ಪ್ರತಿಯೊಬ್ಬರಿಗೂ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿಯ ಬಗ್ಗೆ ತುಂಬಾ ಗೊಂದಲವಿರುತ್ತದೆ. ಆ ಆಸ್ತಿ ಮುಂದಿನ ದಿನಗಳಲ್ಲಿ ನಿಮಗೆ ಸಿಗುತ್ತದೆಯೇ ಅಥವಾ ಬೇರೆಯವರು ನಿಮ್ಮ ಆಸ್ತಿಯ ಮೇಲೆ ಹಕ್ಕು ಸಾಧಿಸುವುದಕ್ಕೆ ಅವಕಾಶ ಇದೆಯೇ ಈ ವಿಚಾರವಾಗಿ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಗೆ ವಾರಸುದಾರರು ಯಾರಾಗುತ್ತಾರೆ ಯಾರು ಆಗಬಹುದು ಇಂತಹ ಅನೇಕ ವಿಷಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಹಾಗಾಗಿ ನಾವಿಂದು ನಿಮಗೆ ಆ ಕುರಿತಾದ ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಅನೇಕ ಜನರನ್ನು ಕಾಡುವ ಪ್ರಶ್ನೆ ಯಾವುದು ಎಂದರೆ ನಾಲ್ಕು ಅಥವಾ ಐದನೇ ತಲೆಮಾರಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಬರುವುದಿಲ್ಲವೇ ಎಂದು. ಆದರೆ ಕಾಯ್ದೆ ಪ್ರಕಾರ ನಾವು ಅದೇ ವಂಶದವರು ಆಗಿದ್ದರೂ ಕೂಡ ನಾಲ್ಕು ಮತ್ತು ಐದನೇ ತಲೆಮಾರಿಗೆ ಹಿಂದೂ ವಾರಸ್ದಾರ ಕಾಯ್ದೆ ಪ್ರಕಾರ ಅನ್ವಯವಾಗುವುದಕ್ಕೆ ಬರುವುದಿಲ್ಲ ಎಂದು ಹೇಳಬಹುದು. ನೀವು ನಿಮ್ಮ ಅಜ್ಜ ಮುತ್ತಜ್ಜ ತಂದೆ ಮೊಮ್ಮಕ್ಕಳು ಅವರೆಲ್ಲರೂ ಸೇರಿ ಕುಳಿತು ಮಾತಾಡಿಕೊಂಡು ಆ ವಿಷಯದ ಬಗ್ಗೆ ತೀರ್ಮಾನ ಮಾಡಿಕೊಳ್ಳಬಹುದು. ಮೂರು ತಲೆಮಾರಿನವರೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ ಎಂದು ಹೇಳಬಹುದು.

ಪ್ರತಿಯೊಂದು ಧರ್ಮದವರಿಗೂ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ಒಂದೇ ಕಾನೂನು ಇದೆಯಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಪ್ರತಿಯೊಂದು ಧರ್ಮದವರಿಗೂ ಪ್ರತ್ಯೇಕವಾದ ಕಾನೂನುಗಳಿವೆ ಅದು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದು ಉಪ ಧರ್ಮ ಮತ್ತು ಉಪ ಜಾತಿಗಳಿಗೆ ಸಂಬಂಧಿಸಿದಂತೆ ಪಿತ್ರಾರ್ಜಿತ ಆಸ್ತಿಗೆ ಒಂದೇ ರೀತಿಯಾದಂತಹ ಕಾನೂನು ಇರುತ್ತದೆ. ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ತಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಆಸ್ತಿಯನ್ನು ಹೇಗೆ ಅನುವಂಶಿಕವಾಗಿ ಪಡೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಅವರ ವೈಯಕ್ತಿಕ ಕಾನೂನುಗಳಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಪಿತ್ರಾರ್ಜಿತ ಆಸ್ತಿಯನ್ನು ಒಬ್ಬ ವ್ಯಕ್ತಿ ತನಗೆ ಇಷ್ಟ ಬಂದವರಿಗೆ ಕೊಡಬಹುದೇ ಅಥವಾ ಮಾರುವುದಕ್ಕೆ ಅವಕಾಶವಿದೆಯೇ ಎಂದರೆ ನಿರ್ದಿಷ್ಟವಾಗಿ ಪಿತ್ರಾರ್ಜಿತ ಆಸ್ತಿಯನ್ನು ಅಷ್ಟು ಸುಲಭವಾಗಿ ಇನ್ನೊಬ್ಬರಿಗೆ ಮಾರಾಟ ಮಾಡುವುದಕ್ಕೆ ಆಗುವುದಿಲ್ಲ ಅಥವಾ ತಮಗೆ ಇಷ್ಟ ಬಂದವರಿಗೆ ಕೊಡಲು ಆಗುವುದಿಲ್ಲ ಏಕೆಂದರೆ ಆಸ್ತಿ ಪಿತ್ರಾರ್ಜಿತವಾಗಿ ಸಿಕ್ಕಿರುವುದರಿಂದ. ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಾಗ ಪಿತ್ರಾರ್ಜಿತ ಆಸ್ತಿಯ ಅಡಿಯಲ್ಲಿ ಬರುವ ಕುಟುಂಬದ ಪ್ರತಿಯೊಬ್ಬರ ಒಪ್ಪಿಗೆ ಅವಶ್ಯಕವಾಗಿರುತ್ತದೆ. ಪಿತ್ರಾರ್ಜಿತ ಕಾಯ್ದೆ ಹೇಳುವಂತೆ ಮನೆಯ ಒಬ್ಬ ಸದಸ್ಯರು ಒಪ್ಪಿಗೆ ಇಲ್ಲದಿದ್ದರೆ ಆಸ್ತಿ ಮಾರಾಟ ಮಾಡುವಂತೆ ಇಲ್ಲ. ಒಂದು ವೇಳೆ ಆಸ್ತಿ ಮಾರಾಟವಾದರೆ ಒಬ್ಬ ಸದಸ್ಯ ವಕೀಲರ ಸಲಹೆ ಪಡೆದುಕೊಂಡು ಮುಂದಿನ ಹೆಜ್ಜೆ ಇಡಬಹುದು.
ಇನ್ನು ಕೆಲವರಿಗೆ ಕಾಡುವ ಪ್ರಶ್ನೆ ಒಟ್ಟು ಕುಟುಂಬದ ಸದಸ್ಯ ಸ್ವಯಾರ್ಜಿತ ಆಸ್ತಿಯನ್ನು ಮಾಡಲು ಸಾಧ್ಯವೇ ಎಂಬುದು. ತುಂಬು ಕುಟುಂಬದಲ್ಲಿ ಇರುವವರು ಸ್ವಯಾರ್ಜಿತ ಆಸ್ತಿಯ ಮಾಡುವುದಕ್ಕೆ ಕಷ್ಟವಾಗುತ್ತದೆ ಒಟ್ಟು ಕುಟುಂಬದಲ್ಲಿ ಎಲ್ಲರ ಆದಾಯವನ್ನು ಒಂದೇ ಎಂದು ಪರಿಗಣಿಸಬೇಕಾಗುತ್ತದೆ. ಒಟ್ಟು ಕುಟುಂಬದಲ್ಲಿರುವ ಒಬ್ಬ ಸದಸ್ಯ ಪ್ರತ್ಯೇಕವಾಗಿ ಸ್ವಯಾರ್ಜಿತ ಆಸ್ತಿಯನ್ನು ಗಳಿಸಿದರೆ ಗಳಿಸಿರುವ ಅಸ್ತಿಯ ಮೂಲವನ್ನು ಹೇಳಬೇಕಾಗಿ ಬರುತ್ತದೆ. ಅಂದರೆ ಆದಾಯ ಯಾವ ಮೂಲದಿಂದ ಗಳಿಸಿದ್ದು ಎನ್ನುವ ಸಾಕ್ಷಿ ಒದಗಿಸುವ ಸಂದರ್ಭ ಬರುತ್ತದೆ. ಅಂತಹ ಸಂದರ್ಭ ಬಂದಾಗ ಸಾಕ್ಷಿಯನ್ನು ಒದಗಿಸಲೇಬೇಕು ಅಥವಾ ಒಬ್ಬ ಸದಸ್ಯ ಗಳಿಸಿದ ಸ್ವಯಾರ್ಜಿತ ಆಸ್ತಿಯ ಸಮಸ್ಯೆಯನ್ನು ಒಟ್ಟು ಕುಟುಂಬದವರು ಕುಳಿತುಕೊಂಡು ತೀರ್ಮಾನ ತೆಗೆದುಕೊಳ್ಳಬಹುದು. ಒಂದು ವೇಳೆ ವಿವಾದ ಕಂಡುಬಂದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಬಹುದು.
ಮುಂದಿನದಾಗಿ ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದೇ ಎಂಬುದು. ಕೆಲವೊಂದು ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದು. ಅದು ಯಾವ ರೀತಿ ಎಂದರೆ ಇಬ್ಬರು ಅಣ್ಣ ತಮ್ಮಂದಿರಿಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿರುತ್ತದೆ ಅಣ್ಣ ಮತ್ತು ತಮ್ಮ ತಮಗೆ ಬಂದಿರುವ ಆಸ್ತಿಯನ್ನು ಪ್ರತ್ಯೇಕವಾಗಿ ವಿಭಾಗ ಅಥವಾ ಕ್ರಯ ಮಾಡಿಕೊಂಡು ಅವರು ರಿಜಿಸ್ಟರ್ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುತ್ತಾರೆ. ಇಲ್ಲಿ ಮುಖ್ಯವಾಗಿ ಅಣ್ಣನಿಗೆ ಮಕ್ಕಳು ಇದ್ದಿರುತ್ತಾರೆ ಆದರೆ ತಮ್ಮನಿಗೆ ಮಕ್ಕಳು ಇರುವುದಿಲ್ಲ. ಅಂತಹ ಸಮಯದಲ್ಲಿ ತಮ್ಮ ತನ್ನ ಪಾಲಿಗೆ ಬಂದ ಆಸ್ತಿಯನ್ನು ತನಗೆ ಇಷ್ಟ ಇರುವವರ ಹೆಸರಿಗೆ ವಿಲ್ ಬರೆಯಬಹುದು ಅಥವಾ ತಮಗೆ ಇಷ್ಟ ಬಂದವರಿಗೆ ಆಸ್ತಿಯನ್ನು ಕೊಡಬಹುದು. ಇದಿಷ್ಟು ನಾವಿಂದು ನಿಮಗೆ ಪಿತ್ರಾರ್ಜಿತ ಆಸ್ತಿಯ ಕುರಿತು ತಿಳಿಸುತ್ತಿರುವ ಮಾಹಿತಿಯಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ತಿಳಿಸಿರಿ.