ನಾವು ಸೇವಿಸುವ ಪ್ರತಿಯೊಂದು ತರಕಾರಿಯು ತನ್ನದೆ ಆದ ವಿಶಿಷ್ಟ ಆರೋಗ್ಯಕರ ಅಥವಾ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಕೆಲವು ತರಕಾರಿಯನ್ನು ಅತಿಯಾಗಿ ಸೇವಿಸುವುದರಿಂದಲೂ ಯಾವುದೆ ರೀತಿಯ ಹಾನಿ ಇಲ್ಲ ಆದರೆ ಕೆಲವು ತರಕಾರಿಗಳನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಸಿಹಿಗೆಣಸಿನ ಮಿತವಾದ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಹಾಗೂ ಅತಿಯಾಗಿ ಸೇವಿಸುವುದರಿಂದ ಆಗುವ ಅನಾರೋಗ್ಯಕರ ಅಂಶಗಳನ್ನು ಈ ಲೇಖನದಲ್ಲಿ ನೋಡೋಣ.

ಸಿಹಿಗೆಣಸು ಅಥವಾ ಸಿಹಿ ಆಲೂಗಡ್ಡೆ ಎಂದು ಕರೆಯಲ್ಪಡುವ ಈ ತರಕಾರಿಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ತರಕಾರಿ ಹೆಚ್ಚಿನ ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ಹೊಂದಿದೆ ಅಲ್ಲದೆ ಇದರಲ್ಲಿ ಪ್ರೊಟೀನ್, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕಬ್ಬಿಣ ಅಂಶಗಳನ್ನು ಹೊಂದಿದೆ. ಅತಿಯಾದ ತೂಕ ಹೊಂದಿರುವವರು ತಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಲು ಸಿಹಿಗೆಣಸು ಉತ್ತಮ ಡಯಟ್ ಫುಡ್ ಆಗಿದೆ. ಸಿಹಿಗೆಣಸು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸಂಧಿವಾತ ಸಮಸ್ಯೆಯನ್ನು ನಿವಾರಿಸುತ್ತದೆ.

ಆರೋಗ್ಯಕರ ಹೆಚ್ಚಿನ ಪ್ರಯೋಜನಗಳನ್ನು ಸಿಹಿಗೆಣಸು ಹೊಂದಿದೆ ಪೌಷ್ಟಿಕ ಸತ್ವವನ್ನು ಕೂಡ ಹೊಂದಿದೆ. ಇದು ಬೇರು ತರಕಾರಿಯಾಗಿದ್ದು ಆಕ್ಸಿಲೇಟ್ ಅನ್ನು ಹೆಚ್ಚಾಗಿ ಹೊಂದಿದೆ. ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಎದುರಿಸುತ್ತಿರುವವರು ಸಿಹಿಗೆಣಸನ್ನು ಸೇವಿಸಲೇಬಾರದು, ಇವರು ಸಿಹಿಗೆಣಸನ್ನು ಸೇವಿಸಿದರೆ ಮತ್ತಷ್ಟು ನೋವನ್ನು ಹೆಚ್ಚಿಸುತ್ತದೆ. ಸಿಹಿಗೆಣಸಿನಲ್ಲಿ ಮನಿಟಾಲ್ ಸಕ್ಕರೆ ಆಲ್ಕೋಹಾಲ್ ಅಥವಾ ಪಲಿಯೋಟ ಎಂದು ಕರೆಯಲ್ಪಡುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಈ ಕಾರ್ಬೋಹೈಡ್ರೇಟ್ ಆರೋಗ್ಯಕ್ಕೆ ಹಾನಿಕಾರಕವಲ್ಲದಿದ್ದರೂ ಹೊಟ್ಟೆಯಲ್ಲಿ ಅಸ್ವಸ್ಥತೆ ಅಥವಾ ನೋವಿನಿಂದ ಬಳಲುತ್ತಿದ್ದರೆ ಒಳ್ಳೆಯದಲ್ಲ.

ಸಿಹಿಗೆಣಸನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅತಿಸಾರ, ಹೊಟ್ಟೆ ಉಬ್ಬರಿಸುವುದು ಅನುಭಸಬೇಕಾಗುತ್ತದೆ. ಸಿಹಿಗೆಣಸು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ. ಮಧುಮೇಹ ಹೊಂದಿರುವವರಿಗೆ ಸಿಹಿ ಗೆಣಸು ಉತ್ತಮವಾಗಿದೆ ಆದರೆ ಮಿತವಾಗಿ ಸೇವಿಸಬೇಕು. ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವ ಸಂಭವ ಇರುತ್ತದೆ. ಸಿಹಿ ಗೆಣಸು ಪೊಟ್ಯಾಷಿಯಂ ಹೊಂದಿದ್ದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಿಹಿಗೆಣಸು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಅಂಶವನ್ನು ಹೊಂದಿರುತ್ತದೆ ವಿಟಮಿನ್ ಎ ಅಂಶವಿರುವ ತರಕಾರಿಯನ್ನು ಅತಿಯಾಗಿ ಸೇವಿಸುವುದರಿಂದ ವಿಷವಾಗಿ ಮಾರ್ಪಾಡಾಗುತ್ತದೆ.

ದೀರ್ಘಕಾಲ ವಿಟಮಿನ್ ಎ ಸೇವಿಸುವುದರಿಂದ ತಲೆನೋವು, ಕೂದಲು ಉದುರುವುದು, ಕೂದಲು ಒರಟಾಗುವುದು, ಶುಷ್ಕ ಚರ್ಮ ಉಂಟಾಗುತ್ತದೆ. ಅತಿಯಾದ ಸಿಹಿಗೆಣಸಿನ ಸೇವನೆ ಯಕೃತ್ತಿನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಿಹಿಗೆಣಸನ್ನು ಸೇವಿಸುವ ಮುನ್ನ ಈ ಮಾಹಿತಿಯನ್ನು ಒಮ್ಮೆ ಓದಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ, ಸಂಬಂಧಿಕರಿಗೂ ತಪ್ಪದೇ ತಿಳಿಸಿ.

Leave a Reply

Your email address will not be published. Required fields are marked *