ಅಪ್ಪುಗಾಗಿ ವಿಶೇಷ ವೀಡಿಯೊ ಹಂಚಿಕೊಂಡ ಕ್ರಿಕೆಟಿಗ ಡೇವಿಡ್ ವಾರ್ನರ್

0 1

ವರನಟ ಡಾ. ರಾಜ್‌ಕುಮಾರ್‌ ಅವರ ಮಗನಾಗಿ ಅವರು ಪ್ರತಿಪಾದಿಸಿದ ಮೌಲ್ಯಗಳನ್ನೇ ಸಿನಿಮಾಗಳಲ್ಲಿ ಮತ್ತು ಬದುಕಿನಲ್ಲಿ ಪ್ರತಿನಿಧಿಸಿದ್ದು ಅಪ್ಪುವಿನ ವಿಶೇಷಪುನೀತ್‌ ಎಂದ ಕೂಡಲೇ ಸಿನಿಮಾ ಪಾತ್ರಗಳಷ್ಟೇ ನಿಜ ಬದುಕಿನ ವಿನಮ್ರತೆಗಳೂ ನೆನಪಾಗುತ್ತವೆ ಪುಟ್ಟ ಮಕ್ಕಳ ಎದುರೂ ಅತ್ಯಂತ ವಿಧೇಯತೆಯಿಂದ ನಡೆದುಕೊಳ್ಳುವ ದೊಡ್ಡವರ ಎದುರಂತೆ ಕೈಕಟ್ಟಿ ತಲೆ ಬಾಗಿ ನಿಲ್ಲುವಷ್ಟು ವಿನಯವನ್ನು ನಟ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಸಹಜವಾಗಿ ಹೊಂದಿದ್ದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಕೆಲಸ ಮಾಡಿದ್ದಾರೆ. ಬಡವರಿಗೆ ಮತ್ತು ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದರು. ಜೊತೆಗೆ ಊಟ ಮಾಡಿಲ್ಲ ಎಂದವರಿಗೆ ಮನೆಯ ಹತ್ತಿರ ಬಂದವರಿಗೆ ಊಟ ಮಾಡಿಸದೆ ಹಾಗೆ ಕಳಿಸುತ್ತಿರಲಿಲ್ಲ, ಇಂತಹ ಮನುಷ್ಯ ಇದೀಗ ನಮ್ಮ ಜೊತೆ ಇಲ್ಲದಿರುವುದು ನಮ್ಮ ದುರ್ದೈವವಾಗಿದೆ ಪುನೀತ ನಾವು ಈ ಲೇಖನದ ಮೂಲಕ ಪುನೀತ್ ರಾಜ ಕುಮಾರ್ ಅವರ ಅಭಿಮಾನಿ ಡೇವಿಡ್ ವಾರ್ನರ್ ಬಗ್ಗೆ ತಿಳಿದುಕೊಳ್ಳೊಣ.

ಪುನೀತ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ದೇಶ ವಿದೇಶದ ಅದೆಷ್ಟೋ ಮಂದಿ ಪುನೀತ್ ಅವರ ಫ್ಯಾನ್ಸ್ ಇದ್ದಾರೆ ಅಪ್ಪು ಅಭಿಮಾನಕ್ಕೆ ಎಲ್ಲೆ ಇಲ್ಲ ಅನ್ನೋದಕ್ಕೆ ಮತ್ತೊಂದು ಸ್ಯಾಂಪಲ್ ಸಿಕ್ಕಿದೆ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಪುನೀತ್ ಅವರನ್ನು ವಿಶೇಷವಾಗಿ ಗೌರವಿಸಿದ್ದಾರೆ. ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗನಾಗಿರುವ ಡೇವಿಡ್ ವಾರ್ನರ್ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪುನೀತ್ ಅವರ ಬಗ್ಗೆ ವಿಡಿಯೋ ಒಂದನ್ನು ಹಾಕಿಕೊಂಡಿದ್ದಾರೆ. ಪುನೀತ್ ರಾಜ್‌ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡಿನ ಒಂದು ಕ್ಲಿಪ್‌ ಅನ್ನು ಡೇವಿಡ್ ಪೋಸ್ಟ್ ಮಾಡಿದ್ದು ಇದರಲ್ಲಿ ಪುನೀತ್ ಮುಖಕ್ಕೆ ತನ್ನ ಮುಖವನ್ನು ಸೇರಿಸಿ ಅದನ್ನೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ .

ಡೇವಿಡ್ ವಾರ್ನರ್ ಪುನೀತ್ ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ ಇದಕ್ಕೆ ಪುನೀತ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.ಒಂದು ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಡೇವಿಡ್ ವಾರ್ನರ್ ಅವರ ಈ ಪೋಸ್ಟ್‌ಗೆ ಬಂದಿದೆ ಡೇವಿಡ್ ಅವರು ಇಂಡಿಯನ್ ಸಿನಿಮಾಗಳನ್ನು ಆಗಾಗ ನೋಡುತ್ತಿರುತ್ತಾರೆ ಈ ಬಗ್ಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಡೇವಿಡ್ ಸಿನಿಮಾ ಹೆಗಿತ್ತು ಅಂತಲೂ ತನ್ನ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಕನ್ನಡ ಹಿಂದಿ ತೆಲುಗು ಹಾಡುಗಳಿಗೆ ರೀಲ್ಸ್ ಮಾಡೋದು ಅದಕ್ಕೆ ಡ್ಯಾನ್ಸ್ ಮಾಡೋದು ಮಾಡುತ್ತಿರುತ್ತಾರೆ. ತಾನು ಹಾಗೂ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ಡೇವಿಡ್ ವಾರ್ನರ್‌ಗೆ ಈಗಾಗಲೇ ಸಾಕಷ್ಟು ಭಾರತೀಯ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡೇವಿಡ್ ಅವರನ್ನು ಹೆಚ್ಚು ಮಂದಿ ಅನುಸರಿಸುತ್ತಿದ್ದಾರೆ ಅಭಿಮಾನಕ್ಕೆ ಎಲ್ಲೆ ಇಲ್ಲ ಅನ್ನೋದಕ್ಕೆ ಇದೆ ಸಾಕ್ಷಿ

Leave A Reply

Your email address will not be published.