ಭಾರತದಲ್ಲಿ ಟ್ರೈನ್ ನ ಉದ್ದ 650 ಮೀ ಗಿಂತ ಜಾಸ್ತಿ ಇರೋದಿಲ್ಲ ಯಾಕೆ? ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವು

0 6

ಸಾಮಾನ್ಯವಾಗಿ ಟ್ರೇನ್ ನೋಡಿದರೆ ಟ್ರೇನ್ ನಲ್ಲಿ ಒಮ್ಮೆ ಪ್ರಯಾಣ ಮಾಡಬೇಕು ಎಂದು ಅನಿಸುವುದು ಸಹಜ. ಇಂಟರೆಸ್ಟಿಂಗ್ ಆಗಿರುವ ಟ್ರೇನ್ ಹಲವು ಅಚ್ಚರಿ ವಿಷಯಗಳನ್ನು ಹೊಂದಿದೆ. ಭಾರತದ ರೇಲ್ವೆ ವ್ಯವಸ್ಥೆಯಲ್ಲಿ ಟ್ರ್ಯಾಕ್ ಗಳ ಮಧ್ಯೆ ಸಿಮೆಂಟ್ ಸ್ಲೀಪರ್ಸ್ ಯಾಕಿರುತ್ತದೆ, ರೇಲ್ವೆ ಹಳಿಗಳ ಪಕ್ಕದಲ್ಲಿ ವೈಟ್ ಕಲರ್ ಬ್ರಿಕ್ಸ್ ಏಕಿರುತ್ತದೆ, ಹಳಿಗಳ ಮೇಲಿರುವ ವಾರ್ನಿಂಗ್ ಸಿಸ್ಟಮ್ ರೇಲ್ವೆ ಅಪಘಾತವನ್ನು ಹೇಗೆ ತಡೆಯುತ್ತದೆ ಹಾಗೂ ಭಾರತದಲ್ಲಿರುವ ಯಾವುದೇ ಟ್ರೇನ್ 650 ಮೀಟರ್ ಗಿಂತ ಹೆಚ್ಚು ಉದ್ದವಾಗಿರುವುದಿಲ್ಲ ಇದಕ್ಕೆ ಕಾರಣವೇನು?. ಈ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ನಮ್ಮ ಭಾರತೀಯ ರೇಲ್ವೆ ವ್ಯವಸ್ಥೆ ಸರಳವಾಗಿಲ್ಲ ಬಹಳ ಅಡ್ವಾನ್ಸ್ ಆಗಿದೆ. ಐರನ್ ನಿಂದ ತಯಾರಿಸಿದ ಟ್ರ್ಯಾಕ್ ಅನ್ನು ರೇಲ್ವೇ ಟ್ರ್ಯಾಕ್ ಎಂದು ಕರೆಯುತ್ತಾರೆ. ಟ್ರ್ಯಾಕ್ ಅನ್ನು ಕೆಳಗಡೆ ಇಟ್ಟರೆ ರೇಲ್ವೆಯ ತೂಕಕ್ಕೆ ಅವು ಕುಸಿದುಹೋಗುತ್ತದೆ ಆದ್ದರಿಂದ ಟ್ರ್ಯಾಕ್ ಕೆಳಗೆ ಸ್ಲೀಪರ್ಸ್ ಗಳನ್ನು ಇಡುತ್ತಾರೆ. ಹಿಂದಿನ ದಿನಗಳಲ್ಲಿ ಸ್ಲೀಪರ್ಸ್ ಗಳನ್ನು ಮರದ ದಿಮ್ಮಿಗಳಿಂದ ಮಾಡುತ್ತಿದ್ದರು ಆದರೆ ಮಳೆಗಾಲದಲ್ಲಿ ದಿಮ್ಮಿಗಳು ನೀರಿನಲ್ಲಿ ನೆನೆಯುತ್ತಿದ್ದವು ಆದ್ದರಿಂದ ನಂತರ ಸಿಮೆಂಟ್ ನಿಂದ ಸ್ಲೀಪರ್ಸ್ ಗಳನ್ನು ತಯಾರಿಸಿದರು. ಟ್ರ್ಯಾಕ್ ನ ಸೈಡಿಗೆ ಜಲ್ಲಿಕಲ್ಲುಗಳನ್ನು ಹಾಕಿರುತ್ತಾರೆ ಇದನ್ನು ಬಲಾಸ್ಟ್ ಎಂದು ಕರೆಯುತ್ತಾರೆ. ಇದರಿಂದ ಸ್ಲೀಪರ್ಸ್ ಆಕಡೆ ಈಕಡೆ ಜರಿಯದಂತೆ ಮಾಡುತ್ತವೆ, ಮಳೆಗಾಲದಲ್ಲಿ ಕುಸಿಯುವುದಿಲ್ಲ ಮತ್ತು ಇದು ಹುಲ್ಲು, ಬೇರೆ ಗಿಡಗಳು ಬೆಳೆಯದಂತೆ ತಡೆಯುತ್ತದೆ. ಟ್ರೇನನ್ನು 200 ಕಿಲೋಮೀಟರ್ ಗಿಂತ ಹೆಚ್ಚು ವೇಗವಾಗಿ ಓಡಿಸಬಾರದು ಓಡಿಸಿದರೆ ಟ್ರೇನ್ ನ ಪ್ರೆಷರ್ ನಿಂದ ಜಲ್ಲಿ ಕಲ್ಲುಗಳು ಜರಿದು ಹೋಗುತ್ತವೆ ಇದರಿಂದ ಟ್ರೇನ್ ಹಳಿ ತಪ್ಪುವ ಸಾಧ್ಯತೆಗಳಿವೆ. ಇದನ್ನು ತಪ್ಪಿಸಲು ಕಾಂಕ್ರೀಟ್ ಬಲಾಸ್ಟ್ ಗಳನ್ನು ತಯಾರಿಸಲಾಗುತ್ತದೆ.

ಟ್ರೇನ್ ಹಳಿ ಸೈಡಿನಲ್ಲಿ ರಾಡ್ ಗಳನ್ನು ಅಳವಡಿಸಿರುತ್ತಾರೆ ಏಕೆಂದರೆ ಟ್ರೇನ್ ಫಾಸ್ಟ್ ಹೋಗುತ್ತಿರುವಾಗ ಟ್ರ್ಯಾಕ್ ತಪ್ಪಿದಾಗ ಟ್ರೇನ್ ಬಿದ್ದು ಹೋಗುತ್ತದೆ ಆಗ ಮುಂದೆ ಹೋಗದಂತೆ ಈ ರೀತಿಯ ರಾಡ್ ಗಳನ್ನು ಅಳವಡಿಸಿರುತ್ತಾರೆ. ರೇಲ್ವೆ ತುಂಡುಗಳನ್ನು ಥರ್ಮಲ್ ವೆಲ್ಡಿಂಗ್ ಇಂದ ಜೋಡಣೆ ಮಾಡುತ್ತಾರೆ. ಇದರಿಂದ ಟ್ರ್ಯಾಕ್ ಸ್ಮೂತ್ ಆಗಿರುತ್ತದೆ. ಎಲ್ಲಾ ಕಡೆ ವೆಲ್ಡಿಂಗ್ ಮಾಡಿರುವುದಿಲ್ಲ ಅಲ್ಲಲ್ಲಿ ಗ್ಯಾಪ್ ಬಿಟ್ಟಿರುತ್ತಾರೆ. ಕಬ್ಬಿಣ ಬೇಸಿಗೆಯಲ್ಲಿ ಹಿಗ್ಗುತ್ತದೆ, ತಣ್ಣಗಿನ ವಾತಾವರಣದಲ್ಲಿ ಕುಗ್ಗುತ್ತದೆ ಇದರಿಂದ ಬೇಸಿಗೆಯಲ್ಲಿ ಗ್ಯಾಪ್ ತುಂಬಿಕೊಳ್ಳುತ್ತದೆ ಮತ್ತು ಚಳಿಗಾಲದಲ್ಲಿ ಗ್ಯಾಪ್ ಕಾಣಿಸುತ್ತದೆ. ಗ್ಯಾಪ್ ಕೊಡದೆ ಇದ್ದರೆ ಟ್ರ್ಯಾಕ್ ಉಬ್ಬಿಕೊಳ್ಳುತ್ತದೆ ಇದರಿಂದ ರೈಲು ಹಳಿ ತಪ್ಪುತ್ತದೆ. ಗ್ಯಾಪ್ ಕೊಟ್ಟಲ್ಲಿ ಫಿಶ್ ಪ್ಲೇಟನ್ನು ಅಟ್ಯಾಚ್ ಮಾಡಿರುತ್ತಾರೆ. ಹಳಿಗಳ ಮೇಲೆ ಟ್ರೇನ್ ಪ್ರೋಟೆಕ್ಷನ್ ವಾರ್ನಿಂಗ್ ಸಿಸ್ಟಮ್ ಅನ್ನು ಅಳವಡಿಸಿರುತ್ತಾರೆ, ಇದನ್ನು ಸಿಗ್ನಲ್ ಗಿಂತ ಮುಂಚೆ ಅಳವಡಿಸಿರುತ್ತಾರೆ. ಇದರಿಂದ ಟ್ರೇನ್ ಸಿಗ್ನಲ್ ವರೆಗೆ ಹೋಗುವ ಮೊದಲು ಟ್ರೇನ್ ಸ್ಪೀಡ್ ಅನ್ನು ಕಡಿಮೆ ಮಾಡುತ್ತದೆ.

ರೇಲ್ವೆ ಟ್ರ್ಯಾಕ್ ಪಕ್ಕದಲ್ಲಿ ಬಿಳಿ ಕಲ್ಲಿನ ಮೇಲೆ ನಂಬರ್ ಗಳನ್ನು ಬರೆದಿರುತ್ತಾರೆ. ಟ್ರೇನ್ ಹೋಗುತ್ತಿರುವಾಗ ಹಳಿಯ ಮಧ್ಯದಲ್ಲಿ ಎಲ್ಲಾದರೂ ಸಮಸ್ಯೆ ಇದೆ ಎಂದು ಡ್ರೈವರ್ ಗೆ ಅನಿಸಿದಾಗ, ಆ ಸ್ಥಳ ಯಾವುದೆಂದು ಗೊತ್ತಿರುವುದಿಲ್ಲ. ಇದರಿಂದ ಕಲ್ಲಿನ ಮೇಲಿರುವ ನಂಬರನ್ನು ನೋಟ್ ಮಾಡಿಕೊಂಡು ಸ್ಟೇಷನ್ ಗೆ ಕೊಟ್ಟರೆ ಆಗ ಸಿಬ್ಬಂದಿಯವರು ಅದೆ ಸ್ಥಳಕ್ಕೆ ಹೋಗಿ ಚೆಕ್ ಮಾಡಿ ಸಮಸ್ಯೆಯನ್ನು ಸರಿ ಮಾಡುತ್ತಾರೆ. ಟ್ರೇನ್ ಒಂದು ಸ್ಟೇಷನ್ ಇಂದ ಇನ್ನೊಂದು ಸ್ಟೇಷನ್ ಗೆ ಮೈಂಡ್ ಲೈನ್ ನಲ್ಲಿ ಹೋಗುತ್ತದೆ. ಮೈಂಡ್ ಸ್ಟೇಷನ್ ನಿಂದ ಇನ್ನೊಂದು ಸ್ಟೇಷನ್ ಒಳಗಡೆ ಬರುವಾಗ ಮೈಂಡಲೈನ್ ನಿಂದ ಡಿವೈಡ್ ಆಗಿರುವ ಲೂಪ್ ಲೈನ್ ನಿಂದ ಸ್ಟೇಷನ್ ಒಳಗೆ ಬರುತ್ತಾರೆ. ಲೂಪ್ ಲೈನ್ ಒಂದೊಂದು ಪ್ಲಾಟ್ ಫಾರಂಗೆ ಕನೆಕ್ಟ್ ಆಗಿರುತ್ತದೆ. ಮೈಂಡ್ ಲೈನ್ ನಿಂದ ಲೂಪ್ ಲೈನ್ ಗೆ ಕನೆಕ್ಟ್ ಆಗುವ ಜಾಗವನ್ನು ಸ್ಟೇಷನ್ ಸೆಕ್ಷನ್ ಎಂದು ಕರೆಯುತ್ತಾರೆ, ಇದರ ಜವಾಬ್ದಾರಿ ಸ್ಟೇಷನ್ ಮಾಸ್ಟರ್ ದು. ಇದರ ಆಚೆ ಟ್ರೇನ್ ಮೈಂಡ್ ಲೈನ್ ಗೆ ಹೋದರೆ ಅದನ್ನು ಬ್ಲಾಕ್ ಸೆಕ್ಷನ್ ಎಂದು ಕರೆಯುತ್ತಾರೆ. ಇದು ಸ್ಟೇಷನ್ ಮಾಸ್ಟರ್ ಗೆ ಗೊತ್ತಿರುವುದಿಲ್ಲ ಕಂಟ್ರೋಲರ್ ಗೆ ಮಾತ್ರ ಗೊತ್ತಿರುತ್ತದೆ. ಲೂಪ್ ಲೈನ್ ಹತ್ತಿರ ಸಮಸ್ಯೆ ಇರುತ್ತದೆ. ಮೈಂಡ್ ಲೈನ್ ನಿಂದ ಯಾವುದಾದರೂ ಟ್ರೇನ್ ಸ್ಟೇಷನ್ ಗೆ ಬರಬೇಕಾದರೆ ಲೂಪ್ ಲೈನ್ ಗೆ ಹೋಗಬೇಕಾಗುತ್ತದೆ. ಒಂದು ವೇಳೆ ಡ್ರೈವರ್ ಲೂಪ್ ಲೈನ್ ಗೆ ಹೋಗಿ ಪೂರ್ತಿ ಒಳಗಡೆ ಹೋಗದೆ ಟ್ರೇನ್ ನಿಲ್ಲಿಸಿದರೆ ಟ್ರೇನ್ ಉದ್ದವಾಗಿರುವುದರಿಂದ ಅದರ ಬೋಗಿಗಳು ಮೈಂಡ್ ಲೈನ್ ನಲ್ಲಿ ಇರುತ್ತದೆ. ಆಗ ಬೇರೆ ಟ್ರೇನ್ ಮೈಂಡ್ ಲೈನ್ ನಲ್ಲಿ ಬಂದರೆ ಈ ಟ್ರೇನ್ ನ ಬೋಗಿಗಳಿಗೆ ಡಿಕ್ಕಿ ಹೊಡೆಯುತ್ತದೆ ಹಾಗಾಗಬಾರದು ಎಂದರೆ ಟ್ರೇನ್ ಪೂರ್ತಿ ಲೂಪ್ ಲೈನ್ ಒಳಗೆ ಹೋಗಬೇಕು. ಟ್ರೇನ್ ಪೂರ್ತಿ ಒಳಗೆ ಹೋಗಿದೆಯಾ, ಇಲ್ಲವಾ ಎಂದು ತಿಳಿದುಕೊಳ್ಳಬೇಕಾದರೆ ಟ್ರೇನ್ ಗಾರ್ಡ್ ಎಫ್ಎಂ ಅನ್ನು ನೋಡುತ್ತಾನೆ. ಎಫ್ಎಂ ಎಂದರೆ ಪೋಲಿಂಗ್ ಮಾರ್ಕ್. ಬೋಗಿಗಳು ಎಫ್ಎಂ ಮುಂದೆ ಇದ್ದರೆ ಆ ಟ್ರೇನ್ ಲೂಪ್ ಲೈನ್ ಒಳಗಡೆ ಹೋಗಿದೆ ಎಂದು ಅರ್ಥ.

ನಮ್ಮ ದೇಶದಲ್ಲಿ ಹೆಚ್ಚು ಜನಸಂಖ್ಯೆ ಇದೆ. ಕೆಲವೊಮ್ಮೆ ಟ್ರೇನ್ ಗೆ ಜನರು ನೇತಾಡಿಕೊಂಡು ಹೋಗುತ್ತಿರುತ್ತಾರೆ. ಆದರೂ ಟ್ರೇನ್ ಉದ್ದವನ್ನು ಹೆಚ್ಚು ಮಾಡುವುದಿಲ್ಲ ಇದಕ್ಕೆ ಕಾರಣವೆಂದರೆ ಟ್ರೇನ್ ನ ಉದ್ದ ಲೂಪ್ ಲೈನ್ ಆಧಾರದ ಮೇಲೆ ಇರುತ್ತದೆ. ಭಾರತದಲ್ಲಿರುವ ಲೂಪ್ ಲೈನ್ ಉದ್ದ 650 ಮೀಟರ್. ಅದರಿಂದ ಯಾವುದೇ ಟ್ರೇನ್ 650 ಮೀಟರ್ ಗಿಂತ ಉದ್ದ ಇರುವುದಿಲ್ಲ. ರೇಲ್ವೆ ಪ್ಲಾಟ್ ಫಾರಂ ಮೇಲೆ ಒಂದು ರೀತಿಯ ಬಂಪ್ ಗಳನ್ನು ಅಳವಡಿಸಿರುತ್ತಾರೆ. ಇದು ರೆಡ್ ಮತ್ತು ಯೆಲ್ಲೊ ಕಲರ್ ನಲ್ಲಿ ಇರುತ್ತದೆ. ಈ ರೀತಿ ಅಂಗವಿಕಲರಿಗೋಸ್ಕರ ಮಾಡಿರುತ್ತಾರೆ, ಈ ರೀತಿಯ ಬಂಪ್ ಟೈಲ್ಸ್ ಇರುವ ಎದುರಿಗೆ ಅಂಗವಿಕಲರಿಗೆ ಸೀಮಿತವಾದ ಬೋಗಿಗಳು ಬರುತ್ತವೆ.‌ ಇದರಿಂದ ಅಂಗವಿಕಲರಿಗೆ ತಮ್ಮ ಬೋಗಿಯಲ್ಲಿ ಕುಳಿತು ಕೊಳ್ಳಲು ಸಹಾಯವಾಗುತ್ತದೆ. ಟ್ರೇನ್ ಟ್ರ್ಯಾಕ್ ಚೇಂಜ್ ಮಾಡುವಾಗ ಒಂದು ಪಾಯಿಂಟ್ ಮಿಷನ್ ನಿಂದ ಚೇಂಜ್ ಮಾಡುತ್ತದೆ. ಆ ಪಾಯಿಂಟ್ ಟ್ರ್ಯಾಕ್ ಅನ್ನು ಆಕಡೆ ಈಕಡೆ ಬದಲಾಯಿಸುತ್ತದೆ. ಟ್ರ್ಯಾಕ್ ಹೋದಂತೆ ಅದರ ಮೇಲೆ ಟ್ರೇನ್ ಹೋಗುತ್ತದೆ ಟ್ರೇನ್ ಗೆ ಸ್ಟೇರಿಂಗ್ ಇರುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಟ್ರೇನ್ ಬಗ್ಗೆ ತಿಳಿದುಕೊಳ್ಳಿ.

Leave A Reply

Your email address will not be published.