ನಾವು ಮಾರ್ಕೆಟ್ ನಿಂದ ತಂದಂತಹ ಹಸಿಮೆಣಸಿನ ಕಾಯಿಯನ್ನು ಹೇಗೆ ತಾಜಾ ಇರುವಂತೆ ಇಟ್ಟುಕೊಳ್ಳಬೇಕು ಅನ್ನೋದರ ಬಗ್ಗೆ ಈ ಲೇಖನದಲ್ಲಿ ಇದೆ ಮಾಹಿತಿ. ಮಾರ್ಕೆಟ್ ನಿಂದ ಯಾವುದೇ ತರಕಾರಿ ತಂದರು ಸಹ ಕೆಲವೊಮ್ಮೆ ಅದನ್ನ ಹಾಳಾಗದಂತೆ ತುಂಬಾ ದಿನ ಹೇಗೆ ಇಟ್ಟುಕೊಳ್ಳೋದು ಅನ್ನೋ ಸಮಸ್ಯೆ ಎಲ್ಲರಿಗೂ ಇರತ್ತೆ. ಅದರಲ್ಲೂ ಬೇಗನೆ ಹಾಳು ಆಗುವಂತಹ ತರಕಾರಿಗಳು, ಸೊಪ್ಪು , ಮೆಣಸಿನಕಾಯಿ ಇದನ್ನ ಹೇಗೆ ಇಟ್ಟುಕೊಳ್ಳೋದು ಅನ್ನೋದೇ ದೊಡ್ಡ ಚಿಂತೆ. ಹಾಗೆ ಮೆಣಸಿನಕಾಯಿಯನ್ನು ತುಂಬಾ ದಿನ ಹೇಗೆ ಇಟ್ಟುಕೊಳ್ಳೋದು ನೋಡಿ.
ಮೆಣಸಿನಕಾಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ನಂತರ ಎಲ್ಲಾ ಮೆಣಸಿನಕಾಯಿಗಳ ತೊಟ್ಟುಗಳನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಬೇಗ ಹಣ್ಣು ಆಗಲ್ಲ. ಆಮೇಲೆ ಮೆಣಸಿನ ಕಾಯಿಯಲ್ಲಿ ನೀರಿನ ಅಂಶ ಹೋಗುವ ಹಾಗೆ ಸ್ವಲ್ಪವೂ ನೀರಿನ ಅಂಶ ಇಲ್ಲದ ರೀತಿಯಲ್ಲಿ ಒರೆಸಿಕೊಳ್ಳಬೇಕು ಇಲ್ಲವಾದರೆ ಮೆಣಸಿನಕಾಯಿ ಕೊಳೆತು ಹೋಗುತ್ತದೆ.
ನಂತರ ಒಂದು ಗಾಳಿ ಆಡದ ಬಾಕ್ಸ್ ಗೆ ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರ್ ಹಾಕಿ ಅದರಲ್ಲಿ ನೀಟಾಗಿ ನೆಟ್ಟಗೆ ಮೆಣಸಿನಕಾಯಿಗಳನ್ನು ಜೋಡಿಸಿ, ಅದರ ಮೇಲೆ ಇನ್ನೊಂದು ಪೇಪರ್ ಹಾಕಿ ಅದರ ಮೇಲೂ ಸಹ ಮೆಣಸಿನಕಾಯಿಗಳನ್ನು ಹರಡಿ ಅದರ ಮೇಲಿಂದ ಸರಿಯಾಗಿ ಮುಚ್ಯುವ ಹಾಗೆ ಇನ್ನೊಂದು ಪೇಪರ್ ಹಾಕಿ ನಂತರ ಗಾಳಿಯಾಡದ ಹಾಗೆ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ತಿಂಗಳು ಆದರೂ ಮೆ ಮೆಣಸಿನ ಕಾಯಿಯನನ್ನ ಹಾಳು ಆಗದಂತೆ ಇಟ್ಟುಕೊಳ್ಳಬಹುದು.