ರಾತ್ರಿ ಇರೋದು ಹಗಲಿಡೀ ನಾವು ಶ್ರಮ ಪಟ್ಟಗ ಆಗುವ ಸುಸ್ತು ಅದರಿಂದ ವಿಶ್ರಾಂತಿ ಪಡೆಯೋಕೆ. ಸುಸ್ತು ಆಗಿರುವ ದೇಹವನ್ನ ವಿಶ್ರಾಂತಿ ಪಡೆಯೋಕೆ ಅಂತ ದೇವರು ನಿದ್ರೆ ಅನ್ನೋದನ್ನ ನಮಗೆ ಕೊಟ್ಟಿದ್ದಾನೆ. ಆ ನಿಟ್ಟಿನಲ್ಲಿ ನಮ್ಮ ದೇಹದ ಬೇರೆ ಯಾವ ಅಂಗಗಳು ಕೆಲಸ ಮಾಡದೆ ನಿಧಾನವಾಗಿ ನಿದ್ರೆಗೆ ಜಾರಬೇಕು. ಆದ್ರೆ ನಾವು ಈಗಿನ ಕಾಲದಲ್ಲಿ ಯಾವುದೋ ಸಮಯಕ್ಕೆ ಊಟ ಯಾವುದೋ ಸಮಯಕ್ಕೆ ನಿದ್ರೆ ಮಾಡೋದು ಮಾಡ್ತಾ ಇದ್ದೀವಿ. ೧೧/೧೨ ಗಂಟೆವರೆಗೂ ತಿನ್ನುತ್ತಾ ಇದ್ದರೆ ದೇಹಕ್ಕೆ ಪಚನ ಕ್ರಿಯೆ ಆದರೂ ಹೇಗೆ ಆಗತ್ತೆ? ಪಚನ ಆಗಿವಾಗ ಜಠರ ಎಲ್ಲಾ ಕೆಲಸ ಮಾಡ್ತಾ ಇರೋವಾಗ ದೇಹಕ್ಕೆ ನಿದ್ರೆ ಆದ್ರೂ ಹೇಗೆ ಬರತ್ತೆ? ನಮ್ಮ ದೇಹಕ್ಕೆ ಸುಸ್ತಿನಿಂದ ಹೊರಗೆ ಬರೋಕೆ, ಚೈತನ್ಯ ಬೇಕು ಅಂದರೆ ವಿರಾಮ ಬೇಕು ಅದಕ್ಕೆ ನಿದ್ರೆ ಸರಿಯಾಗಿ ಆಗಬೇಕು. ನಮ್ಮ ದೇಹದ ಒಳಗಡೆ ಅಂಗಾಂಗಗಳು ವಿರಾಮ ತೆಗೆದುಕೊಳ್ಳಬೇಕು ಹಾಗು ನಮ್ಮ ಯೋಚನೆಗಳೂ ಸಹ ವಿರಾಮ ತೆಗೆದುಕೊಳ್ಳಬೇಕು. ಅಂದಾಗ ಮಾತ್ರ ನಿಜವಾದ ನಿದ್ರೆ ಬರೋದು.
ನಾವು ನಿದ್ರೆ ಮಾಡಬೇಕು ಅಂದ್ರೆ ಬೆಳಕು ಇರಬಾರದು. ಆದರೆ ಈಗ ಪ್ರತೀ ಬೀದಿಯಲ್ಲಿ ಲೈಟ್ ಇರತ್ತೆ ಅದರ ಜೊತೆಗೆ ಹಲವಾರು ವಿದ್ಯುತ್ ಉಪಕರಣಗಳು ಇವೆಲ್ಲ ನಮ್ಮ ದೇಹ ಬೇಗ ನಿದ್ರೆಗೆ ಜಾರದಂತೆ ತಡೇಯತ್ತೆ. ಕಣ್ಣಿಗೆ ಬೆಳಕು ಬೀಳ್ತಾ ಇದ್ರೆ ಬೇಗ ನಿದ್ದೆ ಬರಲ್ಲ ಕತ್ತಲಲ್ಲಿ ಇದ್ದಾಗ ಬೇಗ ನಿದ್ದೆ ಬರತ್ತೆ. ಹಾಗಾಗಿ ಮಲಗುವ ಕೋಣೆಗೆ ಕಿಟಕಿ ಎಲ್ಲದಕ್ಕೂ ಡಾರ್ಕ್ ಕರ್ಟನ್ ಹಾಕಿ ಬೇಗ ಊಟ ಮುಗಿಸಿ ಮಲಗುವ ೫/೧೦ ನಿಮಿಷ ಮೊದಲು ಉಚ್ವಾಶ ನಿಷ್ವಾಸ ಮಾಡಿ ಅದನ್ನ ಗಮನಿಸಿ ಹಾಗೆ ದೇವರ ಪ್ರಾರ್ಥನೆ ಮಾಡಬೇಕು. ಇನ್ನೂ ಮಾಂಸಾಹಾರ ತಿನ್ನುವವರು ಅದನ್ನ ಬಿಡಬೇಕಾಗುತ್ತದೆ. ಯಾಕಂದ್ರೆ, ಮಾಂಸಾಹಾರ ದಿಂದ ಪಚನ ಕ್ರಿಯೆ ೧೦ ಪಟ್ಟು ಹೆಚ್ಚು ಆಗಬೇಕಾಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ಕೊಬ್ಬು ಶೇಖರಣೆ ಆಗತ್ತೆ. ಕೊಬ್ಬು ಕೊನೆಯ ಹಂತ ಎಲ್ಲಾ ಗ್ಲೂಕೋಸ್ ಗಳು ಕೊನೆಗೆ ಕೊಬ್ಬು ಆಗಿ ಪರಿಣಾಮ ಹೊಂದುತ್ತವೆ. ಹಾಗಾಗಿ ಸರಾಗವಾಗಿ ಜೀರ್ಣ ಆಗುವ ಆಹಾರವನ್ನು ತಿಂದು ಮಲಗಿದರೆ ನಿದ್ದೆ ಚೆನ್ನಾಗಿ ಬರತ್ತೆ. ಇದರ ಜೊತೆಗೆ ದೈಹಿಕ ಶ್ರಮ ಇಲ್ಲದೆ ಹೋದರೆ ಕೂಡ ನಿದ್ದೆ ಬರಲ್ಲ. ಹಾಗಾಗಿ ಸಂಜೆ ಸಮಯದಲ್ಲಿ ಒಂದು, ಒಂದೂವರೆ ಗಂಟೆ ಪ್ರತೀ ದಿನ ವಾಕ್ ಮಾಡಬೇಕು. ಇದರಿಂದ ದೇಹಕ್ಕೆ ಆಯಾಸ ಆಗಿ ಚೆನ್ನಾಗಿ ನಿದ್ದೆ ಬರತ್ತೆ.
ಇತ್ತೀಚಿಗೆ ಕೆಲವರು ಬೇಕು ಅಂತಲೇ ಕೆಲವು ಮಾತ್ರೆಗಳನ್ನು ಸೇವಿಸುತ್ತಾರೆ. ನಮ್ಮ ಯೋಚನಾ ಲಹರಿ ಯನ್ನ ಕಡಿಮೆ ಮಾಡಬೇಕು ಯಾವಾಗ ನಾವು ಯೋಚನೆಗಳನ್ನು ಹಾಗೆ ನಿಲ್ಲಿಸ್ತೇವಿ ಆಗ ನಮಗೆ ಅದರಿಂದ ಚೆನ್ನಾಗಿ ನಿದ್ದೆ ಬರತ್ತೆ. ಇನ್ನೂ ಮಲಗಿದ ಮೇಲೆ ಪದೇ ಪದೇ ಮೂತ್ರ ವಿಸರ್ಜನೆಗೆ ಅಂತ ಎಳ್ತ ಇರಬೇಕು ಇದರಿಂದ ನಿದ್ದೆ ಸರಿಯಾಗಿ ಆಗಲ್ಲ. ಹಾಗಾಗಿ ಮೊದಲೇ ನಮ್ಮ ಆಹಾರ ಕ್ರಮವನ್ನು ಸರಿಯಾಗಿ ಮಾಡಿಕೊಳ್ಳಬೇಕು. ಸಿರಿ ಧಾನ್ಯಗಳನ್ನು ತಿನ್ನಬೇಕು ಇವೆಲ್ಲ ನಮ್ಮ ಪಚನ ಕ್ರಿಯೆಗೆ ಬೇಕು. ನಮ್ಮ ಪಚನ ಕ್ರಿಯೆ ಸರಿಯಾಗಿ ಆದರೆ ಹಾಗೂ ಅದರ ಜೊತೆಗೇ ಸ್ವಲ್ಪ ದೈಹಿಕ ಶ್ರಮ ಇದ್ದರೆ ಖಂಡಿತವಾಗಿಯೂ ರಾತ್ರಿ ಸರಿಯಾಗಿ ನಿದ್ದೆ ಬರತ್ತೆ.