ಒಂದು ಕಾಲದಲ್ಲಿ ಸ್ಟಾರ್ ನಟರನ್ನು ಹಾಕಿಕೊಂಡರೆ ಮಾತ್ರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿತ್ತು ಎಂಬುದಾಗಿ ನಂಬಲಾಗುತ್ತಿತ್ತು. ಆದರೆ ಈಗ ಕಂಟೆಂಟ್ ಸ್ಟಾರ್ ಆಗಿದ್ದರೆ ಜನರೇ ಸಿನಿಮಾವನ್ನು ಸ್ಟಾರ್ ಸಿನಿಮಾ ಆಗಿ ಕೊಂಡಾಡುತ್ತಾರೆ ಹಾಗೂ ಕಲೆಕ್ಷನ್ ಕೂಡ ರಾಕೆಟ್ ಲೆವೆಲ್ ನಲ್ಲಿ ಏರುತ್ತದೆ ಎಂಬುದಾಗಿ ಮತ್ತೊಮ್ಮೆ ಸಾಬೀತಾಗಿದೆ. ಹೌದು ನಾವು ಮಾತನಾಡುತ್ತಿರುವುದು ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿರುವ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾದ ಕುರಿತಂತೆ.
ಅತ್ಯಂತ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲಿ ಕನ್ನಡ ಪ್ರೇಕ್ಷಕರು ಹೆಮ್ಮೆಪಡುವಂತಹ ಸಿನಿಮಾ ಆಗಿ ಕಾಣಿಸಿಕೊಂಡಿದೆ. ಈ ವರ್ಷ ಕೆಜಿಎಫ್ ಚಾಪ್ಟರ್ 2 ವಿಕ್ರಾಂತ್ ರೋಣ ಹಾಗೂ ಚಾರ್ಲಿ ಸಿನಿಮಾದ ನಂತರ ಜನರು ಅತ್ಯಂತ ಹೆಚ್ಚು ಇಷ್ಟಪಟ್ಟಿರುವ ಸಿನಿಮಾ ಎಂದರೆ ಅದು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ. ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಿರುವ ಈ ಸಿನಿಮಾ ಈಗಾಗಲೇ ಕನ್ನಡ ಪ್ರೇಕ್ಷಕರಲ್ಲಿ ನವರಾತ್ರಿ ಹಬ್ಬದ ಸಡಗರವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಸಿನಿಮಾ ಕಾಂತಾರ ಆಗಿದ್ದು ಸಾಕಷ್ಟು ಸಮಯಗಳ ಕಾಲ ಈ ಸಿನಿಮಾದ ಬಗ್ಗೆ ಮಾತುಕತೆಗಳು ಪ್ರಚಲಿತದಲ್ಲಿ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ಟೋರಿ ಮೇಕಿಂಗ್ ಸೇರಿದಂತೆ ಸಿನಿಮಾ ನಿರ್ಮಾಣದ ಪ್ರತಿಯೊಂದು ವಿಭಾಗವು ಕೂಡ ಕಾಂತಾರ ಸಿನಿಮಾದಲ್ಲಿ ಪಕ್ಕ ಪರ್ಫೆಕ್ಟ್ ಆಗಿರುವುದು ಪ್ರೇಕ್ಷಕರಿಗೆ ಇಷ್ಟ ಆಗಲು ಮತ್ತೊಂದು ಕಾರಣವಾಗಿದೆ. ಸೆಪ್ಟೆಂಬರ್ 30ರಂದು ಬಿಡುಗಡೆ ಆಗಿರುವ ಕಾಂತರಾ ಮೂರು ದಿನಗಳ ಒಳಗೆ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕಾಂತಾರ ಸಿನಿಮಾ ಮೊದಲ ದಿನ ಏಳು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಅಂದರೆ ಶನಿವಾರ ಒಟ್ಟಾರೆಯಾಗಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೂರನೇ ದಿನ ಅಂದರೆ ಇಂದು ಭಾನುವಾರ ಸಮೇತ ಎಲ್ಲರೂ ಕೂಡ ಸಿನಿಮಾ ವೀಕ್ಷಣೆ ಮಾಡಲು ಬಂದಿದ್ದ ಕಾರಣದಿಂದಾಗಿ ಕಲೆಕ್ಷನ್ ಹೆಚ್ಚಾಗಿದ್ದು ಇಂದು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟಾರಿಯಾಗಿ ಕಾಂತಾರ ಮೂರು ದಿನಗಳಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ