ಪ್ರತಿದಿನ 2 ಒಣ ಖರ್ಜುರ ತಿನ್ನೋದ್ರಿಂದ ಶರೀರಕ್ಕೆ ಎಂತ ಲಾಭವಿದೆ ಅಂತೀರಾ

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಒಣ ಖರ್ಜೂರ ಇದಕ್ಕೆ ಉತ್ತತ್ತಿ ಎಂತಲೂ ಕರೆಯುತ್ತಾರೆ. ಇದರ ಸೇವನೆಯಿಂದ ಆರೋಗ್ಯದ ದೃಷ್ಟಿಯಿಂದ ಬಹಳ ಉಪಯೋಗವಿದೆ. ಹಾಗಾದರೆ ಒಣ ಖರ್ಜೂರ ಸೇವನೆಯಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ನೋಡಲು ಚಿಕ್ಕದಾಗಿರುವ ಒಣ ಖರ್ಜೂರ ಆರೋಗ್ಯಕರವಾಗಿ ಬಹಳ ಉಪಯುಕ್ತವಾಗಿದೆ. ನೈಸರ್ಗಿಕವಾಗಿ ಅತ್ಯಂತ ಸಿಹಿ ಅಂಶವನ್ನು ಹೊಂದಿರುವ ಈ ಹಣ್ಣು ಎಲ್ಲರಿಗೂ ಇಷ್ಟವಾಗುತ್ತದೆ ಅದರಲ್ಲೂ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಪ್ರತಿಯೊಬ್ಬರು ತಾವು ಸೇವಿಸುವ ಆಹಾರದ ಜೊತೆಗೆ ದಿನಕ್ಕೆ ಒಂದೆರಡು ಒಣ ಖರ್ಜೂರವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳ ಲಾಭವಿದೆ. ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವ ಆಹಾರದಲ್ಲಿ ಒಣ ಖರ್ಜೂರ ಪ್ರಮುಖ ಪಾತ್ರ ವಹಿಸುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ಒದಗಿಸಿ ದೇಹವನ್ನು ಚುರುಕುಗೊಳಿಸುತ್ತದೆ. ಇದರಲ್ಲಿ ನೈಸರ್ಗಿಕವಾದ ಸಿಹಿ ಅಂಶ ಇರುವುದರಿಂದ ದೇಹಕ್ಕೆ ಯಾವುದೆ ಅಡ್ಡ ಪರಿಣಾಮ ಇರುವುದಿಲ್ಲ.

ಒಣ ಖರ್ಜೂರದಲ್ಲಿ ಕ್ಯಾಲ್ಶಿಯಂ ಪ್ರಮಾಣವಿದ್ದು ಮೂಳೆಗಳನ್ನು ಬಲಪಡಿಸುತ್ತದೆ ಅಲ್ಲದೆ ಕ್ಯಾಲ್ಶಿಯಂ ಕೊರತೆಯಿಂದ ಕಾಡುವ ಖಾಯಿಲೆಗಳು ಗುಣಮುಖವಾಗುತ್ತದೆ. ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಅಲ್ ಜಾಮರ್ ಖಾಯಿಲೆಯು ನಮ್ಮ ಮೆದುಳಿನ ನರಸಂಪರ್ಕ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಈ ಖಾಯಿಲೆ ಬಂದರೆ ನಮಗೆ ನೆನಪಿನ ಶಕ್ತಿ, ಬುದ್ಧಿ ಶಕ್ತಿ, ಕಲಿಕೆ, ಕ್ರಿಯಾಶೀಲತೆ, ಗ್ರಹಿಕೆ ಕಡಿಮೆಯಾಗುತ್ತದೆ ಇಂತಹ ಖಾಯಿಲೆಗೆ ಒಣ ಖರ್ಜೂರ ಉತ್ತಮ ಮನೆಮದ್ದಾಗಿದೆ ಇದರಲ್ಲಿ ರಂಜಕವು ಸಮೃದ್ಧವಾಗಿದೆ. ಮೆದುಳಿನ ಆರೋಗ್ಯವನ್ನು ಕಾಪಾಡಿ ಮೆದುಳಿಗೆ ಅಗತ್ಯವಾಗಿರುವ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಒಣ ಖರ್ಜೂರ ಸೇವಿಸುವುದರಿಂದ ನಮ್ಮ ನರಮಂಡಲ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಒಣಖರ್ಜೂರದಲ್ಲಿ ಪೊಟ್ಯಾಷಿಯಂ ಮತ್ತು ಸೋಡಿಯಂ ಅಂಶ ಇರುವುದರಿಂದ ನರಮಂಡಲ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ನಡೆಸುತ್ತದೆ.

ಒಣ ಖರ್ಜೂರ ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುತ್ತದೆ ಅಲ್ಲದೆ ಪಾರ್ಶ್ವವಾಯು ಸಮಸ್ಯೆಯಿಂದ ದೂರವಿರಿಸುತ್ತದೆ. ಒಣ ಖರ್ಜೂರವನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಖರ್ಜೂರದಲ್ಲಿ ವಿಟಮಿನ್ ಬಿ ಕೂದಲಿನ ಬುಡಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಒಣ ಖರ್ಜೂರವನ್ನು ಸೇವಿಸಬೇಕು. ಒಣ ಖರ್ಜೂರದಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಈ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ರಕ್ತಹೀನತೆ, ನಿಶ್ಯಕ್ತಿಯಿಂದ ಬಳಲುವವರು ಒಣ ಖರ್ಜೂರ ಸೇವಿಸಬೇಕು. ಒಣ ಖರ್ಜೂರದಿಂದ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕ್ಕೆ ಲಾಭವಿದ್ದು ಒಣ ಖರ್ಜೂರವನ್ನು ನಿಯಮಿತವಾಗಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *