Actor Ramkumar Raj family ಕನ್ನಡದ ಆರಾಧ್ಯದೈವ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದವರು ಕಲಾವಿದರಾಗಿ ಕನ್ನಡ ಸಿನಿಮಾರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಒಂದಷ್ಟು ಜನರ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ ಒಂದಷ್ಟು ಜನರ ಬಗ್ಗೆ ಮಾಹಿತಿ ಇರುವುದಿಲ್ಲ.

ಅದರಲ್ಲಿ ರಾಜಕುಮಾರ್ ಅವರ ಅಳಿಯ ಆಗಿರುವಂತಹ ರಾಮ್ ಕುಮಾರ್ ಅವರ ಬಗ್ಗೆ ಸಾಕಷ್ಟು ಮಾತುಗಳು ಆಗಾಗ ಕೇಳಿ ಬರುತ್ತಿದ್ದವು ರಾಮ್ ಕುಮಾರ್ ರಾಜಕುಮಾರ್ ಅವರ ಅಳಿಯ ಆಗಿದ್ದು ಹೇಗೆ ರಾಮ್ ಕುಮಾರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲವಂತೆ ಅವರು ತಮಿಳುನಾಡಿನಿಂದ ಬಂದವರಂತೆ ಈ ರೀತಿಯಾಗಿ ಅವರ ಬಗ್ಗೆ ಏನೇನೋ ಮಾತುಗಳು ಕೇಳಿಬರುತ್ತಿದ್ದವು. ಆದರೆ ರಾಮ್ ಕುಮಾರ್ ಅವರ ಹಿನ್ನೆಲೆ ಸಾಮಾನ್ಯದ್ದಲ್ಲ ಅವರು ಕೂಡ ಉತ್ತಮವಾದ ಹಿನ್ನೆಲೆಯಿಂದಲೇ ಸಿನಿಮಾರಂಗಕ್ಕೆ ಬಂದವರು.

ರಾಮ್ ಕುಮಾರ್ ಅವರ ತಂದೆ ಶೃಂಗಾರ ನಾಗರಾಜ್ ಅವರು ಒಬ್ಬ ಪ್ರಖ್ಯಾತ ಪ್ರೊಡ್ಯೂಸರ್ ಹಾಗೆ ನಟ ಕೂಡ ಹೌದು. ಕಮಲಹಾಸನ್ ಅಭಿನಯದ ಪುಷ್ಪಕ ಸಿನಿಮಾವನ್ನು ಇವರು ಪ್ರೊಡ್ಯೂಸ್ ಮಾಡಿದ್ದರು ಹೀಗೆ ಸಾಲು ಸಾಲು ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡುವುದರ ಜೊತೆಗೆ ಕೆಲವೊಂದರಲ್ಲಿ ನಟನೆಯನ್ನು ಕೂಡ ಮಾಡಿದ್ದರು. ಅವರ ಮಗ ರಾಮಕುಮಾರ್ ಸಣ್ಣ ವಯಸ್ಸಿನಿಂದಲೇ ಪರೋಕ್ಷವಾಗಿ ಸಿನಿಮಾರಂಗದ ಸಂಪರ್ಕದಲ್ಲಿರುತ್ತಾರೆ

ಸಾವಿರದ ಒಂಬೈನೂರಾ ತೊಂಬತ್ತರಲ್ಲಿ ಆವೇಶ ಎನ್ನುವ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. ಅದಾದನಂತರ ಮುತ್ತಿನ ಹಾರ ಸಿನಿಮಾದಲ್ಲಿ ಕೂಡಾ ಒಂದು ಪಾತ್ರವನ್ನು ಮಾಡುತ್ತಾರೆ. ತಂದೆಯೇ ಪ್ರೋಡಿಸರ್ ಆಗಿರುವುದರಿಂದ ಪೂರ್ಣ ಪ್ರಮಾಣದ ನಟನಾಗುವ ಕಡೆ ಗಮನ ಹರಿಸುತ್ತಾರೆ. ಗೆಜ್ಜೆನಾದ ಎನ್ನುವ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಾರೆ.

ಆ ಕಾಲದಲ್ಲಿ ಬಹಳ ಸುಂದರವಾಗಿರುವಂತಹ ನಟ ಎಂದು ಕರೆಸಿಕೊಳ್ಳುತ್ತಾರೆ. ನೃತ್ಯ ಮಾಡುತ್ತಿದ್ದರು ನಟನೆಯನ್ನು ಕೂಡಾ ತುಂಬಾ ಚೆನ್ನಾಗಿ ಮಾಡುತ್ತಿದ್ದರು ಹಾಗಾಗಿ ಹೆಚ್ಚು ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಒಂದಷ್ಟು ಸಿನಿಮಾಗಳು ಉತ್ತಮ ಯಶಸ್ಸನ್ನು ಕಾಣುತ್ತವೆ ಕೆಲವೊಂದಕ್ಕೆ ಸೋಲು ಉಂಟಾಗುತ್ತದೆ. ಎರಡು ಸಾವಿರದ ಐದರ ನಂತರ ನಿಧಾನವಾಗಿ ಸಿನಿಮಾರಂಗದಿಂದ ಕಾಲನ್ನು ಹೊರಗಿಡುತ್ತಾ ಬರುತ್ತಾರೆ.

ನಂತರ ನಟನೆಯನ್ನು ಬಿಟ್ಟು ಪ್ರೊಡ್ಯೂಸರ್ ಆಗಿ ಕೆಲಸವನ್ನು ಮಾಡುತ್ತಾರೆ. ಪೈಪೋಟಿ ಹೆಚ್ಚಾದಂತೆ ಹೊಸ ಹೊಸ ನಟರ ಆಗಮನವಾದಂತೆ ಇವರಿಗೂ ಕೂಡ ಅವಕಾಶಗಳು ಕಡಿಮೆಯಾಗುತ್ತದೆ. ಅನಂತರ ಒಂದಿಷ್ಟು ಭಕ್ತಿಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎರಡು ಸಾವಿರದ ಒಂಬತ್ತರಲ್ಲಿ ಜೋಡಿ ನಂಬರ್ 1 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಅನಂತರ ಒಂದಿಷ್ಟು ವಿರಾಮವನ್ನು ತೆಗೆದುಕೊಂಡು ಆಗಾಗ ಕಾಣಿಸಿಕೊಳ್ಳುತ್ತಾರೆ. ಈಗ ಹೆಚ್ಚು-ಕಡಿಮೆ ಸಿನಿಮಾರಂಗದಿಂದ ದೂರಾನೇ ಇದ್ದಾರೆ ಎಂದರೆ ತಪ್ಪಾಗಲಾರದು. ಸದ್ಯ ಅವರ ಮಕ್ಕಳು ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದರ ಹೊರತಾಗಿ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ವಿವಾಹಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿಚಾರಗಳ ಬಗ್ಗೆ ನೋಡೋಣ. ಸಾವಿರದ ಒಂಬೈನೂರಾ ತೊಂಬತ್ತರಲ್ಲಿ ಸಿನಿಮಾದಲ್ಲಿ ತೊಡಗಿಸಿಕೊಂಡ ನಂತರ ನಾಲ್ಕೈದು ವರ್ಷಗಳ ನಂತರ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಒಂದರ ಹಿಂದೆ ಒಂದರಂತೆ ಅವಕಾಶಗಳು ಕೂಡ ಸಿಗುತ್ತವೆ ಇದೇ ಸಮಯದಲ್ಲಿ ಅವರಿಗೆ ರಾಜಕುಮಾರ್ ಅವರ ಮಗಳು ಪೂರ್ಣಿಮಾ ಅವರ ಪರಿಚಯವಾಗುತ್ತದೆ.

ಆ ಕಾಲದಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ಪ್ರೊಡ್ಯೂಸ್ ಮಾಡುವಂತಹ ಸಿನಿಮಾಗಳಿಗೆ ಪೂರ್ಣಿಮ ರಾಜಕುಮಾರ್ ಅವರು ಸಿನಿಮಾ ಚಿತ್ರೀಕರಣದ ಸ್ಥಳಕ್ಕೆ ಹೋಗುತ್ತಿದ್ದರು ಆ ಸಮಯದಲ್ಲಿ ರಾಮಕುಮಾರ್ ಅವರ ಪರಿಚಯವಾಗುತ್ತದೆ. ರಾಜಕುಮಾರ್ ಅವರ ಕುಟುಂಬಕ್ಕೂ ರಾಮ್ ಕುಮಾರ್ ಅವರ ಕುಟುಂಬದವರ ನಡುವೆ ಒಂದು ಒಳ್ಳೆಯ ಉತ್ತಮ ಬಾಂಧವ್ಯ ಇತ್ತು. ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ನಡುವೆ ಸ್ನೇಹ ಉಂಟಾಗಿ ಅದು ಪ್ರೀತಿಯ ಕಡೆ ತಿರುಗುತ್ತದೆ ಆ ವಿಷಯ ಕುಟುಂಬದವರಿಗೂ ತಿಳಿಯುತ್ತದೆ. ಅನಂತರ ರಾಜಕುಮಾರ್ ಅವರು ರಾಮ್ ಕುಮಾರ್ ಅವರನ್ನು ತಮ್ಮ ಅಳಿಯನನ್ನಾಗಿ ಸ್ವೀಕರಿಸುತ್ತಾರೆ.

ರಾಮ್ ಕುಮಾರ್ ಅವರು ಕೂಡ ರಾಜಕುಮಾರ್ ಅವರ ಕುಟುಂಬದವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ರಾಜಕುಮಾರ್ ಅವರ ಕುಟುಂಬದ ಹೆಸರನ್ನೂ ಎಂದು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಜೊತೆಗೆ ಆ ದೊಡ್ಮನೆ ಹೆಸರಿಗೆ ದಕ್ಕೆ ಉಂಟಾಗುವಂತಹ ಕೆಲಸವನ್ನು ಕೂಡ ಮಾಡುವುದಿಲ್ಲ.

ಪ್ರಚಾರದ ಉದ್ದೇಶಕ್ಕಾಗಿ ಏನೇನೋ ಕೆಲಸಗಳನ್ನು ಮಾಡಲಿಲ್ಲ ರಾಮ್ ಕುಮಾರ್ ಅವರು ಈಗಲೂ ಕೂಡ ಒಬ್ಬ ಸಭ್ಯ ವ್ಯಕ್ತಿಯಾಗಿದ್ದಾರೆ. ರಾಜಕುಮಾರ್ ಅವರ ಮಕ್ಕಳೊಂದಿಗೆ ಕೂಡ ಉತ್ತಮವಾದ ಒಡನಾಟವನ್ನು ಹೊಂದಿದ್ದಾರೆ. ಇವರ ಕುಟುಂಬ ಯಾವಾಗಲೂ ಖುಷಿ ಖುಷಿಯಾಗಿ ಇರಲಿ ಇವರ ಮಕ್ಕಳಿಗೆ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗಲಿ ಎಂದು ನಾವು ದೇವರ ಬಳಿ ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!