ಎಲ್ಲ ಹಣ್ಣುಗಳಲ್ಲಿ ಆರೋಗ್ಯಕರ ಗುಣ ಇರುತ್ತದೆ. ಹಣ್ಣುಗಳಲ್ಲಿ ಒಂದು ಪ್ರಮುಖ ಹಣ್ಣು ಅಂಜೂರ ಹಣ್ಣು ಇದು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಈ ಹಣ್ಣಿನ ಸೇವನೆಯಿಂದ ಅನೇಕ ರೋಗಗಳನ್ನು ದೂರವಿಡಬಹುದು. ಹಾಗಾದರೆ ಅಂಜೂರ ಹಣ್ಣಿನ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಅಂಜೂರ ಇದು ಮೆಲೆಸಿ ಕುಟುಂಬಕ್ಕೆ ಸೇರಿದ ಒಂದು ಮರವಾಗಿದೆ. ಅಂಜೂರ ಹಣ್ಣನ್ನು ತಿನ್ನುತ್ತಾರೆ, ಪೈಕಾಸ್ ಕ್ಯಾರಿಕಾ ಎಂಬುದು ಇದರ ವೈಜ್ಞಾನಿಕ ಹೆಸರು. ಈ ಹಣ್ಣಿನಲ್ಲಿ ಕಬ್ಬಿಣ, ತಾಮ್ರ ಹಾಗೂ ವಿಟಮಿನ್ ಎ, ಬಿ, ಸಿ ಮತ್ತು ಡಿ ಅಂಶಗಳು ಹೇರಳವಾಗಿದೆ ಅಲ್ಲದೆ ಈ ಹಣ್ಣಿನಲ್ಲಿ ವಿಶೇಷವಾದ ಪೋಷಕಾಂಶಗಳು ಸಿಗುತ್ತದೆ. ಪ್ರತಿದಿನ ಎರಡು ಅಂಜೂರ ಹಣ್ಣನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಈ ಹಣ್ಣಿನಲ್ಲಿ ಇತರ ಹಣ್ಣುಗಳಿಗಿಂತ ಕಬ್ಬಿಣ ಮತ್ತು ತಾಮ್ರದ ಅಂಶ ಹೆಚ್ಚಾಗಿದೆ.
ಮಕ್ಕಳಾಗದೆ ಇರುವವರು ತಮ್ಮ ದಿನನಿತ್ಯದ ಆಹಾರದಲ್ಲಿ ಅಂಜೂರ ಹಣ್ಣನ್ನು ಸೇವಿಸಬೇಕು. ಅಂಜೂರ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ. ಅಂಜೂರ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅಂಜೂರ ಹಣ್ಣಿನಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ನಾರಿನಂಶ ಹೆಚ್ಚು ಇರುವ ಆಹಾರವನ್ನು ಸೇವಿಸುವುದರಿಂದ ಜೀರ್ಣ ವ್ಯವಸ್ಥೆ ಕ್ರಮಬದ್ಧವಾಗಿರುತ್ತದೆ. ದಿನಕ್ಕೆ ಎರಡು ಬಾರಿ ಅಂಜೂರ ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಂಜೂರ ಹಣ್ಣಿನಲ್ಲಿ ಮೆಗ್ನೀಷಿಯಂ, ಮ್ಯಾಂಗನೀಸ್, ಖನಿಜ ಹೆಚ್ಚಿರುವುದರಿಂದ ಸಂತಾನ ಸಮಸ್ಯೆ ದೂರವಾಗುತ್ತದೆ. ಸಾಮಾನ್ಯವಾಗಿ ಕಂಡುಬರುವ ಹೈ ಬಿಪಿ ನಿಯಂತ್ರಣಕ್ಕೆ ಅಂಜೂರ ಹಣ್ಣು ಉತ್ತಮ ಮನೆಮದ್ದಾಗಿದೆ ಆದ್ದರಿಂದ ಪ್ರತಿನಿತ್ಯ ಎರಡು ಅಂಜೂರ ಹಣ್ಣನ್ನು ಸೇವಿಸಬೇಕು.
ಮಕ್ಕಳಿಗೂ ಅಂಜೂರ ಹಣ್ಣನ್ನು ಕೊಡಬಹುದು ಇದರಿಂದ ಅವರ ಶಾರೀರಿಕ ಬೆಳವಣಿಗೆಗೆ ಸಹಾಯಕವಾಗಿದೆ. ಅಂಜೂರ ಹಣ್ಣನ್ನು ಮಹಿಳೆಯರು ತಪ್ಪದೆ ಸೇವಿಸಬೇಕು. ಅಂಜೂರ ಹಣ್ಣನ್ನು ಎಷ್ಟು ಸೇವಿಸಿದರೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ತೂಕ ಕಡಿಮೆ ಮಾಡುವವರು ಪ್ರತಿನಿತ್ಯ ಎರಡು ಅಂಜೂರ ಹಣ್ಣನ್ನು ಸೇವಿಸಬೇಕು. ಊಟದ ಮೊದಲು ಅಂಜೂರ ಹಣ್ಣಿನ ಜ್ಯೂಸ್ ಅಥವಾ ಅಂಜೂರ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆ ತುಂಬುತ್ತದೆ. ನಾವು ದಿನನಿತ್ಯ ಜಂಕ್ ಫುಡ್ ಸೇವಿಸಿ ಹೊಟ್ಟೆ ಹಾಳುಮಾಡಿಕೊಳ್ಳುವ ಬದಲು ಅಂಜೂರ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಹೆಚ್ಚುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಅಂಜೂರ ಹಣ್ಣಿನ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳೋಣ.