ಕಿಡ್ನಿಯಲ್ಲಿ ಸ್ಟೋನ್ ಆಗುವ ಸಮಸ್ಯೆ ಸಾಮಾನ್ಯವಾಗಿದೆ. ಈಗಿನ ಆಹಾರ ಕ್ರಮಗಳಿಂದ ಇಂತಹ ಸಮಸ್ಯೆಗಳು ಕಂಡುಬರುತ್ತದೆ. ಕಿಡ್ನಿ ಸ್ಟೋನ್ ಗೆ ಕಾರಣವೇನು, ಅದರ ಲಕ್ಷಣಗಳೇನು ಹಾಗೂ ಅದರ ಪರಿಹಾರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಬಹಳ ಜನರಿಗೆ ಕಿಡ್ನಿಯಲ್ಲಿ ಸ್ಟೋನ್ ಆಗುತ್ತದೆ. ನಮ್ಮ ದೇಹದಲ್ಲಿ ಪಿತ್ತ ಗಟ್ಟಿಯಾಗಿ ಮರಳನ್ನು ಉಂಡೆ ಮಾಡಿದರೆ ಹೇಗೆ ಕಾಣುತ್ತದೆ ಅಂತಹ ಗಂಟು ಗಂಟಾಗಿ ಸಂಗ್ರಹವಾಗಿ ಇರುತ್ತದೆ. ಈ ಸಮಸ್ಯೆ ಪಿತ್ತದಿಂದ ಆಗಿದ್ದು ಪಿತ್ತ ಶಮನ ಆದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ. ಪಿತ್ತ ಶಮನ ಆಗಲು ನಮ್ಮ ಆಹಾರ ಕ್ರಮವನ್ನು ಬದಲಾಯಿಸಬೇಕು. ಸರಿಯಾದ ಸಮಯಕ್ಕೆ ಊಟ ಮಾಡಬೇಕು ತಡವಾಗಿ ಊಟ ಮಾಡಬಾರದು, ತಡವಾಗಿ ಮಲಗಬಾರದು. ಹೆಚ್ಚು ವ್ಯಾಯಾಮ ಮಾಡಿದರು ಪಿತ್ತ ಉಂಟಾಗುತ್ತದೆ ಅಲ್ಲದೆ ಹಾರ್ಟ್ ಅಟ್ಯಾಕ್, ಬಿಪಿ, ಶುಗರ್ ಬರುವ ಸಂಭವ ಇದೆ.
ವರ್ಕೌಟ್ ಎಂದು ಜನರು ಹೆಚ್ಚು ಸಮಯ ವ್ಯಾಯಾಮ ಮಾಡುತ್ತಾರೆ ಆದರೆ ಅದು ಅಪಾಯಕಾರಿ. ಅತಿಯಾದ ಮಾಂಸಾಹಾರ, ಖಾರ ಪದಾರ್ಥಗಳನ್ನು ಸೇವಿಸಬಾರದು, ಮದ್ಯಪಾನ, ಧೂಮಪಾನ ಮಾಡಬಾರದು ಹೀಗೆ ಮಾಡುವುದರಿಂದ ಸ್ಟೋನ್ ಆಗದಂತೆ ನೋಡಿಕೊಳ್ಳಬಹುದು. ಕಿಡ್ನಿಯಲ್ಲಿ ಸ್ಟೋನ್ ಆದರೆ ಹೊಟ್ಟೆ ನೋವು ಬರುತ್ತಿರುತ್ತದೆ, ವಮಿಟಿಂಗ್ ಸೆನ್ಸೇಷನ್ ಹೆಚ್ಚಿರುತ್ತದೆ. ಉಷ್ಣದಿಂದ ಕಣ್ಣುರಿ ಕಾಲುರಿ ಬರುತ್ತಿರುತ್ತದೆ ಈ ರೀತಿಯ ಲಕ್ಷಣಗಳು ಕಂಡುಬರುತ್ತದೆ.
ಕಿಡ್ನಿಯಲ್ಲಿ ಸ್ಟೋನ್ ಆದಾಗ ಸ್ಟೋನ್ ಕರಗಬೇಕು. ಕಾಡು ಬಸಳೆ ಗಿಡ ಎನ್ನುವ ಒಂದು ಗಿಡವಿರುತ್ತದೆ ಇದು ಕಿಡ್ನಿಯಲ್ಲಿ ಸ್ಟೋನ್ ಆದರೆ ದಿವ್ಯೌಷಧ ಕೆಲವರಿಗೆ ಸ್ಟೋನ್ ಆಗಿ ಆಪರೇಷನ್ ಆಗಿ ನೋವು ಹಾಗೆಯೆ ಇರುತ್ತದೆ ಈ ಔಷಧಿಯನ್ನು ತೆಗೆದುಕೊಂಡು ಒಂದು ವಾರದಲ್ಲಿ ಕಡಿಮೆ ಆಗಿರುವುದನ್ನು ನೋಡಬಹುದು. ನಾಲ್ಕು ಬಸಳೆ ಎಲೆಯನ್ನು ಹಾಗೂ ಇಂಗಳಾರ ಕಾಯಿ ಎಂದು ಬರುತ್ತದೆ ಅದರ ತಿರುಳನ್ನು ತೆಗೆದು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಬೇಕು ಆ ಉಂಡೆಯನ್ನು ಮತ್ತು ಬಸಳೆ ಎಲೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ನಿಧಾನವಾಗಿ ಅಗೆಯಬೇಕು. ನಾಲ್ಕು ಬಸಳೆ ಎಲೆ, ಮೂರು ಉಂಡೆಯನ್ನು ತೆಗೆದುಕೊಳ್ಳಬೇಕು.
ಈ ಔಷಧಿಯನ್ನು ಬೆಳಗ್ಗೆ ಮಧ್ಯಾಹ್ನ ಸಂಜೆ ಊಟ ತಿಂಡಿಯ ಅರ್ಧ ಗಂಟೆ ಮೊದಲು ಬಸಳೆ ಎಲೆ ಮತ್ತು ಉಂಡೆಯನ್ನು ಸೇವಿಸಬೇಕು. ಈ ಔಷಧಿಯ ಜೊತೆಗೆ ದಿನಕ್ಕೆ 6-8 ಎಳನೀರು ಕುಡಿಯಬೇಕು. ಹೀಗೆ 7 ದಿನಗಳ ಕಾಲ ತಪ್ಪದೆ ಮಾಡಿದರೆ ಕಿಡ್ನಿ ಸ್ಟೋನ್ ಕರಗುತ್ತದೆ. ಪ್ರತಿದಿನ ನೀರನ್ನು ಹೆಚ್ಚು ಕುಡಿಯಬೇಕು. ಈ ಔಷಧಿಯಿಂದ ಗುಣವಾಗದೆ ಇದ್ದರೆ ಆಯುರ್ವೇದಿಕ್ ವೈದ್ಯರ ಹತ್ತಿರ ಔಷಧಿಯನ್ನು ಪಡೆಯಬಹುದು.
ಈ ಔಷಧಿಯನ್ನು ಗರ್ಭಿಣಿ ಸ್ತ್ರೀಯರು ತೆಗೆದುಕೊಳ್ಳಬಾರದು ಹಾಗೂ ಹೃದಯದ ಸಮಸ್ಯೆ, ಟಿಬಿ ಇರುವವರು ಈ ಔಷಧಿಯನ್ನು ತೆಗೆದುಕೊಳ್ಳಬಾರದು ಒಂದು ವೇಳೆ ತೆಗೆದುಕೊಳ್ಳುವುದಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಈ ಮಾಹಿತಿ ಆರೋಗ್ಯಕ್ಕೆ ಸಂಬಂಧಿಸಿದ್ದು ಎಲ್ಲರಿಗೂ ತಿಳಿಸಿ.