ಪಾಂಡವರು ವನವಾಸದಲ್ಲಿ ಇದ್ದರು . ಆಗ ಒಮ್ಮೆ ಸುತ್ತಾಡಿ ಸುತ್ತಾಡಿ ಬಳಲಿದಾಗ ಮಹರ್ಷಿ ಕಣ್ವರ ಆಶ್ರಮಕ್ಕೆ ಸಂಬಂಧಿಸಿದ ಉಪವನ ಕಂಡಿತು. ಅದಕ್ಕೆ ಸಮೀಪದಲ್ಲೇ ಐವರೂ ಬಿಡಾರ ಹೂಡಿದರು. ಒಂದು ದಿನ ಭೀಮ ಬೇಟೆಯಾಡಲು ಹೋದ. ದಟ್ಟ ಕಾಡಿನ ಒಳಹೊಕ್ಕರು. ಬೇಟೆಯಾಡಿ ದಣಿದು ಸುತ್ತಮುತ್ತ ನೋಡಿದಾಗ, ಅಲ್ಲೊಂದು ಜಂಬೂಹಣ್ಣಿನ ಮರ ಕಂಡಿತು. ಮರದ ತುತ್ತತುದಿಯಲ್ಲಿ ದೊಡ್ಡ ಗಾತ್ರದ ಒಂದೇ ಒಂದು ಹಣ್ಣಿತ್ತು ಭೀಮ ಕೂಡಲೇ ಮರಹತ್ತಿ ಆ ಹಣ್ಣನ್ನು ಕೊಯಿದು ಇಳಿಸಿದ . ಅದನ್ನು ಪಾಂಡವರು ನೆಲೆಸಿದ್ದ ಪರ್ಣಕುಟಿಗೆ ತಂದ . ಧರ್ಮರಾಯನಿಗೂ ಆ ಫಲದ ಗಾತ್ರ ನೋಡಿ ವಿಸ್ಮಯವಾಯಿತು.
ಆದರೆ ದಿವ್ಯಜ್ಞಾನಿಯಾಗಿದ್ದ ಸಹದೇವನಿಗೆ ಅದೇನೆಂದು ಅರಿವಾಯಿತು. ಆತ ಗಾಬರಿಯಾದ. ಅಣ್ಣಾ, ಇದನ್ನೇಕೆ ಕೊಯ್ದೆ, ಯಾಕೆ ತಂದೆ ? ಇದು ಮಹರ್ಷಿ ಕಣ್ವರಿಗೆ ಸೇರಬೇಕಾದ ಫಲ, ಅವರು ವರ್ಷವಿಡೀ ತಪದಲ್ಲಿರುತ್ತಾರೆ ವರ್ಷಕ್ಕೆ ಒಂದು ಬಾರಿ ಅವರಿಗೆ ಎಚ್ಚರವಾಗುತ್ತದೆ . ಆಗ ಹಸಿವಾಗಿರುತ್ತದೆ . ಈ ಹಣ್ಣು ಅವರಿಗೆ ಮೀಸಲಾದುದು. ತಮ್ಮ ಹಸಿವನ್ನು ಈ ಹಣ್ಣನ್ನು ತಿಂದು ನೀಗಿಸಿಕೊಳ್ಳುತ್ತಾರೆ. ಇದು ಮರದಲ್ಲಿ ಕಾಣದೆ ಹೋದರೆ ಅವರು ಇದನ್ನು ಕೊಯ್ದವರನ್ನು ಶಪಿಸಬಹುದು ಎಂದು ಸಹದೇವ ಹೇಳಿದ, ಧರ್ಮರಾಯ ಸೇರಿದಂತೆ ಪಾಂಡವರಿಗೆ ಚಿಂತೆಗಿಟ್ಟುಕೊಂಡಿತು. ಮುನಿಯ ಶಾಪದಿಂದ ಪಾರಾಗುವ ಬಗೆ ಹೇಗೆ ಈಗ
ಪಾಂಡವರು ಅಲ್ಲಿದ್ದ ಇತರ ಋಷಿಗಳ ಮೊರೆಹೋದರು . ಮಹರ್ಷಿ ಕಣ್ವರ ಕೋಪದಿಂದ ಪಾರಾಗುವ ಬಗೆ ಕಾಣದೆ ಎಲ್ಲರಿಗೂ ಭಯವಾಗತೊಡಗಿತು. ಯಾರಿಗೂ ಉಪಾಯ ಹೊಳೆಯಲಿಲ್ಲ . ಮಹರ್ಷಿ ದೌಮ್ಯರು , ಶ್ರೀಕೃಷ್ಣನನ್ನು ಕರೆಸಿ , ಅವನೇ ಇದಕ್ಕೆ ಸೂಕ್ತ ಉಪಾಯಾಂತರ ಮಾಡಬಲ್ಲ ವ್ಯಕ್ತಿ ಎಂದರು . ಹಾಗೇ ಪಾಂಡವರು ಶ್ರೀಕೃಷ್ಣನ್ನು ಧ್ಯಾನಿಸಲಾಗಿ , ಅವನು ಅಲ್ಲಿ ಪ್ರತ್ಯಕ್ಷನಾದನು . ಯಾಕೆ ಕರೆದಿರಿ ಎಂದು ಕೇಳಿದ . ಪಾಂಡವರು ಸಮಸ್ಯೆಯನ್ನು ಅವನ ಮುಂದೆ ಬಿಚ್ಚಿಟ್ಟರು. ಆಗ ಶ್ರೀಕೃಷ್ಣನು ಅವರನ್ನು ಫಲ ಸಹಿತ ಮರದ ಬಳಿಗೆ ಕರೆದುಕೊಂಡು ಹೋದನು . ನಂತರ ಹೇಳಿದ ನೀವೆಲ್ಲರೂ ನಿಮ್ಮ ನಿಮ್ಮ ಮನಸ್ಸಿನಲ್ಲಿ ಇರುವ ನಿಜವನ್ನು ಹೇಳಬೇಕು. ಆಗ ಈ ಫಲ ನೆಲ ಬಿಟ್ಟು ಮರವೇರಿ ತೊಟ್ಟಿನಲ್ಲಿ ಸೇರಿಕೊಳ್ಳುತ್ತದೆ ಎಂದನು.
ಧರ್ಮರಾಯ ಹೇಳಿದ ನನ್ನ ಪಾಲಿಗೆ ಪರಸತಿ ತಾಯಿಗೆ ಸಮಾನ ಪರರ ಧನವು ತ್ಯಾಜ್ಯ ಜೀವರಾಶಿಯಲ್ಲಿ ಯಾರ ನೋವೇ ಆದರೂ ತನ್ನ ನೋವೆಂದೇ ನಾನು ಭಾವಿಸುವೆ. ಧರ್ಮರಾಯ ಹೀಗೆ ಹೇಳಿದ ಕೂಡಲೇ ಹಣ್ಣು ನೆಲವನ್ನು ಬಿಟ್ಟು ಗಾಳಿಯಲ್ಲಿ ಹತ್ತಡಿ ಮೇಲೇರಿ ನಿಂತಿತು. ಭೀಮ ಹೇಳಿದ- ಸ್ವಾಭಿಮಾನವೇ ನಮ್ಮ ಜೀವದ ಭಾವ. ಅದನ್ನು ಬಿಟ್ಟು ಬೇರೆ ಭಾವವೇ ನಮಗಿಲ್ಲ. ಅದನ್ನು ಬಿಟ್ಟು ನಾನು ಉಳಿಯುವುದೂ ಇಲ್ಲ. ಭೀಮ ಈ ಮಾತನ್ನು ಹೇಳಿದಾಗ ಫಲ ಇನ್ನೂ ಹತ್ತಡಿ ಮೇಲೇರಿತ. ಅರ್ಜುನ ಹೇಳಿದ- ಯುದ್ಧವೇ ನನಗೆ ಅತ್ಯಾಸಕ್ತಿಯ ಕ್ಷೇತ್ರ ಯುದ್ಧವನ್ನು ಹೊರತುಪಡಿಸಿದರೆ ಜೀವನದಲ್ಲಿ ಇನ್ನೊಂದು ನಿಜಾಸಕ್ತಿ ನನಗಿಲ್ಲ.
ಅರ್ಜುನನ ಈ ಮಾತನ್ನು ಕೇಳಿ ಹಣ್ಣು ಇನ್ನೂ ಮೇಲೇರಿತು . ನಕುಲನೆಂದ ಕೃಷ್ಣನೇ ನಮ್ಮ ಕರ್ಮಗಳನ್ನೆಲ್ಲ ನಾಶ ಮಾಡುವವನೆಂದು ನಾನು ಭಾವಿಸಿದ್ದೇನೆ . ಕೃಷ್ಣನಲ್ಲಿ ಧರ್ಮವಲ್ಲದೆ ಬೇರೊಂದನ್ನು ನಾವು ಕಾಣೆವು ಸಹದೇವ ಹೇಳಿದ ಸತ್ಯವೇ ತಾಯಿ, ಜ್ಞಾನವೇ ತಂದೆ ಧರ್ಮವೇ ಸಹೋದರ ದಯವೇ ಮಿತ್ರ ಶಾಂತಿಯೇ ಒಡೆಯ ಕ್ಷಮೆಯೇ ಪುತ್ರ ಹೀಗೆಂದು ನಕುಲ ಸಹದೇವರು ಹೇಳಿದಾಗ ಹಣ್ಣು ತೊಟ್ಟಿನ ಸಮೀಪ ಬಂದು ನಿಂತಿತು .
ದ್ರೌಪದಿ ಪುತ್ರಿ ಹೇಳಿದಳು- ಸುಂದರವಾದ ಪುರುಷರನ್ನು ನೋಡಿದರೆ ನಾರಿಯರಿಗೆ ಯೋನಿ ದ್ರವಿಸುತ್ತದೆ ಸುಂದರಂ ಪುರುಷಂ ದೃಷ್ಟಾ ಪಿತರಂ ಭ್ರಾತರಂ ಸುತಂ ಯೋನಿದ್ರ್ರವತಿ ನಾರೀಣಾಂ ಸತ್ಯಂ ಬ್ರೂಮೀಹ ಕೇಶವ ಮಹಾಭಾರತ ಎಂದು ದ್ರೌಪದಿ ನುಡಿದಳು. ಆದರೆ ಫಲ ಅಲ್ಲಾಡಲಿಲ್ಲ. ಕೃಷ್ಣ ಮುಗುಳುನಗುತ್ತ ನಿನ್ನ ಮನಸ್ಸಿನ ನಿಜ ಮಾತನ್ನು ವಂಚಿಸದೇ ನುಡಿಯಮ್ಮ ಎಂದ . ಉಪಾಯವಿಲ್ಲದೆ ದ್ರೌಪದಿ ಹೇಳಿದಳು ನನಗೆ ಐವರು ಪತಿಯರಿದ್ದರೂ ಆರನೆಯವನನ್ನು ಮನಸ್ಸು ಬಯಸುತ್ತದೆ. ಅನ್ಯಪುರುಷನನ್ನು ಬಯಸುವವಳು ಪತಿವ್ರತೆಯಲ್ಲ ಪಂಚ ಮೇ ಪತಯಸ್ಸಂತಿ ಷಷ್ಠಸ್ತು ಮಮ ರೋಚತೇ ಪುರುಷಾಣಾಮಭಾವೇನ ಸರ್ವ ನಾರ್ಯಾಃ ಪತಿವ್ರತಾಃ ಮಹಾಭಾರತ ಎನ್ನುತ್ತಾಳೆ. ಕೂಡಲೇ ಹಣ್ಣು ತೊಟ್ಟನ್ನು ಸೇರುತ್ತದೆ. ಪಾಂಡವರು ಮುನಿಶಾಪದಿಂದ ಪಾರಾಗುತ್ತಾರೆ. ಇಲ್ಲಿ ವೇದವ್ಯಾಸರು ಈ ಶ್ಲೋಕದ ಅರ್ಥವನ್ನು ಬಿಡಿಸಿ ಹೇಳಿಲ್ಲ. ಆರನೆಯವನು ಎಂದರೆ ಯಾರು ಕರ್ಣನೇ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ