ಈ ಕಾರ್ಡ್ ಮಾಡಿಸಿದ್ದರೆ ಸರ್ಕಾರದಿಂದ ಹೆರಿಗೆ ಸೌಲಭ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ 50 ಸಾವಿರದವರೆಗೆ ಉಚಿತ ಸಹಾಯಧನ

0 32

ನಾವಿಂದು ಲೇಬರ್ ಕಾರ್ಡ್ ಹೊಂದಿರುವವರಿಗೆ ಉಪಯುಕ್ತವಾಗುವಂತಹ ಮಾಹಿತಿಯೊಂದನ್ನು ತಿಳಿಸಿಕೊಡುತ್ತೇವೆ. ನೀವು ಕೇವಲ ಕಾರ್ಮಿಕ ಕಾರ್ಡುಗಳನ್ನು ಮಾಡಿಸಿಕೊಂಡರೆ ಮಾತ್ರ ಉಪಯೋಗವಿಲ್ಲ ಅದರಿಂದ ಯಾವೆಲ್ಲಾ ರೀತಿಯ ಲಾಭಗಳು ಉಪಯೋಗ ಸಿಗುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಅಂತಹ ಒಂದು ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಹೆಣ್ಣುಮಕ್ಕಳು ಕಾರ್ಮಿಕ ಕಾರ್ಡನ್ನು ಮಾಡಿಸಿಕೊಂಡರೆ ಅವರು ಮದುವೆಯಾದ ಮೇಲೆ ಎರಡು ಮಕ್ಕಳಿಗೆ ಜನ್ಮವನ್ನು ನೀಡಿದರೆ ಅಂತಹ ಸಂದರ್ಭದಲ್ಲಿ ಹೆರಿಗೆ ಸೌಲಭ್ಯ ಅಥವಾ ತಾಯಿ ಲಕ್ಷ್ಮಿ ಬಾಂಡ್ ಸೌಲಭ್ಯದ ಮೂಲಕ ಐವತ್ತು ಸಾವಿರ ರೂಪಾಯಿ ಹಣವನ್ನು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತದೆ.

ಅಂದರೆ ಕಾರ್ಮಿಕ ಕಾರ್ಡ್ ಅನ್ನು ಮಾಡಿಸಿರುವ ಹೆಣ್ಣು ಮದುವೆಯಾದ ಮೇಲೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಮೂವತ್ತು ಸಾವಿರ ರುಪಾಯಿ ಹಣವನ್ನು ನೀಡಲಾಗುತ್ತದೆ. ಒಂದು ವೇಳೆ ಗಂಡು ಮಗುವಿಗೆ ಜನ್ಮ ನೀಡಿದರೆ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ಉಚಿತವಾಗಿ ನೀಡಲಾಗುತ್ತದೆ. ಲೇಬರ್ ಕಾರ್ಡ್ ಹೊಂದಿರುವ ಹೆಣ್ಣುಮಕ್ಕಳು ಎರಡು ಮಕ್ಕಳಿಗೆ ಜನ್ಮವನ್ನು ನೀಡಿದರೆ ಎರಡು ಮಕ್ಕಳ ಹೆರಿಗೆ ಸೌಲಭ್ಯವಾಗಿ ಐವತ್ತು ಸಾವಿರ ರೂಪಾಯಿ ಹಣವನ್ನು ಉಚಿತವಾಗಿ ನೀಡಲಾಗುತ್ತದೆ. ಹಾಗಾದರೆ ಲೇಬರ್ ಕಾರ್ಡನ್ನು ಹೊಂದಿರುವಂತಹ ಹೆಣ್ಣುಮಕ್ಕಳು ಹೆರಿಗೆ ಸೌಲಭ್ಯಕ್ಕಾಗಿ ನೀಡುವ ಐವತ್ತು ಸಾವಿರ ರೂಪಾಯಿ ಹಣವನ್ನು ಯಾವ ರೀತಿಯಾಗಿ ಪಡೆಯಬೇಕು ಎನ್ನುವುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಈ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ಆನ್ಲೈನಲ್ಲಿ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಅರ್ಜಿಸಲ್ಲಿಸಲು ಯಾವ ದಾಖಲೆಗಳು ಬೇಕು ಯಾವ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಮೊದಲು ಈ ಒಂದು ಯೋಜನೆಯ ಆಫೀಸಿಯಲ್ ವೆಬ್ಸೈಟನ್ನು ಓಪನ್ ಮಾಡಬೇಕು ನಂತರ ಅಲ್ಲಿ ಸೇವೆಗಳು ಮತ್ತು ಯೋಜನೆಗಳು ಎನ್ನುವುದು ಕಂಡುಬರುತ್ತದೆ ಅದರಲ್ಲಿ ಹೆರಿಗೆ ಸೌಲಭ್ಯ ಅಥವಾ ತಾಯಿ ಲಕ್ಷ್ಮೀ ಬಾಂಡ್ ಎನ್ನುವ ಆಯ್ಕೆ ಇರುತ್ತದೆ.

ಅದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮಗೆ ಹೆರಿಗೆ ಸೌಲಭ್ಯ ಕುರಿತಾದಂತಹ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. ಮೊದಲು ಈ ಯೋಜನೆಯ ಲಾಭವನ್ನು ಪಡೆಯುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಎನ್ನುವುದನ್ನು ನೋಡುವುದಾದರೆ ಎರಡನೇ ಮಗುವಿನ ಹೆರಿಗೆ ಎಂದು ಕೋರ್ಟ್ ಅಪಡವಿಟ್ ಮಾಡಿಸಬೇಕು, ನಿಮ್ಮ ಬಳಿ ಬ್ಯಾಂಕ್ ಪಾಸ್ಬುಕ್ ಇರಬೇಕು, ಮಗುವಿನ ಭಾವಚಿತ್ರ, ಉದ್ಯೋಗ ದೃಢೀಕರಣ ಪತ್ರ ಜೊತೆಗೆ ಕಾರ್ಮಿಕ ಕಲ್ಯಾಣ ಮಂಡಳಿ ನೀಡಿರುವಂತಹ ಗುರುತಿನ ಚೀಟಿ ಅಥವಾ ಸ್ಮಾರ್ಟ್ ಕಾರ್ಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವಂತಹ ವರದಿ ಮಗುವಿನ ಜನನ ಪ್ರಮಾಣ ಪತ್ರ ಎಲ್ಲ ದಾಖಲೆಗಳು ಬೇಕಾಗುತ್ತವೆ.

ನೀವು ಎರಡನೇ ಮಗುವಿನ ಜನನವಾದ ಆರು ತಿಂಗಳ ಒಳಗಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಸೌಲಭ್ಯವನ್ನು ಪಡೆಯುವುದಕ್ಕೆ ಸೇವಾ ಸಿಂಧು ವೆಬ್ಸೈಟ್ಗೆ ಹೋಗಬೇಕು ನಂತರ ಅಲ್ಲಿ ನೋಂದಾಯಿತ ಬಳಕೆದಾರರು ಎಂಬುದು ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನೀವು ಮೊದಲ ಬಾರಿ ಸೇವಾ ಸಿಂಧು ಬಳಸುತ್ತಿದ್ದರೆ ಅಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು.

ಸೇವಾ ಸಿಂಧು ಲಾಗಿನ್ ಆದನಂತರ ಎಡಭಾಗದಲ್ಲಿ ಅಪ್ಲೈ ಫಾರ್ ಸರ್ವಿಸ್ ಎನ್ನುವುದು ಕಂಡುಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ವಿವ್ ಆಲ್ ಸರ್ವಿಸ್ ಎನ್ನುವುದು ಕಂಡುಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಬಲಭಾಗದಲ್ಲಿ ಸರ್ಚ್ ಬಾರ್ ಕಂಡುಬರುತ್ತದೆ ಅಲ್ಲಿ ಲೇಬರ್ ಎಂದು ಬರೆಯಬೇಕು.

ಆಗ ಅದರಿಂದ ಯಾವ ಎಲ್ಲಾ ಪ್ರಯೋಜನಗಳು ಸಿಗುತ್ತವೆ ಎನ್ನುವುದು ಕಾಣಿಸುತ್ತದೆ ಅದರಲ್ಲಿ ಹನ್ನೊಂದನೇ ಕಾಲಂನಲ್ಲಿ ಅಸಿಸ್ಟೆಂಟ್ಸ್ ಫಾರ್ ಡೆಲಿವರಿ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಮುಂದೆ ಹೆರಿಗೆ ಸಹಾಯಧನಕ್ಕಾಗಿ ಅರ್ಜಿ ಎನ್ನುವ ಪುಟ ಕಾಣಿಸಿಕೊಳ್ಳುತ್ತದೆ ಅಲ್ಲಿ ಕೇಳುವಂತಹ ಮಾಹಿತಿಗಳನ್ನು ತುಂಬಬೇಕು ನಂತರ ಕೇಳುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

ಅರ್ಜಿಯನ್ನು ಸಲ್ಲಿಸುವುದಕ್ಕೆ ನೀವು ಇಪ್ಪತ್ತೈದು ರೂಪಾಯಿಯಿಂದ ಮೂವತ್ತು ರೂಪಾಯಿ ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ ಕಾರ್ಮಿಕ ಕಾರ್ಡನ್ನು ಹೊಂದಿರುವಂತಹ ಹೆಣ್ಣುಮಕ್ಕಳು ಮದುವೆಯ ನಂತರ ಎರಡು ಮಕ್ಕಳ ಜನನದ ನಂತರ ಐವತ್ತು ಸಾವಿರ ರೂಪಾಯಿ ಹೆರಿಗೆ ಸೌಲಭ್ಯವನ್ನು ಪಡೆಯುವುದಕ್ಕೆ ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.