ಆತ್ಮೀಯ ಓದುಗರೇ ಈ ಲೇಖನದ ಮೂಲಕ ಪೌತಿ ಖಾತೆ ಎಂದರೇನು ಈ ಪೌತಿ ಖಾತೆಯಡಿ ನಿಮ್ಮ ಜಮೀನು ಅಥವಾ ಅಸ್ತಿ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ಸಂಪೂಣವಾಗಿ ತಿಳಿಯೋಣ. ನಿಮ್ಮ ಜಮೀನು ನಿಮ್ಮ ಹೆಸರಿಗೆ ಆಗಿಲ್ಲವೇ, ಕುಟುಂಬದ ಮುಖ್ಯಸ್ಥರು ಮರಣ ಹೊಂದಿ ಅನೇಕ ವರ್ಷಗಳಾದರೂ ಸಹ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಆಗದಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ, ಪೌತಿ ಖಾತೆಯ ಮೂಲಕ ಸುಲಭವಾಗಿ ನಿಮ್ಮ ಜಮೀನು ಅಥವಾ ಆಸ್ತಿ ವರ್ಗಾವಣೆ ಮಾಡಿ ಕೊಳ್ಳಬಹುದು. ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಹಾಗೂ ಜಮೀನು ವರ್ಗಾವಣೆಗೆ ಬೇಕಾಗುವ ದಾಖಲೆಗಳು ಇನ್ನಿತರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಪೌತಿ ಖಾತೆ ಎಂದರೆ, ರೈತರು ಮರಣ ಹೊಂದಿದ ಹೆಸರಿನಲ್ಲಿರುವ ಆಸ್ತಿಯನ್ನು  ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು  ಪೌತಿ ಖಾತೆ ಎತ್ತುತ್ತಾರೆ.. ಉದಾಹರಣೆಗೆ – ಒಂದು ಮನೆಯಲ್ಲಿ ತಂದೆ ಗಂಡ ಅಥವಾ ಅಜ್ಜ, ಅಜ್ಜಿ ಮರಣ ಹೊಂದಿದರೆ ಅವರ ಹೆಸರಿನ ಮೇಲೆ ಜಮೀನನ್ನು ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ್ನು ವರ್ಗಾವಣೆ ಮಾಡುವುದು.

ಪೌತಿ ಖಾತೆಯಡಿ ಜಮೀನು ವರ್ಗಾವಣೆಗೆ ಬೇಕಾಗುವ ದಾಖಲೆಗಳು,, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವಂಶವೃಕ್ಷ ಅಥಾವ ವಂಶಾವಳಿ ಪ್ರಮಾಣ ಪತ್ರ ಬೇಕು, ಹಾಗೂ ಇತ್ತಿಚಿನ ಪಹಣಿ ಹಾಗೂ 18 ವರ್ಷದ ಮ್ಯುಟೇಷನ್ ಸಲ್ಲಿಸಬೇಕು. ಚುನಾವಣೆ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಬೇಕು. ಒಂದು ವೇಳೆ ವಂಶವೃಕ್ಷ ಲಭ್ಯವಿರದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ  ದಾಖಲಿಸಬಹುದು. ಉದಾಹರಣೆಗೆ – ಒಂದು ಕುಟುಂಬದಲ್ಲಿ ನಾಲ್ಕೈದು ಮಕ್ಕಳಿದ್ದರೆ ಯಾರ ಹೆಸರಿನ ಮೇಲೆ ಎಷ್ಟು ಜಮೀನು ವರ್ಗಾವಣೆ ಮಾಡಬೇಕೆಂಬುದರ ವಿವರವನ್ನು ಅರ್ಜಿಯಲ್ಲಿ ನಮೂದಿಸಬೇಕು.

ನಾಡಕಚೇರಿಯಲ್ಲಿ ಅರ್ಜಿ ಲಭ್ಯ – ಪೌತಿ ವಾರಸುಖಾತೆ ಮಾಡಿ ಕೊಳ್ಳಲು  ನಮೂನೆ -1 ಅರ್ಜಿ ರಾಜ್ಯದ ಎಲ್ಲಾ ನಾಡ ಕಚೇರಿಗಳಲ್ಲಿ ಲಭ್ಯವಿರುತ್ತದೆ ಇಲ್ಲವೇ ನಾಡ ಕಚೇರಿ ಅಥಾವ ತಹಶೀಲ್ ಕಚೇರಿಯ ಬಳಿಯ ಝರಾಕ್ಸ್ ಅಂಗಡಿಗಳಲ್ಲೂ ದೊರೆಯುತ್ತವೆ. ಹೊಲದ ಸುತ್ತಮುತ್ತದ ಸರ್ವೆ ನಂಬರ್ ಮತ್ತು ಮಾಲೀಕರ ಹೆಸರು ಹಾಗೂ ಸಹಿ ಮಾಡಿಸಬೇಕು. ಮೂರ್ನಾಲ್ಕು ತಿಂಗಳ ನಂತರ ಪಹಣಿ ವಾರಸುದಾರರ ಹೆಸರಿನ ಮೇಲೆ ವರ್ಗಾವಣೆಯಾಗುತ್ತದೆ.

ಪೌತಿ ಖಾತೆಯಡಿ ಜಮೀನು ವರ್ಗಾವಣೆಯಿಂದಾಗುವ ಉಪಯೋಗಗಳು ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದರಿಂದ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತವೆ, ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಹಾಳಾದಾಗ ಬೆಳೆ ವಿಮೆ ಪರಿಹಾರ ಪಡೆಯಲು ಸಹಾಯವಾಗುತ್ತದೆ, ಒಂದು ವೇಳೆ ಸರ್ಕಾರವು ನಿಮ್ಮ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಪಡೆದುಕೊಂಡರೆ ಸರ್ಕಾರದಿಂದ ಪರಿಹಾರ ಹಣ ಸಿಗುತ್ತದೆ.

Leave a Reply

Your email address will not be published. Required fields are marked *