ಕೊರೊನದಿಂದ ಲಾಕ್ ಡೌನ್ ಆದಮೇಲೆ ಎಲ್ಲರ ಪರಿಸ್ಥಿತಿ ಹೇಗೆ ಆಗಿದೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಬಡವರು ಶ್ರೀಮಂತರು ಮಕ್ಕಳು ದೊಡ್ಡವರು ಎನ್ನುವಂತಹ ಯಾವುದೇ ಬೇಧ ಭಾವ ಇಲ್ಲದೇ ತಮ್ಮ ತಮ್ಮ ಕೈಲಾದ ಮಟ್ಟಿಗೆ ಸಾಕಷ್ಟು ಸಹಾಯವನ್ನ ಮಾಡಿದ್ದಾರೆ ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಅವರ ಕಷ್ಟಗಳಲ್ಲಿ ತಾವೂ ಕೂಡಾ ಎಷ್ಟೋ ಜನ ಭಾಗಿ ಆಗಿದ್ದಾರೆ. ಇಲ್ಲಿ ನಾವೀಗ ಹೇಳೋಕೆ ಹೊರಟಿರುವುದು ಕೂಡಾ ಅದೇ ವಿಷಯದ ಬಗ್ಗೆ ಇದೇನಪ್ಪಾ ಇದು ಎಲ್ಲರೂ ಸಹಾಯ ಮಾಡ್ತಾರೆ ಹಾಗೇ ಇವರೂ ಅಂತ ಅನಕೊಳ್ತಾ ಇದ್ದೀರಾ? ನಿಜ. ಸಹಾಯ ಮಾಡಿದ್ದು ಏನೇ ಇರಬಹುದು ಆದ್ರೆ ಆ ಸಹಾಯ ಮಾಡಿದ ವ್ಯಕ್ತಿ ವಿಶೇಷ. ಅವರು ಯಾವುದೇ ಸಿಲೆಬ್ರೆಟಿ ಅಲ್ಲ ರಾಜಕಾರಣಿಯು ಅಲ್ಲ ನಮ್ಮ ನಿಮ್ಮ ಹಾಗೆ ಜನಸಾಮಾನ್ಯರು. ಅವರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಇವರ ಬಗ್ಗೆ ತಿಳಿದು ನೀವೂ ಕೂಡ ಇಂದು ಮೆಚ್ಚುಗೆಯನ್ನ ಸೂಚಿಸಿ.
ಈಕೆ ಬೆಳಗಾವಿಯ ಮಂಗಳ ಪೇಟೆಯಲ್ಲಿ ಇರುವ ಬಾಲಿಕಾ ಆದರ್ಶ ವಿದ್ಯಾಲಯದ 10 ನೆ ತರಗತಿ ವಿದ್ಯಾರ್ಥಿನಿ ಶ್ರೇಯಾ. ಲಾಕ್ ಡೌನ್ ಸಮಯದಲ್ಲಿ ಹಲವಾರು ಮಂದಿ ಹೇಗಪ್ಪಾ ಸಮಯ ಕಳಿಯೋದು ಅಂತ ಯೋಚನೆ ಮಾಡ್ತಾ ಇದ್ರೆ, ಶ್ರೇಯಾ ಮಾತ್ರ ಏನು ಮಾಡೋದು ಅಂತ ಯೋಚನೆ ಮಾಡ್ತಾ ಕೂರಲಿಲ್ಲ. ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ಅಸಾಧಾರಣ ವಿದ್ಯಾರ್ಥಿನಿ ಎಂದು ಶ್ರೇಯಾ ಆಯ್ಕೆ ಆಗಿದ್ದಳು. ಈಕೆಗೆ 10,000 ರೂಪಾಯಿ ಬಹುಮಾನವಾಗಿ ನೀಡಲಾಗಿತ್ತು ಜೊತೆಗೇ ಅಭಿನಯ ಸ್ಪರ್ಧೆಯಲ್ಲೂ ಕೂಡ 8 ಸಾವಿರ ರೂಪಾಯಿ ಬಹುಮಾನವಾಗಿ ಬಂದಿತ್ತು. ಇದೆ ಹಣದಲ್ಲಿ ಈಕೆ 8 ಸಾವಿರ ರೂಪಾಯಿ ಖರ್ಚು ಮಾಡಿ ಒಂದು ಸಾವಿರ ಮಾಸ್ಕ್ ಗಳನ್ನು ತನ್ನ ಕೈಯ್ಯಾರೆ ಹೊಲಿದು ತಯಾರು ಮಾಡಿದ್ದಾಳೆ.
ಮೊದಲು ತಾನೇ ಕಾಟನ್ ಬಿಟ್ಟೆಗಳಿಂದ ಮಾಸ್ಕ್ ತಯಾರು ಮಾಡುತ್ತ ಇದ್ದಳು. ಬಟ್ಟೆ ತೆಗೆದುಕೊಂಡು ಅಳತೆ ಮಾಡಿ ಕಟ್ ಮಾಡಿ ಹೊಲಿದು ತೊಳೆದು ಇಸ್ತ್ರಿ ಮಾಡಿ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದ್ದಾಳೆ. ಈ ಕೆಲಸಕ್ಕೆ ಶ್ರೇಯಾ ತಂಗಿ ಸ್ಫೂರ್ತಿ ಕೂಡಾ ಸಹಾಯ ಮಾಡಿದ್ದಾಳೆ. ಶ್ರೇಯಾ ಮೊದಲು 1 ಸಾವಿರ ಮಾಸ್ಕ್ ಹೋಲಿಯುವ ಟಾರ್ಗೆಟ್ ಇಟ್ಟುಕೊಂಡು ಹಗಲು ರಾತ್ರಿ ಕಷ್ಟ ಪಟ್ಟು ಇದನ್ನ ಮಾಡಿದ್ದಾಳೆ. ತಾನು ತಯಾರು ಮಾಡಿದ ಮಸ್ಕ್ಗಳನ್ನು ಶ್ರೇಯಾ ಬೆಳಗಾವಿ ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದಾಳೆ. ಮುಂಬರುವ SSLC ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಈ ಮಾಸ್ಕ್ ಗಳನ್ನ ನೀಡಿ ಎಂದು ಶ್ರೇಯಾ ಮನವಿ ಮಾಡಿಕೊಂಡಿದ್ದಾಳೆ.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ತಾನು ಹೋಳಿದ ಮಾಸ್ಕ್ ಗಳ ಜೊತೆಗೆ ತನಗೆ ಬಹುಮಾನವಾಗಿ ಬಂದ 10ಸಾವಿರ ರೂಪಾಯಿಯ ಚೆಕ್ಕನ್ನು ಕೂಡ ಕೊಟ್ಟು, ಇದನ್ನ CM ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ಎಂದೂ ಕೂಡಾ ಮನವಿ ಮಾಡಿಕೊಂಡಿದ್ದಾಳೆ. ಶ್ರೇಯಾ ಮಾಡಿರುವ ಈ ಒಳ್ಳೆಯ ಕೆಲಸಕ್ಕೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ಸಂಸದ ಸುರೇಶ್ ಅಂಗಡಿ ಸೇರಿ ಇನ್ನೂ ಹಲವಾರು ಜನರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಇದರ ನಡುವೆ ಶ್ರೇಯಾ ತಂದೆ ಮಾಧ್ಯಮದವರ ಜೊತೆ ಮಾತನಾಡಿ ಪ್ರಧಾನ ಮಂತ್ರಿ ಅವರು ಮನೆಯಲ್ಲೇ ಮಾಸ್ಕ್ ತಯಾರಿಸಿ ಬಳಸಿ ಅನ್ನೋ ಒಂದು ಆದೇಶವನ್ನ ಹೊರಡಿಸುತ್ತಾರೆ. ಪ್ರಧಾನ ಮಂತ್ರಿ ಅವರ ಮಾತಿನಂತೆ ಶ್ರೇಯಾ ತನ್ನ ಓದಿನ ಜೊತೆಗೆ ಈ ಮಾಸ್ಕ್ ಅನ್ನು ತಯಾರು ಮಾಡಿದ್ದಾಳೆ. ಜನರ ಸಲುವಾಗಿ ಹೋಲಿಯಬೇಕು ಅಂದುಕೊಂಡ ಶ್ರೇಯಾ ಗೆ ಪರೀಕ್ಷೆ ನೆನಪಾಗಿ ಸರ್ಕಾರಿ ಶಾಲೆಗಳಿಂದ ಬರುವ ಮಕ್ಕಳಿಗಾಗಿ ತಾನು ಮಾಸ್ಕ್ ಹೊಲಿದು ಕೊಡುತ್ತೇನೆ ಎಂದು ಹೋಳಿದುಕೊಟ್ಟಿದ್ದಾಳೆ ಎಂದು ಮಗಳ ಬಗ್ಗೆ ಹೆಮ್ಮೆಯಿಂದ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಶ್ರೇಯಾ ಬಾಲ್ಯದಿಂದಲೂ ಸಹ ಹಲವಾರು ಸಮಾಜ ಸೇವೆಗಳನ್ನ ಮಾಡುತ್ತಾ ಬಂದಿದ್ದಾಳೆ . ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಅಂತ ಬಂದ ಹಣವನ್ನು ಬಡವರ ಸೇವೆಗಾಗಿ ನೀಡಿದ್ದಾಳೆ. ಇಷ್ಟೇ ಅಲ್ಲದೇ ಚುನಾವಣೆಯ ಸಂದರ್ಭದಲ್ಲಿ ತನ್ನ ಸ್ವಂತ ಹಣದಲ್ಲಿ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡಿದ್ದಾಳೆ.
ಕೊರೊನ ಭೀತಿ ಹೆಚ್ಚು ಆಗುತ್ತಾ ಬಂದ ಹಾಗೆ ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚು ಆಗುತ್ತಾ ಬಂದಿತು. ಇದೇ ಸರುಯಾದ ಸಮಯ ಎಂದು ಅರಿತ ಕೆಲವು ಜನರು ಮಾಸ್ಕ್ ಹೊಲಿದು ದುಡ್ಡು ಮಾಡಿಕೊಳ್ಳಬಹುದು ಎಂಬ ಆಲೋಚನೆಯಿಂದ ದುಬಾರಿ ಬೆಳೆಗೆ ಮಾಸ್ಕ್ ಮಾರಾಟ ಆಡಲು ಶುರು ಮಾಡಿದ್ದರು. ಅಂತವರೆಲ್ಲರಿಗೂ ಈ ವಿದ್ಯಾರ್ಥಿನಿ ನಿಜಕ್ಕೂ ಒಳ್ಳೆಯ ಮಾದರಿ. ಓದಿನ ಜೊತೆಗೇ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಮಾಜದ ಬಗ್ಗೆ ಕಾಳಜಿ ವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಹೆಚ್ಚು ಆಗಲಿ.