ದಕ್ಷಿಣ ಭಾರತ ಚಿತ್ರರಂಗದ ಆಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿರುವವರು ನಟ ಅರ್ಜುನ್ ಸರ್ಜಾ. ಇವರು ಸರ್ಜಾ ಕುಟುಂಬದ ಗೌರವವನ್ನು ಎತ್ತಿ ಹಿಡಿಯುತ್ತಿರುವ ಮಗ. ಅರ್ಜುನ್ ಸರ್ಜಾ ಅವರು ಕನ್ನಡ ಚಿತ್ರರಂಗಕ್ಕಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ನಟ ಶಕ್ತಿ ಪ್ರಸಾದ್ ಅವರ ಮಗ. ಇಂದು ದಕ್ಷಿಣ ಭಾರತದ ಆಕ್ಷನ್ ಕಿಂಗ್ ಎಂದು ಖ್ಯಾತಿ ಪಡೆದು, ಎಲ್ಲರ ಫೇವರೆಟ್ ನಟ ಆಗಿದ್ದಾರೆ.

ಅರ್ಜುನ್ ಸರ್ಜಾ ಅವರು ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರ ತಂದೆ ನಟರಾಗಿದ್ದ ಕಾರಣ ಅವಕಾಶ ಸುಲಭವಾಗಿ ಸಿಕ್ಕಿದರು ಕೂಡ ತಮ್ಮ ಪ್ರತಿಭೆಯಿಂದ ಮುಂದೆ ಬಂದವರು ಅರ್ಜುನ್ ಸರ್ಜಾ. ಅರ್ಜುನ್ ಅವರಿಗೆ ಒಬ್ಬ ಅಣ್ಣ ಸಹ ಇದ್ದರು, ಅವರ ಹೆಸರು ಅವರ ಹೆಸರು ಕಿಶೋರ್ ಸರ್ಜಾ, ಕಿಶೋರ್ ಅವರು ಈಗ ಇಲ್ಲ.

ಅರ್ಜುನ್ ಅವರು ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿ, ನಂತರ ಹೀರೋ ಆದರು. ಕನ್ನಡ ಚಿತ್ರರಂಗದ ಮೂಲಕ ನಟನೆ ಶುರು ಮಾಡಿ, ನಂತರ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದರು. ಸಾಹಸ, ಲವ್ ಸ್ಟೋರಿ, ಸೆಂಟಿಮೆಂಟ್ ಎಲ್ಲಾ ರೀತಿಯ ಕಥೆಗಳಲ್ಲೂ ಅದ್ಭುತವಾಗಿ ನಟಿಸಿ ಹಿಟ್ ಹೀರೋ ಎನ್ನಿಸಿಕೊಂಡವರು ಅರ್ಜುನ್.

ಈಗ ಅರ್ಜುನ್ ಅವರಿಗೆ 55 ವರ್ಷದ ಮೇಲಾಗಿದ್ದರು, ಈಗಲೂ ಬಹಳ ಫಿಟ್ ಆಗಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಕನ್ನಡದ ಹಿರಿಯನಟ ರಾಜೇಶ್ ಅವರ ಮಗಳು ರಥಸಪ್ತಮಿ ಸಿನಿಮಾದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿದ್ದ ನಿವೇದಿತಾ ಅವರ ಜೊತೆ ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇವರ ಮೊದಲ ಮಗಳು ಐಶ್ವರ್ಯ, ಎರಡನೇ ಮಗಳು ಅಂಜನ. ಐಶ್ವರ್ಯ ಪ್ರೇಮ ಬರಹ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಎರಡು ಕಡೆಗೂ ಎಂಟ್ರಿ ಕೊಟ್ಟರು. ಅಂಜನ ಅವರು ಇನ್ನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಆದರೆ ಇವರು ಸಹ ಅಕ್ಕನ ಹಾಗೆ ನೋಡಲು ಬಹಳ ಸುಂದರವಾಗಿದ್ದಾರೆ.

ಇತ್ತೀಚೆಗೆ ಅಷ್ಟೇ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಅರ್ಜುನ್ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲಾಯಿತು. ಅರ್ಜುನ್ ಸರ್ಜಾ ಅವರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪಾರ್ಟಿ ನೀಡಿದ್ದರು. ಈ ಸರ್ಪ್ರೈಸ್ ನೋಡಿ ಅವರ ಮಗಳು ಅಂಜನಾ ಕುಣಿದು ಕುಪ್ಪಳಿಸಿದರು. ನಟಿ ಐಶ್ವರ್ಯ ಅವರ ತಂಗಿ ಅಂಜನಾ ಅವರ ಬರ್ತ್‌ಡೇ ಸೆಲೆಬ್ರೇಷನ್‌ನ ಫೋಟೋಗಳನ್ನು ಐಶ್ವರ್ಯ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಬರ್ತ್‌ಡೇ ಗರ್ಲ್ ಅಂಜನಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Leave a Reply

Your email address will not be published. Required fields are marked *