ಇವತ್ತು ನಾವು ನಿಮಗೆ ಮಜ್ಜಿಗೆ ಮತ್ತು ಮೊಸರು ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಮತ್ತು ಮೊಸರು ಮಜ್ಜಿಗೆಯನ್ನು ಯಾವಾಗ ಎಷ್ಟು ಯಾಕೆ ಬಳಸಬೇಕು ಎನ್ನುವುದರ ಕುರಿತಾಗಿ ತಿಳಿಸಿಕೊಡುತ್ತೇವೆ. ಮೊಸರು ಮತ್ತು ಮಜ್ಜಿಗೆ ಒಂದೇ ಮೂಲದಿಂದ ಬಂದಿರುವಂತದ್ದು ಆದರೆ ಮಜ್ಜಿಗೆ ಗುಣವೇ ಬೇರೆ ಮೊಸರಿನ ಗುಣವೇ ಬೇರೆ ಆದರೆ ಎರಡರಲ್ಲಿ ಇರುವ ಸಾಮಾನ್ಯ ಗುಣ ಏನು ಎಂದರೆ ಪ್ರೋಬಯೋಟಿಕ್ ಆಗಿ ಕೆಲಸ ಮಾಡುತ್ತವೆ. ಅಂದರೆ ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ ಅವುಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ ಕೆಟ್ಟ ಬ್ಯಾಕ್ಟೀರಿಯಾಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಕೆಲವು ಬ್ಯಾಕ್ಟೀರಿಯಾಗಳು ತಿಂದ ಆಹಾರವನ್ನು ಜೀರ್ಣ ಮಾಡುವುದಕ್ಕೆ ಸಹಾಯ ಮಾಡುತ್ತವೆ ಅವುಗಳಿಗೆ ಸಹಾಯ ಮಾಡುವಂತದ್ದು ಮೊಸರು ಮತ್ತು ಮಜ್ಜಿಗೆ.
ಹಾಗಾಗಿ ಮೊಸರು ಮತ್ತು ಮಜ್ಜಿಗೆಯನ್ನು ಆಹಾರದ ನಂತರ ಉಪಯೋಗಿಸಬೇಕು ಎಂದು ಹೇಳಿದ್ದಾರೆ. ನೀವು ಮೊಸರು ಅಥವಾ ಮಜ್ಜಿಗೆ ಸೇವಿಸುವಾಗ ಅದಕ್ಕೆ ಉಪ್ಪು ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಬಾರದು ಹಾಗೆಯೇ ಸೇವನೆ ಮಾಡಬೇಕು. ಸಂತೆಯಿಂದ ತಂದಂತಹ ತರಕಾರಿಗಳಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದುಕ್ಕೋಸ್ಕರ ಉಪ್ಪಿನ ನೀರಿನಲ್ಲಿ ಅವುಗಳನ್ನು ನೆನೆಸಿಡುತ್ತೇವೆ ಹೂಕೋಸನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟರೆ ಅದರಲ್ಲಿರುವ ಹುಳುಗಳು ಸಾಯುತ್ತವೆ.
ಅದೇ ರೀತಿ ನೀವು ಮೊಸರು ಅಥವಾ ಮಜ್ಜಿಗೆಗೆ ಉಪ್ಪನ್ನು ಸೇರಿಸಿದರೆ ಅಲ್ಲಿ ಇರುವಂತಹ ಪ್ರೋಬೈಯೋಟಿಕ್ಸ್ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ. ಆಗ ನೀವು ಮೊಸರು ಅಥವಾ ಮಜ್ಜಿಗೆಯನ್ನು ಸೇವನೆ ಮಾಡಿದ್ದು ಪ್ರಯೋಜನ ಆಗುವುದಿಲ್ಲ. ದೇಹಕ್ಕೆ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಅನುಕೂಲಕರ ವಾತಾವರಣ ಸೃಷ್ಟಿ ಆಗುವುದಿಲ್ಲ. ಹಾಗಾಗಿ ಉಪ್ಪನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಬಳಸುವುದು ಒಳ್ಳೆಯದಲ್ಲ.
ಮೊಸರು ಶೀತವಿರ್ಯ ದೇಹದಲ್ಲಿ ಕಫವನ್ನುಂಟು ಮಾಡುತ್ತದೆ ಆದ್ದರಿಂದ ರಾತ್ರಿ ಸೂರ್ಯ ಮುಳುಗಿದ ಮೇಲೆ ಮೊಸರು ಸೇವನೆಯನ್ನು ಮಾಡಬೇಡಿ. ಜೊತೆಗೆ ರಾತ್ರಿ ಮೊಸರು ಸೇವನೆಯನ್ನು ಮಾಡುವುದರಿಂದ ಸ್ಥೂಲಕಾಯದವರಾಗುತ್ತಿರಿ. ರಾತ್ರಿ ಹೊತ್ತು ಮೊಸರನ್ನ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ ದೇಹದಾರ್ಢ್ಯವಾಗುತ್ತದೆ ಹಾಗಾಗಿ ರಾತ್ರಿ ಮೊಸರುಗಳಿಸುವುದಕ್ಕಿಂತ ಬೆಳಗ್ಗಿನ ಹೊತ್ತು ಮೊಸರನ್ನ ಸೇವಿಸುವುದು ಒಳ್ಳೆಯದು. ಕಫ ಇರುವವರು ಅಸ್ತಮಾ ಇರುವವರು ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆಗಳಿರುವವರು ಮೊಸರನ್ನು ಹಿತಮಿತವಾಗಿ ಬಳಕೆ ಮಾಡುವುದು ಒಳ್ಳೆಯದು
ಮಜ್ಜಿಗೆಯನ್ನು ಕುಡಿದರೆ ಶಿತವಾಗುತ್ತದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಬಿಸಿಲಿನಿಂದ ಬಂದ ತಕ್ಷಣ ಮಜ್ಜಿಗೆ ಕುಡಿದರೆ ತಂಪಾಗುತ್ತದೆ ಎಂದು ಗಟಗಟನೆ ಮಜ್ಜಿಗೆಯನ್ನು ಕುಡಿಯುತ್ತಾರೆ ಆದರೆ ಇದು ತಪ್ಪು ಮಜ್ಜಿಗೆ ಉಷ್ಣ ವೀರ್ಯ ಹಾಗಾಗಿ ಹಿರಿಯರು ಊಟದ ನಂತರ ಕೊನೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದಕ್ಕೆ ಹೇಳಿದ್ದಾರೆ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಮಜ್ಜಿಗೆಯನ್ನು ಹೆಚ್ಚು ಉಪಯೋಗ ಮಾಡಬಾರದು ಇದರ ಆಶ್ಚರ್ಯವೆನಿಸಿದರೂ ಸತ್ಯ.
ಮಳೆಗಾಲದಲ್ಲಿ ಚಳಿಗಾಲದಲ್ಲಿ ಮಜ್ಜಿಗೆಯನ್ನು ಹೆಚ್ಚಾಗಿ ಉಪಯೋಗಿಸಬೇಕು ಇದು ಹೀಟ್ ನ್ನು ಕೊಡುತ್ತದೆ ಹಾಗಾಗಿ ಮಳೆಗಾಲ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವುದಕ್ಕೆ ಮಜ್ಜಿಗೆಯನ್ನು ಸೇವನೆ ಮಾಡುವುದು ಒಳ್ಳೆಯದು. ಇದಿಷ್ಟು ನಾವಿಂದು ನಿಮಗೆ ಮಜ್ಜಿಗೆ ಮತ್ತು ಮೊಸರು ಸೇವನೆಯ ಬಗ್ಗೆ ತಿಳಿಸುತ್ತಿರುವ ಮಾಹಿತಿಯಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.