ಯಾವಾಗಲೂ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ಒಂದು ಮಾತು ಕೇಳಿ ಬರುತ್ತದೆ ಸಿನಿಮಾ ಅಂದರೆ ಹೀರೋಗಳು ಹೀರೋಗಳು ಅಂದರೆ ಸಿನಿಮಾ ಅಲ್ಲಿ ಹೀರೋಯಿನ್ ಗಳಿಗೆ ಹೇಳಿಕೊಳ್ಳುವಷ್ಟು ಬೆಲೆ ಇಲ್ಲ ಒಂದಷ್ಟು ದಿನಗಳ ನಂತರ ನಟಿಯರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಹೇಳಿಕೊಳ್ಳುವಷ್ಟು ಬೇಡಿಕೆ ಅವರಿಗೆ ಇರುವುದಿಲ್ಲ ಎಂದು. ಆದರೆ ಅದಕ್ಕೆ ತದ್ವಿರುದ್ಧ ಎನ್ನುವ ನಟಿಯರು ಇದ್ದಾರೆ ಅವರಲ್ಲಿ ಒಬ್ಬರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಅವರಿಗೆ ಈಗಲೂ ಕೂಡ ತುಂಬಾ ಬೇಡಿಕೆ ಇದೆ ಈಗಲೂ ಕೂಡ ಅವರು ಹೀರೋ ಗಳಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಅವರು ಬೇರೆ ಯಾರೂ ಅಲ್ಲ ಅವರೇ ನಟಿ ರಮ್ಯಾ ಕೃಷ್ಣನ್.
ಇವರು ಬಹುತೇಕ ಎಲ್ಲಾ ಭಾಷೆಗಳಿಗೂ ಪರಿಚಯ ಇರುವಂತಹ ನಟಿ ಕಾರಣ ಎಲ್ಲಾ ಭಾಷೆಗಳಲ್ಲಿಯೂ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ನಟಿ ರಮ್ಯಾ ಕೃಷ್ಣನ್ ಅವರಿಗೆ ವಯಸ್ಸು ಐವತ್ತರ ಮೇಲಾದರೂ ಕೂಡ ಅವರಿಗೆ ಈಗಲೂ ಕೂಡ ಬೇಡಿಕೆ ಕಡಿಮೆಯಾಗಿಲ್ಲ. ಸಾಲು-ಸಾಲು ಸಿನಿಮಾಗಳಿಗೆ ಅವರನ್ನು ಹುಡುಕಿಕೊಂಡು ಬರುತ್ತಿವೆ. ರಮ್ಯಾ ಕೃಷ್ಣನ್ ಅವರು ಹುಟ್ಟಿದ್ದು ಸಾವಿರದ ಒಂಬೈನೂರಾ ಎಪ್ಪತ್ತರಲ್ಲಿ ಮದ್ರಾಸಿನ ತಮಿಳುನಾಡಿನಲ್ಲಿ. ಈವರೆಗೂ ಐದು ಭಾಷೆಗಳಲ್ಲಿ ಎರಡು ನೂರಾ ಅರವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಈ ರೀತಿಯಾಗಿ ಐದು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆರಂಭದಲ್ಲಿ ಭರತನಾಟ್ಯ ಹಾಗೂ ಕೂಚಿಪುಡಿಯನ್ನು ಕಲಿತರು ಸಹಜವಾಗಿ ಅವರಿಗೆ ಸಿನಿಮಾದ ಕಡೆ ಆಕರ್ಷಣೆ ಉಂಟಾಯಿತು. ಕೇವಲ ಹದಿಮೂರು ವರ್ಷದವರಿದ್ದಾಗ ಮಲಯಾಳಂ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುತ್ತಾರೆ.
ನಂತರ ತಮಿಳು ತೆಲುಗು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಕನ್ನಡದಲ್ಲಿ ಶಕ್ತಿ ಎನ್ನುವ ಸಿನಿಮಾದಲ್ಲಿ ನಟನೆ ಮಾಡುತ್ತಾರೆ ಅನಂತರದಲ್ಲಿ ಕನ್ನಡದಲ್ಲಿ ಕೃಷ್ಣ ರುಕ್ಮಿಣಿ ಗಡಿಬಿಡಿ ಗಂಡ ಮಾಂಗಲ್ಯಂ ತಂತುನಾನೇನ ಸ್ನೇಹ ಆಂಧ್ರ ಹೆಂಡತಿ ನೀಲಾಂಬರಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟನೆಯನ್ನು ಮಾಡುತ್ತಾರೆ ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಎಲ್ಲ ಭಾಷೆಗಳಲ್ಲೂ ಬೇಡಿಕೆಯಿದ್ದು ಬಾಹುಬಲಿಯಲ್ಲಿ ಶಿವಗಾಮಿಯಾಗಿ ಕಾಣಿಸಿಕೊಂಡ ನಂತರ ಇವರ ಬೇಡಿಕೆ ಇನ್ನೂ ಹೆಚ್ಚಾಯಿತು. ಅವರಿಗೆ ಅಷ್ಟೊಂದು ಬೇಡಿಕೆ ಬರುವುದಕ್ಕೆ ಕಾರಣ ಅವರು ಅವರ ಸೌಂದರ್ಯವನ್ನು ಈಗಲೂ ಕೂಡ ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. ಜೊತೆಗೆ ನಟನೆ ಮೇಲೆ ಈಗಲೂ ಕೂಡ ಅಷ್ಟೇ ಶ್ರದ್ಧೆಯನ್ನು ಉಳಿಸಿಕೊಂಡು ಬಂದಿದ್ದಾರೆ.
ಇನ್ನು ಅವರ ಮದುವೆ ವಿಚಾರಕ್ಕೆ ಬರುವುದಾದರೆ ಅದು ಕೂಡ ಆ ಕಾಲದಲ್ಲಿ ಸ್ವಲ್ಪಮಟ್ಟಿಗೆ ಸುದ್ದಿ ಮಾಡಿತ್ತು ಇವರಿಗೆ ಕೃಷ್ಣವಂಶಿ ಎನ್ನುವ ತೆಲುಗಿನ ಡೈರೆಕ್ಟರ್ ಜೊತೆ ಆರಂಭದಲ್ಲಿ ಸಲುಗೆ ಬೆಳೆಯುತ್ತದೆ ನಂತರ ಪ್ರೀತಿಯಾಗಿ ಅವರಿಬ್ಬರೂ ಮದುವೆ ಕೂಡ ಆಗುತ್ತಾರೆ. ಅವರು ಕೂಡ ಸಿನಿಮಾರಂಗದಲ್ಲಿ ಇರುವುದರಿಂದ ಇವರ ನಟನೆಗೆ ಯಾವುದೇ ಆಕ್ಷೇಪವನ್ನು ಮಾಡುವುದಿಲ್ಲ. ಹಾಗಾಗಿ ಅವರು ಸಿನಿಮಾರಂಗದಲ್ಲಿ ಮುಂದುವರೆಯುತ್ತಾರೆ. ಇನ್ನು ರಮ್ಯಾ ಕೃಷ್ಣನ್ ಅವರು ಪಡೆಯುವ ಸಂಭಾವನೆ ಕೇಳಿದರೆ ಆಶ್ಚರ್ಯವಾಗುತ್ತದೆ ರಮ್ಯಕೃಷ್ಣನ್ ಅವರು ಒಂದು ದಿನಕ್ಕೆ ಹತ್ತು ಲಕ್ಷ ರುಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.
ಇವರು ಯಾವ ಹೀರೋಯಿನ್ ಗಳಿಗಿಂತ ಕಡಿಮೆ ಇಲ್ಲ ಇವರು ಈಗಲೂ ಕೂಡ ನಂಬರ್ ಒನ್ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಒಂದು ಕಡೆ ವೃತ್ತಿ ಒಂದು ಕಡೆ ಸಂಸಾರ ಎರಡನ್ನೂ ಕೂಡ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅವರ ಜೀವನ ಯಾವಾಗಲೂ ಇದೇ ರೀತಿ ಸಂತೋಷದಿಂದ ಕೂಡಿರಲಿ ಎಂದು ನಾವು ಹಾರೈಸೋಣ. ಇದಿಷ್ಟು ನಾವಿಂದು ನಿಮಗೆ ರಮ್ಯಾ ಕೃಷ್ಣನ್ ಅವರ ಕುರಿತಾಗಿ ತಿಳಿಸುತ್ತಿರುವ ಮಾಹಿತಿಯಾಗಿದೆ.