ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ ಮತ್ತು ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭಪುಂಜ ಹಾಗೂ ಸುಮಂತ್ ದೀರ್ಘಕಾಲದ ಗೆಳೆಯರು ಬಿಗ್ ಬಾಸ್ ಕಾರ್ಯಕ್ರಮ ದಲ್ಲಿರುವಾಗಲೆ ಶುಭಪುಂಜ ಅವರು ಸುಮಂತ ಎನ್ನುವವರನ್ನು ವಿವಾಹ ವಾಗುವುದಾಗಿ ತಿಳಿಸಿದ್ದರು. ಶುಭಪುಂಜ ಹಾಗೂ ಸುಮಂತ ವಿವಾಹ ಈ ಹಿಂದೆಯೇ ಆಗಬೇಕಾಗಿತ್ತು ಆದರೆ ಕರೋನಾ ಕಾರಣದಿಂದ ಅವರ ವಿವಾಹವನ್ನು ಮುಂದೂಡಲಾಗಿತ್ತು. ಶುಭಪುಂಜ ಅವರು ಈ ಮೊದಲು ಸಂದರ್ಶನವೊಂದರಲ್ಲಿ ತಾವು ಸರಳವಾಗಿ ವಿವಾಹವಾಗುವುದಾಗಿ ತಿಳಿಸಿದ್ದರು ಅದೇ ರೀತಿ ಇದೀಗ ಶುಭಪುಂಜ ಹಾಗೂ ಸುಮಂತ್ ಅವರು ಸರಳವಾಗಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶುಭಪುಂಜಾ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಫೋಟೊ ಹಂಚಿಕೊಂಡು ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ನಾನು ಸುಮಂತ್ ಮಹಾಬಲ ಗುರು ಹಿರಿಯರು ಕುಟುಂಬದವರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೇಟ್ಟುವಿಡುವಿನಲ್ಲಿ ಸರಳ ವಿವಾಹವಾ ದೇವು ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ತಮ್ಮ ಮದುವೆಯ ಕೆಲವು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶುಭಾ ಪೂಂಜಾ ಅವರ ಸ್ನೇಹಿತರು ಚಿತ್ರ ರಂಗದ ಕಲಾವಿದರು ನವ ಜೋಡಿಗೆ ಶುಭಾ ಹಾರೈಸಿದ್ದಾರೆ.
ಶುಭಾಪೂಂಜಾ ಅವರು ಸುಮಂತ್ ಅವರನ್ನು ಕೆಲವು ವರ್ಷಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಸುಮಂತ್ ಅವರು ಸಿನಿಮಾರಂಗದವರಲ್ಲ ಉದ್ಯಮ ಕ್ಷೇತ್ರದವರು. ಇಬ್ಬರ ಪರಿಚಯ ಸ್ನೇಹವಾಗಿ ಸ್ನೇಹದಿಂದ ಪ್ರೀತಿಯಾಗಿ ತಮ್ಮ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳಿ ಮದುವೆಗೆ ಒಪ್ಪಿಸಿದ್ದರು ಈಗ ಅವರಿಬ್ಬರೂ ತಮ್ಮ ಆಸೆಯಂತೆ ತಮ್ಮ ಊರಿನ ದೇವಾಲಯದಲ್ಲಿ ಸರಳ ವಿವಾಹ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ನಾವೆಲ್ಲರೂ ಆಶಿಸೋಣ.