ಇದ್ದಕಿದ್ದಂತೆ ಲೈವ್ ಬಂದ ಕುರಿ ಪ್ರತಾಪ್ ಏನ್ ಅಂದ್ರು ನೋಡಿ

0 1

ಕನ್ನಡ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಅನೇಕ ಹಾಸ್ಯನಟರು ತಮ್ಮದೆ ಆದ ವಿಭಿನ್ನ ರೀತಿಯಲ್ಲಿ ಜನರನ್ನು ನಕ್ಕು ನಗಿಸಿದ್ದಾರೆ. ಅವರಲ್ಲಿ ಪ್ರಮುಖರಾದವರು ಕನ್ನಡ ಕಿರುತೆರೆಯ ಕಾಮಿಡಿ ಶೋ ಮಜಾ ಟಾಕೀಸ್ ನ ಕುರಿ ಪ್ರತಾಪ್. ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಸುಳ್ಳು ಸುದ್ದಿಯನ್ನು ಹರಡಿಸಿದ್ದಾರೆ. ಕುರಿ ಪ್ರತಾಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ನಿಜಾಂಶದ ಬಗ್ಗೆ ಹೇಳಿದ್ದಾರೆ. ಕುರಿ ಪ್ರತಾಪ್ ಅವರು ತಮ್ಮ ವಿಡಿಯೋದಲ್ಲಿ ಏನು ಮಾತನಾಡಿದರು ಎಂದು ಈ ಲೇಖನದಲ್ಲಿ ನೋಡೋಣ.

ಮಜಾ ಟಾಕೀಸ್ ನಿಂದ ಫೇಮಸ್ಸಾದ ಕುರಿ ಪ್ರತಾಪ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕುರಿ ಪ್ರತಾಪ್ ಅವರಿಗೆ ಸೀರಿಯಸ್ ಬದುಕುವುದಿಲ್ಲ ಎಂಬ ಸುಳ್ಳು ಸುದ್ದಿ ಹರಡಿಸಿದ್ದಾರೆ. ಅದಕ್ಕಾಗಿ ಕುರಿ ಪ್ರತಾಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಸುಳ್ಳು ವಿಚಾರಗಳು ವಿನಿಮಯವಾಗುತ್ತಿದೆ ಎಂದು ಕೆಲವರು ಫೋನ್ ಮಾಡಿದರು. ನ್ಯೂಸ್ ಚಾನಲ್ ಅವರು ಫೋನ್ ಮಾಡಿ ಆರಮಾಗಿದ್ದೀರಾ ಎಂದು ಕೇಳಿದರು, ಸೃಜನ್ ಲೋಕೇಶ್ ಅವರು ಗಾಬರಿಯಿಂದ ಕೇಳಿದರು, ಫೋನ್ ಕಾಲ್ ಗಳಿಗೆ ಉತ್ತರ ನೀಡಿ ಸಾಕಾಗಿ ಹೋಯಿತು, ಹಾಗಾಗಿ ವಿಡಿಯೋ ಮಾಡಿ ಹಾಕುತ್ತಿದ್ದೇನೆ. ನಾನು ಆರೋಗ್ಯವಾಗಿದ್ದೇನೆ ಆರಾಮಾಗಿ ಮನೆಯಲ್ಲಿ ಇದ್ದೇನೆ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಈ ರೀತಿ ಸುಳ್ಳು ಸುದ್ದಿಯನ್ನು ಯಾರು ಹಬ್ಬಿಸುತ್ತಾರೆ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಸುಳ್ಳು ಸುದ್ದಿಯನ್ನು ನಾನು ನೋಡಿಲ್ಲ, ಬದುಕಿದ್ದರೂ ಸತ್ತಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ. ಎಲ್ಲರೂ ಮನೆಯಲ್ಲಿ ಇರಿ ಏನಾದರೂ ಅವಶ್ಯಕ ಕೆಲಸಗಳಿದ್ದರೆ ಮಾತ್ರ ಹೊರಗೆ ಹೋಗಿ.‌ ನೀವು ಮನೆಯಿಂದ ಹೊರಗೆ ಹೋಗುತ್ತೀರಾ ಮನೆಯಲ್ಲಿ ವಯಸ್ಸಾದವರು ಇರುತ್ತಾರೆ, ನಿಮಗೆ ಇಮ್ಯುನಿಟಿ ಪವರ್ ಇರುತ್ತದೆ, ಮನೆಯಲ್ಲಿ ಇರುವವರಿಗೆ ಇಮ್ಯುನಿಟಿ ಪವರ್ ಇಲ್ಲದೆ ಇದ್ದರೆ ಅವರಿಗೆ ಕೊರೋನ ಬರುವ ಸಂಭವವಿರುತ್ತದೆ ಅದಕ್ಕಾಗಿ ಮನೆಯಿಂದ ಹೊರಗೆ ಹೋಗಬೇಡಿ, ಹೋದರೂ ಮಾಸ್ಕ್ ಹಾಕಿಕೊಂಡೆ ಹೋಗಿ, ಸ್ಯಾನಿಟೈಸರ್ ಬಳಸಿ, ಡಿಸ್ಟೆನ್ಸ್ ಮೆಂಟೆನ್ ಮಾಡಿ ಎಂದು ಅವರು ಹೇಳಿದರು.

ನಾನು ಮನೆಯಲ್ಲಿ ಆರಾಮಾಗಿ, ಟಿವಿ ನೋಡಿಕೊಂಡು ಜಾಲಿಯಾಗಿದ್ದೇನೆ, ನೀವು ಸುರಕ್ಷಿತವಾಗಿರಿ ಎಂದು ತಮ್ಮ ವಿಡಿಯೋದಲ್ಲಿ ಕುರಿ ಪ್ರತಾಪ್ ಅವರು ಹೇಳಿಕೊಂಡರು.‌ ಅಲ್ಲದೆ ಅವರು ತಮ್ಮ ವಿಡಿಯೋದಲ್ಲಿ ಮಜಾ ಟಾಕೀಸ್ ಶೂಟಿಂಗ್ ಪ್ರಾರಂಭವಾದಾಗ ನಾನು ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತೇನೆ. ಈಗಾಗಲೇ ಶೂಟಿಂಗ್ ಮಾಡಿರುವ ಹಳೆಯ ಎಪಿಸೋಡ್ ಗಳು ಪ್ರಸಾರವಾಗುತ್ತಿವೆ ನೋಡಿ ಮನರಂಜನೆ ಪಡೆಯಿರಿ. ಎಲ್ಲರೂ ಸುರಕ್ಷಿತವಾಗಿರಿ ಎಂದು ಕುರಿ ಪ್ರತಾಪ್ ಅವರು ತಮ್ಮ ವಿಡಿಯೋದಲ್ಲಿ ಮತ್ತೊಮ್ಮೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಕುರಿ ಪ್ರತಾಪ್ ಅವರು ತಮ್ಮ ಮನೆಯಲ್ಲಿ ಆರಾಮಾಗಿ ಜೀವನ ಕಳೆಯುತ್ತಿದ್ದಾರೆ. ಅವರ ಲೈವ್ ವಿಡಿಯೋದಿಂದ ಅವರ ಅಭಿಮಾನಿಗಳಿಗೆ ಸಂತೋಷ ಖಂಡಿತ ಸಿಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಯಾರೊಬ್ಬರ ಬಗ್ಗೆಯೂ ಕೆಟ್ಟದಾಗಿ ಸುದ್ದಿಗಳನ್ನು ಹಬ್ಬಿಸಬೇಡಿ. ಸರಿಯಾಗಿ ತಿಳಿದುಕೊಳ್ಳದೆ, ಹೇಗೆ ಬೇಕೋ ಹಾಗೆ ಮನಸ್ಸಿಗೆ ಬಂದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸುವುದು ಸರಿಯಲ್ಲ.‌ ಕುರಿ ಪ್ರತಾಪ್ ಅವರಂತೆ ನಟ ದೊಡ್ಡಣ್ಣ ಅವರ ಬಗ್ಗೆಯೂ ಕೆಟ್ಟ ಸುದ್ದಿಗಳನ್ನು ಹಬ್ಬಿಸಿದ್ದರು ಈ ರೀತಿ ಮಾಡುವುದು ತಪ್ಪಾಗುತ್ತದೆ, ಯಾರು ಈ ರೀತಿ ಮಾಡಬೇಡಿ ಎಂದು ಈ ಮೂಲಕ ತಿಳಿಸೋಣ.

Leave A Reply

Your email address will not be published.