ಸರ್ಕಾರದಿಂದ ಬೇಳೆ ಪರಿಹಾರ ಪಡೆಯೋದು ಹೇಗೆ, ಇದಕ್ಕೆ ದಾಖಲೆಗಳು ಏನ್ ಬೇಕು ನೋಡಿ

0 10

ಕರ್ನಾಟಕದಲ್ಲಿ ಈಗಾಗಲೇ ಅತಿಯಾದ ಮಳೆಯಿಂದ ಅಥವಾ ಇನ್ನಿತರ ಕಾರಣಗಳಿಂದ ರೈತರು ಬೆಳೆದಂತಹ ಬೆಳೆ ಹಾಳಾಗಿದ್ದು ಇದಕ್ಕಾಗಿ ಸರ್ಕಾರ ನೀಡುವಂತಹ ಪರಿಹಾರಧನವನ್ನು ಕೆಲವೊಂದು ಭಾಗದ ರೈತರು ಪಡೆದುಕೊಂಡಿದ್ದಾರೆ ಆದರೆ ಲಕ್ಷಾಂತರ ಜನರಿಗೆ ಇನ್ನೂ ಬೆಳೆ ಪರಿಹಾರ ಧನ ಸಿಕ್ಕಿಲ್ಲ. ಹಾಗಾದರೆ ಬೆಳೆವಿಮೆಯನ್ನು ಪಡೆದುಕೊಳ್ಳುವುದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಕುರಿತ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಬೆಳೆ ಪರಿಹಾರ ನಿಧಿಯನ್ನು ಪಡೆದುಕೊಳ್ಳುವುದಕ್ಕೆ ರೈತರು ಕೆಲವು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಹಾಗಾದರೆ ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನು ನೋಡುವುದಾದರೆ ಆಧಾರ್ ಕಾರ್ಡ್ ನಿಮ್ಮ ಜಮೀನಿನ ಪಹಣಿ, ಯಾವ ಜಮೀನಿನ ಬೆಳೆ ಹಾಳಾಗಿದೆ ಆ ಜಮೀನಿನ ಪಹಣಿ ಆಗಿರಬೇಕು. ಬ್ಯಾಂಕ್ ಪಾಸ್ ಬುಕ್ ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಆ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯನ್ನು ನೀವು ಸಲ್ಲಿಸಬೇಕು ಹಾಗಾದರೆ ಅರ್ಜಿಯನ್ನು ಯಾವ ರೀತಿ ಎಲ್ಲಿ ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ ಮೇಲೆ ತಿಳಿಸಿರುವ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಊರಿನ ಗ್ರಾಮಲೆಕ್ಕಿಗರನ್ನು ಸಂಪರ್ಕಿಸಬೇಕು.

ನಿಮ್ಮ ದಾಖಲೆಗಳನ್ನು ಅವರ ಬಳಿ ಸಲ್ಲಿಸಿ ಅವರ ಹತ್ತಿರ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವುದಕ್ಕೆ ಹೇಳಬೇಕು. ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಊರಿನ ಕೆಲವರಿಗೆ ಬೆಳೆ ಪರಿಹಾರ ನಿಧಿ ದೊರಕಿದ್ದು ನಿಮಗೆ ಬರಲಿಲ್ಲ ಎಂದರೆ ಆಗ ನೀವು ಮತ್ತೆ ನಿಮ್ಮ ಊರಿನ ಗ್ರಾಮಲೆಕ್ಕಿಗರನ್ನು ಭೇಟಿಯಾಗಿ ನಿಮ್ಮ ಅರ್ಜಿ ತಿರಸ್ಕೃತವಾಗಿದೆ ಅಥವಾ ಕೊಟ್ಟಿರುವ ದಾಖಲೆಗಳಲ್ಲಿ ಏನಾದರೂ ತಪ್ಪಾಗಿದೆಯೆ ಎಂಬುದರ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಿ.

ನೀವು ಕೂಡ ನಿಮ್ಮ ಬೆಳೆ ಹಾಳಾಗಿ ದಲ್ಲಿ ಬೆಳೆ ಪರಿಹಾರ ನಿಧಿಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಬರುವ ಪರಿಹಾರ ನಿಧಿಯನ್ನು ಪಡೆದುಕೊಳ್ಳಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.