ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರಲ್ಲಿ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರು. ನಂತರ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸುವುದರ ಮೂಲಕ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವನ್ನ ಗಳಿಸಿದವರು ಪುನೀತ್ ರಾಜಕುಮಾರ್. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಾರಿಗೂ ತಿಳಿಯದಂತೆ ಬಡವರಿಗೆ ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡುತ್ತಾ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದವರು ಪುನೀತ್ ರಾಜಕುಮಾರ್ ಅವರು. ತಮ್ಮ ಚಿಕ್ಕವಯಸ್ಸಿನಲ್ಲಿಯೇ ವಿಧಿಯ ಆಟಕ್ಕೆ ಬಲಿಯಾದ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಮನಸ್ಸಿನಲ್ಲಿ ಸದಾಕಾಲ ನೆಲೆಸಿರುತ್ತಾರೆ.
ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗದಲ್ಲಿ ನಟಿಸುತ್ತಿದ್ದರು ಕೂಡ ಅವರಿಗೆ ಕಲಾರಂಗದಲ್ಲಿ ತಾನು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಯಾವ ಆಸೆಯೂ ಇರಲಿಲ್ಲ ಈ ಕುರಿತು ಅವರ ಮಾವ ಚಿನ್ನೇಗೌಡರು ಏನು ಹೇಳುತ್ತಾರೆ ಎಂಬುದನ್ನು ನೋಡುವುದಾದರೆ ಚಿಕ್ಕವಯಸ್ಸಿನಿಂದಲೂ ಪುನೀತ್ ರಾಜಕುಮಾರ್ ಅವರನ್ನು ಆಡಿಸಿ ಬೆಳೆಸಿದವರು ಅವರ ಮಾವ. ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಲ್ಲಿ ಮೈಸೂರಿಗೆ ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ಅವರ ಮಾವ ಜೊತೆ ಇರುತ್ತಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಇವರು ಯಾವಾಗಲೂ ಸ್ನಾನವನ್ನು ಮಾಡಿಸುತ್ತಿದ್ದರು.
ಇವರು ಪುನೀತ್ ರಾಜಕುಮಾರ್ ಅವರಿಗೆ ನೀನು ದೊಡ್ಡ ಕಲಾವಿದನಾಗುತ್ತೀಯಾ ಎಂದು ಹೇಳಿದಾಗ ಅವರು ಇಲ್ಲ ಮಾವ ನನಗೆ ಅದೆಲ್ಲ ಬೇಡ ಎಂದು ಹೇಳುತ್ತಿದ್ದರಂತೆ. ನೀನು ಕಲಾವಿದನಾದರೆ ನನಗೆ ಕಾಲ್ ಶೀಟ್ ಕೊಡುತ್ತಿಯಾ ಎಂದು ಕೇಳಿದಾಗ ನನಗೆ ಅದೆಲ್ಲ ಬೇಡ ನನಗೆ ಕಲಾವಿದನಾಗುವುದಕ್ಕೆ ಇಷ್ಟ ಇಲ್ಲ ಎಂದು ಹೇಳಿದ್ದರಂತೆ. ಕಲಾವಿದನಾಗಿ ಬೆಳೆಯುವುದಕ್ಕೆ ಇಷ್ಟವಿಲ್ಲದಿದ್ದರೂ ಮುಂದೆ ಕಲಾಕ್ಷೇತ್ರದಲ್ಲಿ ಉತ್ತುಂಗ ಸ್ಥಾನಕ್ಕೇರಿದ್ದು ಸುಳ್ಳಲ್ಲ. ಅವರು ಮಾಡಿರುವಂತಹ ಸಿನಿಮಾಗಳು ಸಮಾಜ ಸೇವೆಗಳು ಅವರು ಎಲ್ಲಿಯೂ ಹೋಗದಂತೆ ಅವರು ಸದಾ ನಮ್ಮ ನಡುವೆ ಇರುವಂತೆ ಮಾಡುತ್ತವೆ ಅವರನ್ನ ಮರೆಯುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲೇ ವಿಶಾಲ ಹೃದಯವುಳ್ಳ ವ್ಯಕ್ತಿಯಾಗಿದ್ದರು ಅಪ್ಪು