ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರತಿಭಾನ್ವಿತ ನಟಿಯರಿದ್ದರೂ ಕೂಡ ಅವರಿಗೆ ಸರಿಯಾದ ಅವಕಾಶ ಸಿಗದೆ ಪರಭಾಷೆಯ ಸಿನಿಮಾಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಅಂತಹ ನಟಿಮಣಿಯರಲ್ಲಿ ಸಂಯುಕ್ತಾ ಹೆಗಡೆ ಅವರು ಕೂಡ ಒಬ್ಬರು. ಹಾಗಾಗಿ ಕನ್ನಡದಲ್ಲಿ ಅವಕಾಶಗಳು ಕಡಿಮೆಯಾಗಿರುವುದರ ಕುರಿತಾಗಿ ಮಾಧ್ಯಮದವರು ಕೇಳಿರುವ ಪ್ರಶ್ನೆಗೆ ಸಂಯುಕ್ತಾ ಹೆಗಡೆಯವರು ಏನು ಹೇಳಿದ್ದಾರೆ ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇವೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಂಯುಕ್ತಾ ಹೆಗಡೆ ಇಂದು ಉದಯೋನ್ಮುಖ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅನೇಕ ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದಿದ್ದವು. ಪರಭಾಷೆಗಳಲ್ಲಿಯೂ ಇವರಿಗೆ ಅವಕಾಶಗಳು ದೊರೆತವು ಪದವಿ ಶಿಕ್ಷಣವನ್ನು ಓದುತ್ತಿರುವಂತಹ ಇವರು ಅನೇಕ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ನಟಿಸಿದ್ದಾರೆ

ಈಗಾಗಲೇ ತಮಿಳಿನಲ್ಲಿ ಇವರ ನಟನೆಯ ಮೂರು ಚಿತ್ರಗಳು ಬಿಡುಗಡೆಗೆ ರೆಡಿಯಾಗಿದೆ. ಜೊತೆಗೆ ಇನ್ನೂ ಕೆಲವು ಚಿತ್ರಗಳ ಚಿತ್ರೀಕರಣದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.ಇದರ ನಡುವೆ ತಂದೆತಾಯಿಗಳಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ನೋಡಿಕೊಳ್ಳುವುದಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು ಕುಟುಂಬದವರು ಮೊದಲು ನಂತರ ಉಳಿದ ಕೆಲಸ ಎಂದು ಹೇಳುತ್ತಾರೆ.

ಇವರು ಬೇರೆ ಭಾಷೆಯ ಚಿತ್ರಗಳ ಕಡೆ ಮುಖ ಮಾಡಿರುವುದಕ್ಕೆ ಮುಖ್ಯಕಾರಣ ಕನ್ನಡದಲ್ಲಿ ಇವರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಅವರಿಗೂ ಕೂಡ ಮಾತೃಭಾಷೆಯಲ್ಲಿ ನಟನೆ ಮಾಡುವುದಕ್ಕೆ ತುಂಬಾ ಆಸೆ ಇದೆ. ಆದರೆ ಕನ್ನಡದಲ್ಲಿ ಸರಿಯಾದ ಅವಕಾಶ ಇವರಿಗೆ ದೊರೆಯುತ್ತಿಲ್ಲ. ಇವರು ಹೇಳುವ ಪ್ರಕಾರ ಕನ್ನಡದ ನಿರ್ಮಾಪಕರು ಕನ್ನಡದ ನಟಿಯರನ್ನ ಹಾಕಿಕೊಂಡು ಸಿನಿಮಾವನ್ನು ಮಾಡಬೇಕು. ನಮಗೆ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶವನ್ನು ನೀಡುವವರು ಅವರು. ನಿರ್ಮಾಪಕರು ಕನ್ನಡದವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಮಾತ್ರ ನಮಗೆ ಅವಕಾಶಗಳು ಸಿಗುತ್ತವೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಸಂಯುಕ್ತ ಹೆಗಡೆ ಯವರು ಶ್ರೇಯಸ್ ನಟನೆಯ ರಾಣಾ ಚಿತ್ರದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕುವುದರ ಮೂಲಕವಾಗಿ ಬಹಳ ಸಮಯದ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಯುಕ್ತಾ ಹೆಗಡೆಯವರಂತೆ ಕನ್ನಡದಲ್ಲಿರುವ ಅನೇಕ ಪ್ರತಿಭಾನ್ವಿತ ನಟ-ನಟಿಯರಿಗೆ ಮುಂದಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗಲಿ ಅವರು ಚಿತ್ರ ರಂಗದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲಿ ಎಂದು ನಾವು ನೀವು ಆಶಿಸೋಣ.

Leave a Reply

Your email address will not be published. Required fields are marked *