ಕಾಶೀನಾಥ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರು ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತಮ್ಮಂದೆ ಆದ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಾಣುವಂತೆ ಮಾಡಿದ ನಟ ನಿರ್ಮಾಪಕ ಹಾಗೂ ನಿರ್ದೇಶಕ ಎಂದರೆ ತಪ್ಪಾಗದು . ಇವರು 80ರ ದಶಕದ ಸ್ಯಾಂಡಲ್ವುಡ್ ನ ನಟ ಇನ್ನೂ ಉಪೇಂದ್ರ ಉಮಾಶ್ರೀ ವಿ ಮನೋಹರ್ ಹಾಗೂ ಸುನಿಲ್ ದೆಸಾಹಿ ಮುಂತಾದ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ
ಇವರು ಉಡುಪಿ ಜೆಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಎಂಬಲ್ಲಿ 1951 ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನನ ಆಗಿದ್ದು ತನ್ನ ವಿದ್ಯೆಯ ಸಲುವಾಗಿ ಬೆಂಗಳೂರಿನ ವಿಜಯ ಕಾಲೇಜು ಅಲ್ಲಿ ವ್ಯಾಸಾಂಗ ಮಾಡುತ್ತಾರೆ ನಂತರ ಅಪರೂಪ ಅತಿಥಿಗಳು ಒಂದು ಚಿತ್ರದ ನಿರ್ದೇಶಕರ ಗಿ 1976 ಅಲ್ಲಿ ಚಿತ್ರರಂಗ ಪ್ರವೇಶ ಮಾಡಿ ಅನುಭವ ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯ ಮಾಡಿ ಜನಮನ ಗೆಲ್ಲುತ್ತಾರೆ
ಹೀಗೆ ಇವರು ಕಡಿಮೆ ವೆಚ್ಚದಲ್ಲಿ ಒಳ್ಳೆಯ ಸಿನಿಮಾ ರಚಿಸುವಿದರಲ್ಲಿ ನಿಪುಣರು ಇವರು ಹಿಂದಿಯಲ್ಲಿ 2 ಕನ್ನಡಲ್ಲಿ 13 ಹಾಗೂ ತೆಲುಗಿನಲ್ಲಿ 1 ಸಿನಿಮಾವನ್ನು ನಿರ್ದೇಶಿಸಿ ಕೆಲವೊಂದು ಸಿನಿಮಾಕ್ಕೆ ಸಂಭಾಷಣೆ ಹಾಗೂ ಚಿತ್ರಗೀತೆಗಳು ಬರೆದಿದ್ದಾರೆ ಇನ್ನೂ ಇವರ ಕೊನೆಯ ಚಿತ್ರ ಚೌಕ ಯಶಸ್ಸಿಯಾಗಿ 100 ದಿನ ಪೂರೈಸಿದೆ
ಇನ್ನೂ ಇವರ ಚಿತ್ರಗಳು ಸಮಾಜದ ಕುರಿತು ಮಡಿವಂತಿಕೆ ಕುರಿತು ರಚಿಸಿದ್ದು ಹಾಗೂ ದಂದ್ವರ್ಥ ಸಂಭಾಷಣೆ ಇನ್ನೂ ಕೆಲ ಸಿನಿಮಾ ಜನರ ಆಡುಭಾಷೆಯಲ್ಲಿ ನಿರ್ಮಿಸಿದರೆ ಮಂಗಳೂರು ಮಂಜುನಾಥ ಮುಂತಾದ ಚಿತ್ರದ ಸಂಭಾಷಣೆ ಜನಪ್ರಿಯ ಆಗಿದೆ ಇದಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದು ಕೊನೆಗೆ ಇದನ್ನೆಲ್ಲ ಹಿಮ್ಮೆಟ್ಟಿ ಮುನ್ನಡೆ ಸಾಧಿಸಿದ್ದಾರೆ ಅಪರಿಚಿತ ಅಜಗಜಾಂತರ ಅನಂತನ ಅವತಾರ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಹೆಂಡ್ತಿ ಎಂದರೆ ಹೀಗಿರಬೇಕು ಲವ್ ಮಾಡಿ ನೋಡು ಹೀಗೆ ಸುಮಾರು ಚಿತ್ರದಲ್ಲಿ ನಟನಾಗಿ ನಿರ್ಮಾಪಕ ಆಗಿ ಕಾರ್ಯ ನಿರ್ವಹಿಸಿದ್ದಾರೆ