ಬಹುತೇಕ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಮೋಹನ್ ಜುನೇಜಾ ಅವರು ಹೃದಯ ಸಮಸ್ಯೆಯಿಂದ ವಿಧಿವಶರಾದರು. ಹಾಸ್ಯ ಪಾತ್ರದಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಮೋಹನ್ ಅವರ ಅಂತಿಮದರ್ಶನಕ್ಕೆ ಕನ್ನಡ ಚಿತ್ರರಂಗದ ದೊಡ್ಡ ಕಲಾವಿದರು ಯಾರೂ ಬರದೆ ಇರುವುದು ಬೇಸರದ ಸಂಗತಿ. ಮೋಹನ್ ಜುನೇಜಾ ಅವರ ಕುಟುಂಬ ಹಾಗೂ ಅವರ ಸಿನಿ ಜರ್ನಿ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮೋಹನ್ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬರವಣಿಗೆ ಮೂಲಕ. ಸಾಕಷ್ಟು ಧಾರಾವಾಹಿಗಳಿಗೆ ಕಥೆ ಬರೆದಿದ್ದಾರೆ. ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮೂಲಕ ಪ್ರಸಿದ್ದಿಗೆ ಬಂದರು. ಮೋಹನ್ ಜುನೇಜಾ ಅವರು ನಮ್ಮನ್ನು ಬಿಟ್ಟು ವಿಧಿವಶರಾಗಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ನಟರು ದೊಡ್ಡವರ ಮನೆಯಲ್ಲಿ ಅಥವಾ ದೊಡ್ಡ ಕಲಾವಿದರ ಮನೆಯಲ್ಲಿ ಕಾರ್ಯಕ್ರಮ ಅಥವಾ ವಿಧಿವಶರಾದರೆ ಮಾತ್ರ ಹೋಗುತ್ತಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಮೋಹನ್ ಜುನೇಜಾ ಅವರನ್ನು ನೋಡಲು ಚಿತ್ರರಂಗದ ದೊಡ್ಡ ಕಲಾವಿದರು ಯಾರೂ ಬರಲಿಲ್ಲ ಎನ್ನುವುದು ಬೇಸರದ ಸಂಗತಿ. ಅವರೊಂದಿಗೆ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದವರು, ಧಾರಾವಾಹಿಗಳಲ್ಲಿ ಕಾಣಿಸಿಕೊಂಡವರು ಮಾತ್ರ ಬಂದಿದ್ದರು. ಮೋಹನ್ ಅವರ ಜಾಗದಲ್ಲಿ ದೊಡ್ಡ ಕಲಾವಿದರು ಇದ್ದಿದ್ದರೆ ಬರುತ್ತಿದ್ದರು. ಒಂದು ರೀತಿಯಲ್ಲಿ ಇಷ್ಟು ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದವರಿಗೆ ಕೊಡುವ ಗೌರವ ಇಷ್ಟೇನಾ ಎಂದು ಅನಿಸುತ್ತದೆ.

ಮೋಹನ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರ ಜೊತೆಯೂ ನಟಿಸಿದ್ದಾರೆ. ಯಶ್ ಅವರ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಸಿನಿಮಾ ಯಶಸ್ಸು ಪಡೆದರೆ ಅವರ ಯಶಸ್ಸಿನಲ್ಲಿ ಸಣ್ಣ ಸಣ್ಣ ಪಾತ್ರ ಮಾಡುವವರ ಶ್ರಮವು ಇರುತ್ತದೆ. ಚೆಲ್ಲಾಟ ಸಿನಿಮಾದಲ್ಲಿ ಮೋಹನ್ ಅವರ ಹಾಸ್ಯ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಚೆಲ್ಲಾಟ ಸಿನಿಮಾದ ಯಶಸ್ಸಿನಲ್ಲಿ ಮೋಹನ್ ಅವರ ಕೊಡುಗೆಯೂ ಇದೆ. ಕೆಲವು ಸ್ಟಾರ್ ನಟರು ಟ್ವೀಟ್, ಸ್ಟೇಟ್ ಮೆಂಟ್ ಕೊಟ್ಟು ಸುಮ್ಮನಾದರು. ಸಂಚಾರಿ ವಿಜಯ್, ಸತ್ಯಜಿತ್, ಶಿವರಾಂ ಇವರು ಇತ್ತೀಚೆಗೆ ವಿಧಿವಶರಾದರು ಇವರ ಅಂತಿಮ ದರ್ಶನಕ್ಕೆ ದೊಡ್ಡ ದೊಡ್ಡ ಕಲಾವಿದರು ಯಾರೂ ಬರಲಿಲ್ಲ. ಸಿನಿಮಾರಂಗ ಒಂದು ದೊಡ್ಡ ಕುಟುಂಬ, ಒಗ್ಗಟ್ಟಿದೆ ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ಸತ್ತವರ ಕುಟುಂಬದವರು ಭಾವನಾತ್ಮಕವಾಗಿ ಕುಗ್ಗಿಹೋಗಿರುತ್ತಾರೆ ಅವರಿಗೆ ಸಾಥ್ ಕೊಡಬೇಕಾಗುತ್ತದೆ.

ಪುನೀತ್ ಅವರು ಇದ್ದಿದ್ದರೆ ಅವರು ಹೋಗುತ್ತಿದ್ದರು ಎಂಬ ಅಭಿಪ್ರಾಯವಿದೆ. ಅನೇಕ ಕಾರ್ಯಕ್ರಮಗಳಲ್ಲಿ ಪುನೀತ್ ಅವರು ಸ್ಟಾರ್ ಗೆಸ್ಟ್ ಆಗಿ ಹೋಗುತ್ತಿದ್ದರು. ಉಳಿದ ನಟರಿಗೆ ಕರೆ ನೀಡಿದಾಗ ಅವರು ಬ್ಯೂಸಿ ಇರುತ್ತಿದ್ದರು ಆದರೆ ಪುನೀತ್ ಅವರು ಮಾತ್ರ ಸಾಮಾನ್ಯವಾಗಿ ಯಾವ ಕಾರ್ಯಕ್ರಮಕ್ಕೂ ಬರುವುದಿಲ್ಲ ಎಂದು ಹೇಳುತ್ತಿರಲಿಲ್ಲ. ಸಣ್ಣ ಸಣ್ಣ ಪಾತ್ರ ಮಾಡುವವರು ಇರುವುದರಿಂದಲೆ ಸ್ಟಾರ್ ನಟ ಎಂಬ ಪಟ್ಟ ಬರುವುದು ಎಂಬುದನ್ನು ಸ್ಟಾರ್ ನಟರು ಮರೆಯಬಾರದು. ಮೋಹನ್ ಅವರು ಪ್ರಾರಂಭದಲ್ಲಿ ಸೀರಿಯಲ್ ಗಳಲ್ಲಿ ಕಥೆ, ಸಂಭಾಷಣೆ ಬರೆಯುತ್ತಾರೆ.

ನಂತರ ಟೈಗರ್ ಪ್ರಭಾಕರ್ ಅವರು ತಮ್ಮ ಸಿನಿಮಾದಲ್ಲಿ ಒಂದು ಪಾತ್ರ ಕೊಡುತ್ತಾರೆ. ನಂತರ ಚೆಲ್ಲಾಟ ಸಿನಿಮಾದಲ್ಲಿ ಮಾಡಿದ ಹಾಸ್ಯ ಪಾತ್ರದಿಂದ ಅವರ ಜೀವನದ ದಿಕ್ಕು ಬದಲಾಗುತ್ತದೆ. ನಂತರ ನವಗ್ರಹ, ಜೋಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಮಾರು ಅವರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಪತ್ನಿ ಈಗಲೂ ಸಹ ರೇಷ್ಮೆಗೆ ಕುಚ್ಚು ಹಾಕುವ ಕೆಲಸವನ್ನು ಹಾಗೂ ಪುಳಿಯೋಗರೆ ಗೊಜ್ಜನ್ನು ಮಾಡಿ ಮಾರಾಟ ಮಾಡುತ್ತಾರೆ. ಮೋಹನ್ ಅವರಿಗೆ ಬರುವ ಸಂಬಳದಿಂದ ಕುಟುಂಬ ನಡೆಯುವುದು ಕಷ್ಟವಾಗಿತ್ತು. ಬಹಳ ಕಷ್ಟಪಟ್ಟು ಒಂದು ಮನೆಯನ್ನು ನಿರ್ಮಿಸಿದ್ದರು ಆ ಮನೆಯೆ ನಮ್ಮ ಆಸ್ತಿ ಎಂದು ಮೋಹನ್ ಅವರೆ ಹೇಳಿಕೊಂಡಿದ್ದರು.

ಮೋಹನ್ ಅವರಿಗೆ ಇಬ್ಬರು ಗಂಡುಮಕ್ಕಳು, ಮೊದಲ ಮಗ ಮೊದಲು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದರು ಕೊರೋನ ಸಮಯದಲ್ಲಿ ಕೆಲಸ ಕಳೆದುಕೊಂಡು ಈಗ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಮದುವೆಯಾಗಿದೆ. ಎರಡನೆ ಮಗ ಸಣ್ಣ ಪುಟ್ಟ ಕೆಲಸ ಮಾಡುತ್ತಾರೆ, ಅವರು ಕೂಡ ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ಹೊಂದಿದ್ದಾರೆ. ಈಗಲೂ ಅವರ ಕುಟುಂಬ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಮೋಹನ್ ಜುನೇಜಾ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರ ಸ್ವಾಭಿಮಾನದ ಬಗ್ಗೆ ಎಲ್ಲರು ಮಾತನಾಡುತ್ತಾರೆ. ನೋಡಲು ವರಟು ಸ್ವಭಾವದಂತೆ ಕಂಡುಬಂದರೂ ಎಲ್ಲರೊಂದಿಗೂ ಬೇಗನೆ ಬೆರೆಯುತ್ತಿದ್ದರು. ಹಿರಿಯ ಕಲಾವಿದರಿಗೆ ಗೌರವ ಕೊಡುತ್ತಿದ್ದರು, ಹೊಸ ಕಲಾವಿದರಿಗೆ ಬೆನ್ನು ತಟ್ಟುತ್ತಿದ್ದರು. ಅವರು ವಿಪರೀತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಇದರಿಂದ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರು

ಅತಿಯಾದ ಸೇವನೆಯಿಂದ ಹಾರ್ಟ್ ಸರ್ಜರಿ ಮಾಡಲಾಗಿತ್ತು. ಮದ್ಯಸೇವನೆಯಿಂದ ಅವರ ಲಿವರ್ ಕಂಪ್ಲೀಟ್ ಆಗಿ ಡ್ಯಾಮೇಜ್ ಆಗಿದೆ ಆದರೆ ಇತ್ತೀಚೆಗೆ ಅವರು ಮದ್ಯಸೇವನೆಯನ್ನು ಕಂಪ್ಲೀಟ್ ಆಗಿ ಬಿಟ್ಟಿದ್ದರು. ಒಂದು ರೀತಿಯಲ್ಲಿ ಅವರ ಬದುಕನ್ನು ಅವರೆ ಅಂತ್ಯ ಮಾಡಿಕೊಂಡರು ಎಂದು ಹೇಳಿದರೆ ತಪ್ಪಾಗಲಾರದು. ಮೋಹನ್ ಅವರ ಸಾವು ಎಲ್ಲರಿಗೂ ಪಾಠವಾಗಬೇಕಿದೆ, ಈ ಮೂಲಕ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಆದ್ದರಿಂದ ದಯವಿಟ್ಟು ದೂರವಿರಿ, ನಿಮ್ಮ ಕುಟುಂಬದವರನ್ನು ಸಂತೋಷವಾಗಿಡಿ.

Leave a Reply

Your email address will not be published. Required fields are marked *