೃದ್ಧಿ ಮಾಡುವುದರ ಜೊತೆಗೆ ಸಂಪತ್ತನ್ನು ಕೂಡಾ ತಂದುಕೊಡುತ್ತೇ ಅನ್ನುವ ನಂಬಿಕೆ ಇದೆ. ಇದು ವಾತಾವರಣದಲ್ಲಿ ಇರುವ ಕೆಟ್ಟ ಅಂಶಗಳನ್ನು ಹೀರಿಕೊಂಡು ವಾತಾವರಣವನ್ನು ಶುದ್ಧ ಮಾಡಲು ಸಹಕರಿಸುತ್ತದೆ.
ಲಿಲ್ಲಿ ಪ್ಲಾಂಟ್ ಅಥವಾ ನೆಲ ನೈದಿಲೇ. ಇದೂ ಕೂಡಾ ವಾಸ್ತು ಗಿಡಗಳಲ್ಲಿ ಒಂದು. ಇದು ವಾತಾವರಣದ ಋಣಾತ್ಮಕ ಅಂಶಗಳನ್ನು ತೆಗೆದುಹಾಕಿ ನಿರ್ಮಲ ವಾತಾವರಣವನ್ನು ಸೃಷ್ಟಿ ಮಾಡುವಲ್ಲಿ ಸಹಕಾರಿ. ಅಭಿವೃದ್ಧಿಯ ಬಾಗಿಲು ತೆರೆಯತ್ತೆ. ಇದರಲ್ಲೂ ಹಲವಾರು ವಿಧಗಳು ಇದ್ದು ಹಲವಾರು ಬಣ್ಣಗಳಲ್ಲಿ ಕೂಡಾ ಇದು ಲಭ್ಯವಿದೆ.
ಪಿಯೋನಿ ಪ್ಲಾಂಟ್. ಇದು ಕೂಡಾ ನೋಡೋಕೆ ತುಂಬಾ ಸುಂದರವಾಗಿ ಇರತ್ತೆ. ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡತ್ತೆ. ಆಶಾವಾಧಿ ಭಾವನೆಯನ್ನು ಬೆಳೆಸಿ ಜೊತೆಗೆ ಮನೆಯ ಘನತೆಯನ್ನು ಹೆಚ್ಚಿಸುತ್ತೆ ಅನ್ನುವ ನಂಬಿಕೆ ಇದೆ. ಇದು ಬೇರ್ಪಟ್ಟ ಸಂಬಂಧವನ್ನು ಒಂದುಗೂಡಿಸತ್ತೆ ಹಾಗಾಗಿ ಇದನ್ನ ನೈರುತ್ಯ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು.
ಆರ್ಕಿಡ್ಸ್ ಇದನ್ನ ಮನೆಯ ಶ್ರೇಯೋಭಿವೃದ್ಧಿಗಾಗಿ ಬೆಳೆಸುತ್ತಾರೆ. ಇದರಲ್ಲಿ ಕೂಡಾ ಹಲವಾರು ವಿಧಗಳು ಇದ್ದು ಅನೇಕ ಬಣ್ಣಗಳನ್ನು ಕೂಡಾ ಕಾಣಬಹುದಾಗಿದೆ. ಇದು ನೋಡೋಕೆ ಬಹಳ ಸುಂದರವಾಗಿ ಇರತ್ತೆ ಇದನ್ನ ನೈರುತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎಂದು ವಾಸ್ತುವಿನಲ್ಲಿ ಇದೆ.
ಕಮಲ ಅಥವಾ ತಾವರೆ. ಇದು ಲಕ್ಷ್ಮೀ ದೇವಿಯ ಅವತಾರವಾದ ಪವಿತ್ರವಾದ ಗಿಡ. ಇದು ಸುಖ ಶಾಂತಿ, ಐಶ್ವರ್ಯದ ಸಂಕೇತ. ಹಾಗೆಯೇ ವಾಸ್ತು ಗಿಡಗಳಲ್ಲಿ ಮಲ್ಲಿಗೆ ಗಿಡವೂ ಕೂಡಾ ಒಂದು. ಮಲ್ಲಿಗೆಯ ಸುವಾಸನೆಯಿಂದ ಮನೆಯ ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ ಹಾಗೂ ದೇಹದ ಆರೋಗ್ಯವನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ. ಮನೆಯಲ್ಲಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಇದನ್ನು ಪೂರ್ವ, ಉತ್ತರ ಅಥವಾ ಈಶಾನ್ಯದ ಬಾಗಿಲ ಬಳಿ ಅಥವಾ, ದಕ್ಷಿಣಾಭಿಮುಖವಾಗಿ ಇರುವ ಕಿಟಕಿಯ ಬಳಿ ಇದನ್ನ ಬೆಳೆಸಬೇಕು.
ಇಷ್ಟೇ ಅಲ್ಲದೆ ಇನ್ನೂ ಅನೇಕ ಗಿಡಗಳನ್ನು ವಾಸ್ತು ಗಿಡಗಳ ಪಟ್ಟಿಗೆ ಸೇರಿಸಲಾಗಿದೆ. ಅವುಗಳಲ್ಲಿ ನಿಂಬೆ ಹಣ್ಣಿನ ಗಿಡವೂ ಕೂಡಾ ಒಂದು. ಹಾಗೆಯೇ ಸೇವಂತಿಗೆ ಗಿಡ. ಕಲ್ಪವೃಕ್ಷ ಅಂತ ಹೇಳುವ ತೆಂಗಿನ ಮರ, ಪೈನ್ ಗಿಡ, ಈ ಎಲ್ಲಾ ಗಿಡಗಳೂ ಸಹ ವಾಸ್ತು ದೋಷವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ.
ವಾಸ್ತು ಪ್ರಕಾರ ಕೆಲವು ವಸ್ತುಗಳು ಅಥವಾ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಅಂತವು ಯಾವುದು ಅನ್ನೋದನ್ನ ನೋಡೋಣ. ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಅಂತ ವಾಸ್ತು ಶಾಸ್ತ್ರದಲ್ಲಿದೆ. ಹಾಗೆಯೇ ಹುಣಸೇ ಹಣ್ಣಿನ ಮರ, ಅಕೇಶಿಯಾ ಗಿಡ, ಆಲದ ಮರ, ಹತ್ತಿ ಗಿಡ ಮುಂತಾದ ಗಿಡ ಹಾಗೂ ಮರಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಾಗೆಯೇ ಬೋನ್ಸಾಯ್ ಹಾಗೂ ಕುಬ್ಜ ಗಿಡಗಳನ್ನೂ ಸಹ ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಮನೆಯ ಅಭಿವೃದ್ಧಿ ಕೂಡಾ ಕುಬ್ಜ ಗಿಡಗಳ ಹಾಗೆಯೇ ಕುಂಠಿತ ಆಗತ್ತೇ ಅಂತ ಹೇಳುತ್ತಾರೆ. ಹಾಗೇ ಒಣಗಿದ ಹಾಗೂ ಸತ್ತ ಗಿಡಗಳನ್ನೂ ಸಹ ಮನೆಯಲ್ಲಿ ಇಟ್ಟುಕೊಳ್ಳುಬಾರದು ಎಂದು ವಾಸ್ತು ಶಾಸ್ತ್ರದಲ್ಲಿದೆ.