ಅನೇಕ ಜನರಿಗೆ ತಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಮುಂದೆ ಬರಬೇಕು ಎಂಬ ಆಸೆ ಇರುತ್ತದೆ ಆದರೆ ಕೆಲವರು ತಮಗಿರುವ ಕಷ್ಟ ಅಥವಾ ಬಡತನದಿಂದ ಬೇಸರಗೊಂಡು ಹಿಂದೆ ಸರಿಯುತ್ತಾರೆ ಆದರೆ ಸಾಧಿಸುತ್ತೇನೆ ಎಂಬ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಾಗಲಕೋಟೆಯ ರೇಣುಕಾ ಅವರು ಸಾಕ್ಷಿಯಾಗಿದ್ದಾರೆ. ಮನೆಯಲ್ಲಿ ಬಡತನ ಇದ್ದರೂ ತಾವು ಮಾಡಬೇಕಾದದ್ದನ್ನು ಸಾಧಿಸಿ ತೋರಿಸಿದ್ದಾರೆ. ರೇಣುಕಾ ವಡ್ಡರ್ ಬಾಗಲಕೋಟೆಯ ನವನಗರದವರು ಮನೆಯಲ್ಲಿ ಬಡತನ ಕೂಲಿ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ. ಚಿಕ್ಕವಯಸ್ಸಿನಲ್ಲಿಯೇ ಅಂದರೆ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ರೇಣುಕಾ ಅವರು ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ.

ಮನೆಯಲ್ಲಿ ಬಡತನ ಇರುವುದರಿಂದ ತಾಯಿ ಜೀವನ ನಿರ್ವಹಣೆಗಾಗಿ ಮನೆಮನೆಯ ಪಾತ್ರೆಯನ್ನು ತೊಳೆದು ತನ್ನ ಮಕ್ಕಳನ್ನು ಸಾಕುತ್ತಾರೆ. ತಮ್ಮ ಮಕ್ಕಳು ಒಳ್ಳೆಯ ಸಾಧನೆ ಮಾಡಲಿ ಎಂಬ ಉದ್ದೇಶದಿಂದ ಮಗಳಿಗೆ ಶಿಕ್ಷಣವನ್ನ ಕೊಡಿಸುತ್ತಾರೆ ತಾಯಿ ಕಂಡ ಕನಸನ್ನು ಮಗಳು ಸಾಧನೆ ಮಾಡಿ ನನಸಾಗಿಸುತ್ತಾಳೆ. ರೇಣುಕಾ ಅವರು ಎರಡು ಸಾವಿರದ ಹದಿಮೂರರಲ್ಲಿ ಡಿ ಎಡ್ ಮುಗಿಸಿದ್ದು ಎರಡು ಸಾವಿರದ ಹದಿನಾರರಲ್ಲಿ ಬಿಎ ಪದವಿಯನ್ನು ಮುಗಿಸಿದ್ದಾರೆ. ರೇಣುಕಾ ಕಷ್ಟದಲ್ಲಿಯೇ ಶಿಕ್ಷಣವನ್ನು ಕಲಿತು ಇಂದು ಸಬ್ಇನ್ಸ್ಪೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ ಆ ಕುಟುಂಬದಲ್ಲಿ ಇಂದು ಸಂತಸ ಮನೆ ಮಾಡಿದೆ. ಮನೆಯಲ್ಲಿ ಕಡುಬಡತನ ಇದ್ದರೂ ಸಾಧನೆ ಮಾಡಿ ತಾಯಿಯ ಮುಖದಲ್ಲಿ ಸಂತಸ ನೆಲೆಸುವಂತೆ ಮಾಡಿದ್ದಾರೆ.

ಬಡತನವನ್ನು ಸವಾಲಾಗಿ ಮೆಟ್ಟಿನಿಂತು ಸಾಧನೆಗೈದ ಸಾಧಕಿಗೆ ನಗರದ ಹಲವರು ಅವರನ್ನು ಸನ್ಮಾನಿಸಿ ಶುಭಹಾರೈಸಿದ್ದಾರೆ. ಸಾಧನೆಗೆ ಬಡತನ ಅಡ್ಡಿ ಅಂತ ಅನೇಕರು ತಿಳಿದುಕೊಂಡಿರುತ್ತಾರೆ ಆದರೆ ರೇಣುಕ ಅದನ್ನೇ ಸವಾಲಾಗಿ ಸ್ವೀಕರಿಸಿ ಸತತ ಪ್ರಯತ್ನ ಮತ್ತು ನಿರಂತರ ಓದಿನ ಫಲವಾಗಿ ಇಂದು ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ. ಮಗಳ ಸಾಧನೆಯಿಂದ ತಾಯಿಗೆ ತುಂಬಾ ಸಂತೋಷ ಉಂಟಾಗಿದ್ದು ಮಗಳಿಗೆ ಸಿಹಿತಿನಿಸುವ ಮೂಲಕ ಆನಂದ ಭಾಷ್ಪವನ್ನು ಹರಿಸಿದ್ದಾರೆ. ರೇಣುಕಾ ಅವರು ತಾವು ಕಂಡ ಕನಸನ್ನು ಸಾಧಿಸುವುದರೊಂದಿಗೆ ಕುಟುಂಬದವರ ಕಷ್ಟವನ್ನು ಕೂಡ ದೂರ ಮಾಡಿದ್ದಾರೆ. ಅವರ ಯಶಸ್ಸಿಗೆ ಅವರ ಕುಟುಂಬದವರು ಕೂಡ ಕಾರಣ ಅವರ ಸಹಾಯ ಸಹಕಾರದಿಂದಲೇ ಇಂದು ರೇಣುಕಾ ಅವರು ಸಾಧನೆಯ ಶಿಖರವನ್ನು ಏರಿದ್ದಾರೆ.

ರೇಣುಕಾ ಅವರು ಸಾಧನೆಯನ್ನು ಮಾಡಬೇಕು ಎಂದು ಆಸೆಯನ್ನು ಹೊತ್ತಿರುವ ಬಡತನದಲ್ಲಿರುವ ಅನೇಕರಿಗೆ ಮಾದರಿಯಾಗಿದ್ದಾರೆ. ನಾವು ಕಂಡ ಕನಸನ್ನು ನನಸಾಗಿಸಿಕೊಳ್ಳುವ ದಕ್ಕೆ ಕಷ್ಟಪಟ್ಟು ಶ್ರಮವಹಿಸಿದರೆ ಅದಕ್ಕೆ ತಕ್ಕ ಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ರೇಣುಕಾ ಅವರು ಉದಾಹರಣೆಯಾಗಿದ್ದಾರೆ. ಬಡತನ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಾವು ಕಂಡ ಕನಸನ್ನು ಮೂಲೆಗುಂಪು ಮಾಡುವುದು ಸರಿಯಲ್ಲ ಅದನ್ನು ಸಾಧಿಸಿ ತೋರಿಸಬೇಕು. ಸಾಧನೆಯನ್ನು ಮಾಡಬೇಕು ಎನ್ನುವವರಿಗೆ ಮಾದರಿಯಾಗಿರುವ ರೇಣುಕಾ ಅವರ ಮುಂದಿನ ವೃತ್ತಿಜೀವನ ಯಶಸ್ವಿದಾಯಕವಾಗಿರಲಿ ಎಂದು ನಾವೆಲ್ಲರೂ ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!