ಹಬ್ಬದ ಸ್ಪೆಷಲ್ ಸುಲಭವಾದ ಹಾಗೂ ರುಚಿಯಾದ ನಿಪ್ಪಟ್ಟು ಹೇಗೆ ಮಾಡೋದು ಅಂತ ನೋಡೋಣ ಇದನ್ನ ಸುಮಾರು ಹತ್ತರಿಂದ ಹದಿನೈದು ದಿನಗಳ ಕಾಲ ಇಟ್ಟುಕೊಳ್ಳಬಹುದು. ಹಾಗಾದ್ರೆ ಇದನ್ನ ಮಾಡೋದಕ್ಕೆ ಏನೇನು ಸಾಮಗ್ರಿಗಳು ಬೇಕು ಹೇಗೆ ಮಾಡೋದು ಅಂತ ಒಂದೊಂದೇ ಆಗಿ ನೋಡೋಣ.
ಬೇಕಾಗುವ ಸಾಮಗ್ರಿಗಳು :-ಅಕ್ಕಿ ಹಿಟ್ಟು ೧ ಕಪ್, ಕಡ್ಲೆ ಹಿಟ್ಟು ಕಾಲು ಕಪ್, ಹುರಿಗಡಲೆ ಕಾಲು ಕಪ್. ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ ಕಾಲು ಕಪ್, ಬಿಳಿ ಎಳ್ಳು ಒಂದು ಟಿ ಸ್ಪೂನ್, ಕರಿಬೇವು ಕಾಲು ಕಪ್ ಅಷ್ಟು, ಕೊತ್ತಂಬರಿ ಸೊಪ್ಪು ಕಾಲು ಕಪ್, ತುಪ್ಪ ಎರಡು ಟಿ ಸ್ಪೂನ್, ಜೀರಿಗೆ ಒಂದು ಟೀ ಸ್ಪೂನ್, ಕೆಂಪು ಮೆಣಸಿನ ಪುಡಿ ಒಂದು ಟಿ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ :- ಹುರಿಗಡಲೆ ಮತ್ತು ಶೇಂಗಾ ಬೀಜ ಎರಡನ್ನು ಬೇರೆ ಬೇರೆ ಆಗಿ ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಬೌಲ ಗೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ತರಿ ತರಿಯಾಗಿ ಪುಡಿ ಮಾಡಿಟ್ಟುಕೊಂಡ ಶೇಂಗಾ ಮತ್ತು ಹುರಿಗಡಲೇ ಪುಡಿ, ಜೀರಿಗೆ , ಕೆಂಪು ಮೆಣಸಿನ ಪುಡಿ , ಎಳ್ಳು ಸಣ್ಣಗೆ ಕಟ್ ಮಾಡಿದ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡು ಸ್ಪೂನ್ ತುಪ್ಪ ಸೇರಿಸಿ (ತುಪ್ಪ ಇಷ್ಟ ಪದಷ್ಟೇ ಇರುವವರು ಎಣ್ಣೆಯನ್ನ ಬಿಸಿ ಮಾಡಿ ಸೇರಿಸಿಕೊಳ್ಳಬಹುದು) ಅತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ನಂತರ ಒಂದು ಪ್ಲಾಸ್ಟಿಕ್ ಕವರ್ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆ ಸವರಿಕೊಂಡು ಕೈಗೂ ಸಹ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ನಿಪ್ಪಟ್ಟು ತಟ್ಟಿಕೊಂಡು ಮಧ್ಯಮ ಉರಿಯಲ್ಲಿ ಕಾದ ಎಣ್ಣೆಯಲ್ಲಿ 3/4 ನಿಮಿಷ ಮಧ್ಯಮ ಉರಿಯಲ್ಲಿ ಸರಿಯಾಗಿ ಬೇಯಿಸಬೇಕು. ಹೀಗೆ ಮಾಡಿಟ್ಟುಕೊಂಡು ಸುಮಾರು ಎರಡು ವಾರಗಳಾದರು ಬಳಸಬಹುದು.