ಇವತ್ತು ಆಯುರ್ವೇದ ಮನೆ ಮದ್ದಿನಲ್ಲಿ ಪಿತ್ತಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ, ಪಿತ್ತ ಅಂದರೆ ಏನು? ಹೇಗೆ ಉಂಟಾಗತ್ತೆ ಹಾಗೂ ಅದಕ್ಕೆ ಮನೆ ಮದ್ದು ಏನು ಅನ್ನೋದನ್ನ ತಿಳಿದುಕೊಳ್ಳೋಣ.
ಪಿತ್ತ ಎಂದರೆ ಏನು? ಪಿತ್ತ ಅಂದರೆ, ಉದರ ವಾಯು, ಆಮ್ಲ ಪ್ರತ್ಯಾಮ್ಲ, ಹೊಟ್ಟೆ ಹುಣ್ಣು ಇವೆಲ್ಲವನ್ನೂ ಪಿತ್ತ ಅಂತ ಹೇಳಬಹುದು. ಪಿತ್ತ ಹೇಗೆ ಉಂಟಾಗತ್ತೆ? ಪಿತ್ತ ಆಗಲು ಮೂಲ ಕಾರಣ ಏನು ಅಂದರೆ, ಅತಿಯಾದ ಚಹಾ, ಕಾಫಿ ಸೇವನೆ, ರಕ್ತದ ಒತ್ತಡ, ನಿದ್ರೆ ಗೆಡುವುದು, ಅನಿಯಮಿತ ಆಹಾರ ಸೇವನೆ, ತಡ ಆಹಾರ ಸೇವನೆ, ಅರ್ಧ ಜೀರ್ಣ ರೋಗ, ಮಧ್ಯಪಾನ, ಧೂಮ ಪಾನ, ಉಪವಾಸ ಮಾಡುವುದು, ಕಡಿಮೆ ನೀರು ಸೇವನೆ ಮಾಡುವುದು ಇತ್ಯಾದಿ ತೊಂದರೆಗಳಿಂದ ಈ ಪಿತ್ತ ಬರುತ್ತದೆ.
ಹಾಗಾದ್ರೆ ಈ ಪಿತ್ತಕ್ಕೆ ಮನೆ ಮದ್ಧು ಏನು? ಸುಲಭವಾದ ಮನೆ ಮದ್ದು ಇದೆ ನೋಡಿ. ಕೃಷ್ಣ ತುಳಸಿಯನ್ನ ಸೇವಿಸುವುದರಿಂದ ಪಿತ್ತ ನಿವಾರಣೆ ಆಗತ್ತೆ. ಒಂದು ಲೋಟ ಜೀರಿಗೆ ಕಷಾಯಕ್ಕೆ ಒಂದು ಚಿಟಕಿ ಏಲಕ್ಕಿ ಪುಡಿ ಬೆರಸಿ ಕುಡಿದರೆ ಪಿತ್ತನಿವಾರಣೆ ಆಗತ್ತೆ. ದಾಳಿಂಬೆ ಹಣ್ಣನ್ನು ಬಳಸುವುದರಿಂದ ಪಿತ್ತ ಶಮನ ಆಗುತ್ತದೆ. ನೇರಳೆ ಹಣ್ಣನ್ನು ತಿನ್ನುವುದರಿಂದ ಪಿತ್ತ ಶಮನ ಆಗುತ್ತದೆ. ಬೆಲದ ಹಣ್ಣನಿನ ತಿರುಳಿಗೆ ಸಮ ಭಾಗದ ಸಕ್ಕರೆ ಸೇವಿಸಿ ತಿನ್ನುವುದರಿಂದಲೂ ಸಹ ಪಿತ್ತ ಶಮನ ಆಗುತ್ತದೆ. ಎಳೆಯ ಹಲಸಿನಕಾಯಿಯ ಪಲ್ಯ, ಹುಳಿ ಮಾಡಿ ಸೇವಿಸುವುದರಿಂದ ಪಿತ್ತ ನಿವಾರಣೆ ಆಗುತ್ತದೆ. ಮೆಂತೆ ಸೊಪ್ಪನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಪಿತ್ತ ಶಮನ ಆಗುತ್ತದೆ.
ಪ್ರತೀ ದಿನ ಊಟದ ನಂತರ ಒಂದು ಚೂರು ಶುಂಠಿ ಅಗೆದು ಚಪ್ಪರಿಸುವುದರಿಂದ ಪಿತ್ತ, ಹೊಟ್ಟೆ ಹುಣ್ಣು, ಅಜೀರ್ಣ ಸಮಸ್ಯೆ ದೂರ ಆಗತ್ತೆ. ಚಪ್ಪರದ ಅವರೆಕಾಯಿ ತಿನ್ನುವುದರಿಂದ ಪಿತ್ತ ದೂರ ಆಗತ್ತೆ. ಅಳಲೇ ಕಾಯಿಯ ಕಷಾಯ ಅಥವಾ ಚೂರ್ಣವನ್ನು ಬಿಸಿ ನೀರು ಅಥವಾ ಜೇನು ತುಪ್ಪದಲ್ಲಿ ಬೆರೆಸಿ ಸೇವಿಸುವುದರಿಂದ ಪಿತ್ತ ಕಡಿಮೆ ಆಗುತ್ತದೆ. ಆಕೃಟ್ ಹಾಗೂ ಅನಾನಸ್ ಹಣ್ಣು ಪಿಂಡರೆ ಪಿತ್ತ ನಿವಾರಣೆ ಆಗುತ್ತದೆ. ಇವಿಷ್ಟು ಪಿತ್ತ ಹಾಗೂ ಹೊಟ್ಟೆ ಉಬ್ಬರ ಇವುಗಳಿಗೆ ಸುಲಭವಾದ ಮನೆಮದ್ದುಗಳು.