ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಯಾವುದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಂಡವನಿಗೆ ರೋಗ ಬರುವುದು ಕಡಿಮೆ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ನಾವು ಸೇವಿಸುವ ಬೇಳೆಕಾಳುಗಳಲ್ಲಿ ಕೆಲವು ಔಷಧೀಯ ಗುಣಗಳಿವೆ. ಹುರುಳಿಕಾಳು ಒಂದು ಪ್ರಮುಖ ಆಹಾರ ಧಾನ್ಯವಾಗಿದೆ ಅದರ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಹುರುಳಿಕಾಳಿಗೆ ಇಂಗ್ಲಿಷ್ ನಲ್ಲಿ ಹಾರ್ಸ್ ಗ್ರಾಮ್ ಎಂದು ಕರೆಯುತ್ತಾರೆ. ಮೊದಲಿನ ಕಾಲದಲ್ಲಿ ಹುರುಳಿ ಕಾಳುಗಳನ್ನು ಎಮ್ಮೆ, ಹಸುಗಳಿಗೆ ಮೇವಾಗಿ ಹಾಕುತ್ತಿದ್ದರು. ಹಾರ್ಸ್ ಗ್ರಾಮ್ ಎಂಬ ಹೆಸರು ಬರಲು ಕಾರಣ ಹುರುಳಿ ಕಾಳು ಆಗಿನ ಕಾಲದಲ್ಲಿ ಕುದುರೆಗೆ ಕೊಡುವ ಆಹಾರಧಾನ್ಯವಾಗಿತ್ತು. ಇದೊಂದು ಉಷ್ಣತೆಯ ಆಹಾರವಾಗಿದ್ದು ದೇಹಕ್ಕೆ ಉಷ್ಣಾಂಶ ಕೊಡುತ್ತದೆ, ಶಕ್ತಿ ಕೊಡುತ್ತದೆ ಹಾಗೂ ವಾರ್ಮಅಪ್ ಮಾಡುತ್ತದೆ. ಹುರುಳಿ ಕಾಳನ್ನು ತಿನ್ನುವವರು ಕುದುರೆಯಂತಹ ಶಕ್ತಿಯನ್ನು ಹೊಂದುತ್ತಾರೆ ಎಂದು ಹೇಳುತ್ತಾರೆ. ಹುರುಳಿ ಕಾಳು ತಿನ್ನುವುದರಿಂದ ಶಕ್ತಿ, ಉತ್ಸಾಹ ಬರುತ್ತದೆ. ಶೀತ ಪ್ರಕೃತಿ ಇರುವವರು ಹುರುಳಿ ಕಾಳನ್ನು ಹೆಚ್ಚು ಸೇವಿಸುವುದು ಒಳ್ಳೆಯದು. ಬಿಪಿ, ಶುಗರ್ ಇರುವವರು ಹುರುಳಿ ಕಾಳುಗಳನ್ನು ಸೇವಿಸಬೇಕು.
ಹುರುಳಿ ಕಾಳುಗಳನ್ನು ಚಳಿಗಾಲದಲ್ಲಿ ಹುರಿದು ಅದಕ್ಕೆ ಸ್ವಲ್ಪ ಉಪ್ಪು, ಖಾರ ಸೇರಿಸಿ ಆಗಾಗ ಸೇವಿಸಬೇಕು ಇದರಿಂದ ಚಳಿಯಿಂದ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ ಅಲ್ಲದೆ ಕಫ ಶಮನವಾಗುತ್ತದೆ ನೆಗಡಿ, ಜ್ವರ ಆಗುವುದಿಲ್ಲ. ಕೆಲವರು ಬೆಚ್ಚಗೆ ಮಾಡಿಕೊಳ್ಳಲು ಕಾಫಿ, ಟೀ ಕುಡಿಯುತ್ತಾರೆ, ಇನ್ನೂ ಕೆಲವರು ಬೀಡಿ, ಸಿಗರೇಟ್ ಸೇದುತ್ತಾರೆ ಹೀಗೆ ಮಾಡುವ ಬದಲು ಹುರುಳಿ ಕಾಳುಗಳನ್ನು ಸೇವಿಸುವುದು ಒಳ್ಳೆಯದು. ಹುರುಳಿ ಕಾಳುಗಳನ್ನು ಸೇವಿಸುವುದರಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ, ಹುರುಳಿ ಕಾಳುಗಳಲ್ಲಿ ಕ್ಯಾಲ್ಶಿಯಂ, ಐರನ್, ಮಿನರಲ್ಸ್ ಹೇರಳವಾಗಿದೆ. ಹುರುಳಿ ಕಾಳನ್ನು ಸಾಂಬಾರ್, ಪಲ್ಯ, ಕೋಸಂಬರಿ ಹೀಗೆ ಅಡುಗೆಯಲ್ಲಿ ಬಳಸಿ ಅಥವಾ ಮೊಳಕೆ ತರಿಸಿ ಸೇವಿಸಬಹುದು. ಹುರುಳಿ ಕಾಳುಗಳನ್ನು ಮೊಳಕೆ ತರಿಸಿ ಡ್ರೈ ಮಾಡಿ ಹುರಿದು ಪುಡಿ ಮಾಡಿ ಅದಕ್ಕೆ ಬೆಲ್ಲ ಹಾಕಿ ಉಂಡೆ ಮಾಡಿ ಸೇವಿಸಬಹುದು, ಈ ಉಂಡೆಗಳು ರುಚಿಕರವಾಗಿರುತ್ತದೆ. ಮಕ್ಕಳಿಗೆ ಈ ಉಂಡೆಯನ್ನು ಕೊಡಬಹುದು ಅವರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ನೆಗಡಿ, ಶೀತ ಕಂಡುಬರುತ್ತದೆ. ಹುರುಳಿ ಕಾಳು ಸೇವಿಸುವುದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು.
ವಯಸ್ಸಾದವರಲ್ಲಿ ಮಂಡಿ ನೋವು, ಕಾಲು ನೋವು ಕಾಣಿಸುತ್ತದೆ ಅವರು ಹುರುಳಿ ಕಾಳು ಅಥವಾ ಹುರುಳಿ ಕಾಳಿನ ಖಾದ್ಯ ಸೇವಿಸುವುದರಿಂದ ನೋವು ನಿವಾರಣೆಯಾಗುತ್ತದೆ. ಹುರುಳಿ ಕಾಳುಗಳನ್ನು ಸೂಪರ್ ಫುಡ್ ವರ್ಗಕ್ಕೆ ಸೇರಿಸಲಾಗಿದೆ. ಮೊದಲು ಹುರುಳಿಯನ್ನು ಬಡವರು ಗ್ರಾಮೀಣ ಭಾಗದಲ್ಲಿ ಬೆಳೆಯುತ್ತಿದ್ದರು ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು ಈಗ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಹುರುಳಿ ಕಾಳು ಪ್ರಮುಖ ಸ್ಥಾನ ಪಡೆದಿದೆ. ಶ್ವಾಸಕೋಶ ಸಮಸ್ಯೆಯನ್ನು ಹುರುಳಿ ಕಾಳು ನಿವಾರಿಸುತ್ತದೆ. ಅಜೀರ್ಣ, ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಹುರುಳಿ ಕಾಳನ್ನು ಸೇವಿಸುವುದರಿಂದ ನಿವಾರಣೆಯಾಗುತ್ತದೆ. ತೂಕ ಹೆಚ್ಚಾದರೆ ಹುರುಳಿ ಕಾಳಿನ ಪುಡಿಗೆ ಜೀರಿಗೆಯನ್ನು ಹಾಕಿ ಒಂದು ಲೋಟ ನೀರಿಗೆ ಬೆರೆಸಿ ಬೆಳಗ್ಗೆ ಸಂಜೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗೆ ಹುರುಳಿ ಕಾಳು ರಾಮಬಾಣವಾಗಿದೆ. ಹುರುಳಿ ಕಾಳಿನ ಸೇವನೆಯಿಂದ ರಕ್ತನಾಳಗಳು ಶುದ್ಧಿಯಾಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಒಟ್ಟಿನಲ್ಲಿ ಹುರುಳಿ ಕಾಳು ನಮ್ಮ ದಿನನಿತ್ಯದ ಆಹಾರದಲ್ಲಿ ಇರಬೇಕು. ಈ ಮಾಹಿತಿ ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿಸಿ.