ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ, ಪ್ರೇಮಾ ಅವರು ತಮ್ಮ ನಟನೆಯಿಂದ ಜನರನ್ನು ಆಕರ್ಷಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಮಾಯವಾದ ಪ್ರೇಮಾ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದರು ಎಂದರೆ ತಪ್ಪಾಗಲಾರದು. ನಟಿ ಪ್ರೇಮಾ ಅವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ನಟಿ ಪ್ರೇಮಾ ಅವರು ಎತ್ತರವಾಗಿದ್ದು ನೋಡಲು ಸುಂದರವಾಗಿದ್ದಾರೆ. ಅವರು ಸಿನಿಮಾಗಳಲ್ಲಿ ಬಹಳ ತೂಕವಿರುವ, ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರೇಮಾ ಅವರು ಗೌರವ ಕೊಡುವಂತಹ ಬಟ್ಟೆಗಳನ್ನು ತೊಡುತ್ತಿದ್ದರು ಯಾವ ಸಿನಿಮಾದಲ್ಲಿ ಮುಜುಗರ ಉಂಟುಮಾಡುವ ಬಟ್ಟೆಗಳನ್ನು ಧರಿಸಿಲ್ಲ. ಹೀಗಿರುವ ಪ್ರೇಮಾ ಅವರು 10-15 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿ ಚಿತ್ರರಂಗವನ್ನು ಆಳಿದರು.

ಕನ್ನಡ ಚಿತ್ರರಂಗದಲ್ಲಿ ಇಷ್ಟು ಹೆಸರು ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಪ್ರೇಮಾ ಅವರು ನನಗೆ ದೇವರು ಕೊಟ್ಟ ಉಡುಗೊರೆ, ನಾನು ಮಾಡುವ ಪಾತ್ರ ಹಾಗಿತ್ತು ಜೊತೆಗೆ ನಿರ್ದೇಶಕರಿಗೆ ನನ್ನ ಮೇಲೆ ಆತ್ಮವಿಶ್ವಾಸ ಇತ್ತು, ಪ್ರೇಮಾ ಈ ಪತ್ರವನ್ನು ನಿಭಾಯಿಸುತ್ತಾರೆ ಎಂದು. ನನಗೆ ಗ್ಲಾಮರಸ್ ಪಾತ್ರ ಮುಖ್ಯವಾಗಿರಲಿಲ್ಲ ಏಕೆಂದರೆ ನಮ್ಮ ಬಗ್ಗೆ ಜನರಿಗೆ ಗೊತ್ತಾಗಬೇಕಾದರೆ ನಾವು ನಟನೆಯಲ್ಲಿ ಕ್ಯಾರೆಕ್ಟರ್ ತೋರಿಸಬೇಕು. ಗ್ಲಾಮರಸ್ ಪಾತ್ರದಲ್ಲಿ ಅದು ಸಾಧ್ಯವಿಲ್ಲ. ಇನ್ನೊಂದು ವಿಷಯವೆಂದರೆ ಗ್ಲಾಮರಸ್ ನಲ್ಲಿ ಉತ್ತಮ ಕ್ಯಾರೆಕ್ಟರ್ ಹೊಂದಿರುವ ಪಾತ್ರ ಮಾಡಲು ನನಗೆ ಅವಕಾಶ ಸಿಗಲಿಲ್ಲ.

ಹಿಂದೊಮ್ಮೆ ಮುಂಬೈನಲ್ಲಿ ಸಲ್ಮಾನ್ ಖಾನ್ ಜೊತೆ ಸಿನಿಮಾದಲ್ಲಿ ನಟಿಸಲು ಪ್ರೇಮಾ ಅವರಿಗೆ ಆಫರ್ ಬಂದಿತ್ತು ಆದರೆ ಆ ಸಿನಿಮಾದಲ್ಲಿ ಸ್ವಿಮ್ಮಿಂಗ್ ಡ್ರೆಸ್ ಹಾಕಲು ಹೇಳಿದರು ಅದಕ್ಕೆ ಪ್ರೇಮಾ ಅವರು ನಾನು ಇಲ್ಲಿಯೆ ಕನ್ನಡ ಚಿತ್ರರಂಗದಲ್ಲಿ ಖುಷಿಯಾಗಿದ್ದೇನೆ, ನನಗೆ ಆಸಕ್ತಿ ಇಲ್ಲವೆಂದು ನಯವಾಗಿ ತಿರಸ್ಕರಿಸಿದರು. ಪ್ರೇಮಾ ಅವರು ಬಾಲಿವುಡ್ ನಲ್ಲಿ ಬಂದಿರುವ ಅವಕಾಶ ಇಷ್ಟವಾಗದ ಕಾರಣ ಅದನ್ನು ಒಪ್ಪಿಕೊಳಲ್ಲಿಲ್ಲ. ಪ್ರೇಮಾ ಅವರು ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್, ಉಪೇಂದ್ರ, ವಿಷ್ಣುವರ್ಧನ್, ರಮೇಶ್ ಅರವಿಂದ್ ಮೊದಲಾದ ಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅವರು ನಟಿಸಿದ ಸಿನಿಮಾಗಳು ನಾಗದೇವತೆ, ಕೌರವ, ನನ್ನವಳು ನನ್ನವಳು, ಏಕದಂತ, ಕ್ಷಣ ಕ್ಷಣ, ಆಪ್ತಮಿತ್ರ, ರಣಚಂಡಿ, ಪಾಂಡು ರಂಗ ವಿಠಲ ಮೊದಲಾದ ಸಿನಿಮಾಗಳಲ್ಲಿ ಪ್ರೇಮಾ ಅವರು ನಟಿಸಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಪ್ರೇಮಾ ಅವರ ಅಭಿಮಾನಿಗಳಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!