ನವರಸನಾಯಕನೆಂದೇ ಖ್ಯಾತಿಯಾಗಿರುವ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕ. ಚಿತ್ರರಂಗ ಮಾತ್ರವಲ್ಲದೇ ರಾಜಕಾರಣದಲ್ಲೂ ಸಕ್ರಿಯವಾಗಿರುವ ಇವರು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ನವಿರಾದ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಡುವ ಜಗ್ಗೇಶ್ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
1963 ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಈಶ್ವರ ಗೌಡ. ಇವರು ಮೂಲತಃ ತುಮಕೂರು ಜಿಲ್ಲೆಯ ಜಡೆ ಮಾಯಸಂದ್ರದವರು. ಇವರಿಗೆ ಇಬ್ಬರು ಸಹೋದರ ಮತ್ತು ಸಹೋದರಿಯರಿದ್ದಾರೆ. ಇವರ ಸಹೋದರ ಕೋಮಲ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಇವರು ಪರಿಮಳರವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಇವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತುಂಬಾ ಏಳು ಬೀಳುಗಳನ್ನು ಕಂಡು ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಮೇಲೆ ಬಂದವರಲ್ಲಿ ನವರಸ ನಾಯಕ ಜಗ್ಗೇಶ್ ಅವರು ಕೂಡ ಒಬ್ಬರು. ಇಂದು ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟರಾಗಿ ಬೆಳೆದಿದ್ದಾರೆ. ಕೇವಲ ಸಿನಿಮಾ ರಂಗ ಮಾತ್ರವಲ್ಲದೇ ರಾಜಕೀಯದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನೂ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಹಾಗೂ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.
ಇನ್ನೂ ಜಗ್ಗೇಶ್ ಹಾಗು ಪರಿಮಳ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜಗ್ಗೇಶ್ ಅವರ ಹಿರಿಯ ಪುತ್ರನಾದ ಗುರುರಾಜ್ ಅವರು ಕೂಡ ಗಿಲ್ಲಿ ಗುರು ಸೇರಿದಂತೆ ಇನ್ನೂ ನಾಲ್ಕೈದು ಕನ್ನಡ ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಇನ್ನೂ ಜಗ್ಗೇಶ್ ಅವರ ಹಿರಿಯ ಪುತ್ರ ಅವರದ್ದು ಕೂಡ ತಮ್ಮ ತಂದೆ ತಾಯಿಯರ ಹಾಗೆ ಲವ್ ಮ್ಯಾರೇಜ್ ಎನ್ನುವುದು ವಿಶೇಷ. ಅದರಲ್ಲೂ ವಿದೇಶದ ಹುಡುಗಿ ಒಬ್ಬರನ್ನು ಲವ್ ಮಾಡಿ ಮದುವೆ ಆಗಿರುವುದು ಇನ್ನೂ ವಿಶೇಷ. ಗುರುರಾಜ್ ಅವರು ಹಾಲಿವುಡ್ ಹುಡುಗಿ ಒಬ್ಬರನ್ನು ಮೂರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನೂ ಇವರ ಪ್ರೀತಿಗೆ ಜಗ್ಗೇಶ್ ಹಾಗು ಪರಿಮಳ ಅವರು ವಿಶಾಲವಾದ ಹೃದಯದಿಂದ ಒಪ್ಪಿಕೊಂಡಿದ್ದರು. ಗುರುರಾಜ್ ಪಾರಿನ್ ಪತ್ನಿ ಅವರು 2014 ರಲ್ಲಿ ಮದುವೆಯಾಗಿದ್ದರು. ಇನ್ನೂ ಗುರುರಾಜ್ ಹಾಗು ಅವರ ಪತ್ನಿಗೆ ಒಬ್ಬ ಗಂಡು ಮಗ ಇದ್ದಾನೆ.
ಜಗ್ಗೇಶ್ ಅವರ ಮಗ ಗುರುರಾಜ್ ಅವರು ಹಾಲಿವುಡ್ ಹುಡಗಿ ಒಬ್ಬರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ವಿದೇಶಿ ಹುಡುಗಿ ಒಬ್ಬಳು ಕರ್ನಾಟಕದ ಹುಡುಗನನ್ನ ಪ್ರೀತಿಸಿ ಮದುವೆಯಾಗಿ ಇಲ್ಲಿಯ ಆಚಾರ ಸಂಪ್ರದಾಯಗಳಿಗೆ ಹೊಂದಿಕೊಂಡು ಹೋಗುತ್ತಿರುವುದು ತುಂಬಾ ಖುಷಿಯ ಸಂಗತಿ. ಜಗ್ಗೇಶ್ ಹಾಗೂ ಪರಿಮಳ ಅವರು ಸಹ ಪ್ರೀತಿಸಿ ಮದುವೆಯಾದವರು. ಹಾಗೆ ಮಗನ ಪ್ರೀತಿಯನ್ನು ಒಪ್ಪಿಕೊಂಡರು. ಪರಿಮಳ ಅವರು ತಮ್ಮ ಫಾರಿನ್ ಸೊಸೆಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ಸೊಸೆಗೆ ಇಲ್ಲಿ ಬಂದಮೇಲೆ ನಮ್ಮ ಜೊತೆ ತುಂಬಾ ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದಾಳೆ. ಆಕೆ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದಾಳೆ. ಇಲ್ಲಿಗೆ ಬಂದಮೇಲೆ ಇಲ್ಲಿಯ ಊಟ ತಿಂಡಿ ಆಚಾರ ವಿಚಾರ ಸಂಸ್ಕೃತಿ ಎಲ್ಲದಕ್ಕೂ ಹೊಂದಿಕೊಂಡು ಪೂರ್ತಿ ಚೇಂಜ್ ಆಗಿದ್ದಾರೆ ಅಂದರು.
ಋಣಾನುಬಂಧ ಅನ್ನೋದು ಎಲ್ಲಿ ಇದ್ದೊರನ್ನು ಎಲ್ಲಿಗೋ ಸೇರಿಸುತ್ತೆ. ಆಕೆ ವಿದೇಶಿ ಹುಡುಗಿ ಆಗಿ ಬೆಳೆದು ನಮ್ಮ ಕರ್ನಾಟಕಕ್ಕೆ ಬಂದು ಇಲ್ಲಿ ತಮಗೆ ಆದಷ್ಟು ಮಟ್ಟಿಗೆ ಹೊಂದಿಕೊಂಡು ಹೋಗುವುದು ಸುಲಭದ ಮಾತಾಗಿರಲಿಲ್ಲ. ನನ್ನ ಮಗ ಸೊಸೆ ಖುಷಿ ಖುಷಿ ಆಗಿ ಜೀವನ ನಡೆಸುತ್ತಾ ಇದಾರೆ. ಅವರು ಮದುವೆ ಆಗಿ ಎಂಟು ವರ್ಷಗಳೆ ಕಳೆದಿದೆ. ಅವರ ಸಂತೋಷವೇ ಮುಖ್ಯ ನಮಗೆ ಅದಕ್ಕಿಂತ ಹೆಚ್ಚಾಗಿ ಏನು ಬೇಡ ಅಂದರು. ತಮ್ಮ ಸೊಸೆ ಕೆಟಿ ತುಂಬಾ ಓದಿದ್ದಾರೆ ಆಕೆ ಟ್ರಿಪಲ್ ಗ್ರತುಯೇಟ್ಡ್ ಮತ್ತು ಪೀ. ಹೆಚ್ ಡಿ ಕೂಡಾ ಆಗಿದೆ ಎಂದರು. ಇಷ್ಟು ವರ್ಷದಲ್ಲಿ ತಮ್ಮ ನಡುವೆ ಯಾವುದೇ ಮನಸ್ತಾಪ ಬಂದಿಲ್ಲ. ಮುಂದೆ ಬರುವುದು ಇಲ್ಲ. ನಮ್ಮ ಯೋಚನೆ ದೊಡ್ಡದಾಗಿರಲಿ ಎನ್ನುತ್ತಾರೆ ಪರಿಮಳ ಜಗ್ಗೇಶ್ ಒಟ್ಟಾರೆ ಇವರ ಸುಖಿ ಸಂಸಾರಕ್ಕೆ ಯಾರ್ ಕಣ್ಣು ಬೀಳದೆ ಯಾವಾಗಲೂ ಖುಷಿ ಆಗಿ ಇರಲಿ ಎಂದು ಹಾರೈಸೋಣ.