Ultimate magazine theme for WordPress.

ಎದೆಯಲ್ಲಿ ಕಟ್ಟಿರುವ ಎಂತ ಕಫ ಇರಲಿ ತಕ್ಷಣವೇ ಕಡಿಮೆ ಮಾಡುವ ಸೂಪರ್ ಮನೆಮದ್ದು

0 11

ಕಫದಿಂದ ಕೆಮ್ಮು ಬಂದರೆ ಕೊರೋನ ವೈರಸ್ ಎಂದು ಭಯವಾಗುತ್ತದೆ ಆದರೆ ಎಷ್ಟೆ ಕಫ ಕಟ್ಟಿದರೂ ಕಫವನ್ನು ನಿವಾರಿಸುವ ಮನೆ ಮದ್ದಿದೆ. ಅದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಎದೆಯಲ್ಲಿ ಕಟ್ಟಿದ ಕಫವನ್ನು ತಕ್ಷಣ ಕರಗಿಸಬಹುದು. ಕಫದಿಂದ ಗಂಟಲು ಕಟ್ಟಿದರೆ ಗಂಟಲು ಕೆರೆತ ಸಮಸ್ಯೆಗೆ ಒಂದು ಉತ್ತಮ ಮನೆ ಮದ್ದು ಇದೆ. ವಿಪರೀತ ಕೆಮ್ಮು, ಅಲರ್ಜಿ, ಪದೆ ಪದೆ ತಂಡಿ, ಶೀತ ಆಗುತ್ತಿದ್ದರೆ, ಕಫದಿಂದ ತಲೆನೋವು ಈ ಸಮಸ್ಯೆಗೆ ಈ ಮನೆಮದ್ದು ರಾಮಬಾಣವಾಗಿದೆ. ದೊಡ್ಡವರಿಂದ ಹಿಡಿದು ಚಿಕ್ಕವರವರೆಗೆ ಈ ಮನೆಮದ್ದು ಕೆಲಸ ಮಾಡುತ್ತದೆ. ಬೇಕಾಗುವ ಸಾಮಗ್ರಿಗಳು ಪಲಾವ್ ಎಲೆ ದೊಡ್ಡದಾದರೆ 4-5, ಚಿಕ್ಕದಾದರೆ 3-4, ಮೂರು ಚಮಚ ಸಕ್ಕರೆ, 5-6 ತುಳಸಿ ಎಲೆ. ಪಲಾವ್ ಎಲೆ ಬಹಳ ಔಷಧೀಯ ಗುಣ ಹೊಂದಿರುವ ಮಸಾಲೆ ಪದಾರ್ಥವಾಗಿದೆ. ಮೊದಲು ಸಕ್ಕರೆಯನ್ನು ಸಣ್ಣ ಉರಿಯಲ್ಲಿ ಕರಗಿಸಿಕೊಳ್ಳಬೇಕು ಸಕ್ಕರೆ ಬಿಳಿ ಬಣ್ಣದಿಂದ ಗೋಲ್ಡನ್ ಬಣ್ಣಕ್ಕೆ ತಿರುಗುತ್ತದೆ.

ಸಕ್ಕರೆ ಕರಗಿದ ನಂತರ ಒಂದು ಗ್ಲಾಸ್ ನೀರನ್ನು ಹಾಕಬೇಕು ಪಲಾವ್ ಎಲೆಯನ್ನು ಚೆನ್ನಾಗಿ ತೊಳೆಯಬೇಕು. ನಂತರ ಚಿಕ್ಕದಾಗಿ ಕಟ್ ಮಾಡಬೇಕು ಪಲಾವ್ ಎಲೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು ಆರೋಗ್ಯಕ್ಕೆ ಒಳ್ಳೆಯದು. ಈ ಎಲೆಯು ಕೆಮ್ಮು, ಶೀತ, ಅಲರ್ಜಿಯನ್ನು ಗುಣಪಡಿಸುತ್ತದೆ. ಕಟ್ ಮಾಡಿದ ಪಲಾವ್ ಎಲೆಯನ್ನು ಸಕ್ಕರೆ ಪಾಕಕ್ಕೆ ಹಾಕಬೇಕು. ನಂತರ ಅದಕ್ಕೆ ಶುಂಠಿಯನ್ನು ಚೆನ್ನಾಗಿ ತೊಳೆದು ತುರಿದು ಹಾಕಿ ಕುದಿಸಬೇಕು ಅದಕ್ಕೆ ಮೂರು ಲವಂಗ, ಕಾಳುಮೆಣಸು ಹಾಕಬೇಕು ಕಫ ಹೆಚ್ಚಾಗಿ ಕಣ್ಣು ಕೆಂಪಗಾದರೆ ಎರಡು ಜಾಸ್ತಿ ಕಾಳುಮೆಣಸು ಹಾಕಬೇಕು.

ನಂತರ ಅದಕ್ಕೆ ತುಳಸಿ ಎಲೆಯನ್ನು ಹಾಕಬೇಕು ರಾಮ ತುಳಸಿ ಅಥವಾ ಕೃಷ್ಣ ತುಳಸಿ ಯಾವುದನ್ನು ಬೇಕಾದರೂ ಹಾಕಬಹುದು. ನಂತರ ಚೆನ್ನಾಗಿ ಎರಡು ನಿಮಿಷ ಕುದಿಸಿ ಒಂದು ಗಾಜಿನ ಬಾಟಲ್ ಗೆ ಸೋಸಿ ಇಡಬಹುದು. ಫ್ರಿಜ್ ನಲ್ಲಿ 15 ದಿನಗಳು ಇಡಬಹುದು, ಹೊರಗೆ ಆದರೆ ಒಂದು ವಾರ ಇಡಬಹುದು. ದೊಡ್ಡವರಿಗೆ ಎರಡು ಚಮಚ, ಹೆಚ್ಚು ಕಫ ಆಗಿದ್ದರೆ ಒಂದು ಚಮಚ ಜಾಸ್ತಿ ತೆಗೆದುಕೊಳ್ಳಬಹುದು ದಿನಕ್ಕೆ ಮೂರು ಬಾರಿ ಎರಡರಿಂದ ಮೂರು ಚಮಚ ಸೇವಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಸೇವಿಸಿ 10 ನಿಮಿಷಗಳ ಕಾಲ ಏನನ್ನು ಸೇವಿಸಬಾರದು. ಮದ್ಯಾಹ್ನ ಊಟದ ನಂತರ ರಾತ್ರಿ ಊಟದ ನಂತರ ತೆಗೆದುಕೊಳ್ಳಬೇಕು. ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಸ್ಪೂನ್ ಸಾಕಾಗುತ್ತದೆ. ಈ ಮನೆಮದ್ದನ್ನು ಮೂರು ದಿನ ಮಾಡಿದರೆ ಕಫ, ಕೆಮ್ಮು, ಶೀತ ಕಡಿಮೆ ಆಗುತ್ತದೆ. ಇದರಿಂದ ಯಾವುದೆ ಅಡ್ಡ ಪರಿಣಾಮ ಇಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.