ನಾವು ಪ್ರತೀ ನಿತ್ಯ ಬಳಸುವ ತರಕಾರಿಗಳಲ್ಲಿ ಈರುಳ್ಳಿ ಕೂಡಾ ಒಂದು. ಕೆಲವೊಂದು ಪ್ರಾಂತ್ಯಗಳಲ್ಲಿ ಇದಕ್ಕೆ ಉಳ್ಳಾಗಡ್ಡೆ ಎಂದು ಕರೆಯುವ ಈರುಳ್ಳಿ ಇಲ್ಲಾ ಅಂದರೆ ಸೀಮೆಯ ಜನರಿಗೆ ಹಾಗೂ ಇನ್ನೂ ಇತರೆ ಪ್ರದೇಶಗಳ ಜನರಿಗೆ ಈ ಈರುಳ್ಳಿ ಇಲ್ಲದೆ ದಿನವೇ ಕಳೆಯುವುದಿಲ್ಲ ಹಾಗೂ ಅಡುಗೆ ಮಾಡಿದರೂ ಮಾಡಿದ ಹಾಗೆ ಆಗುವುದಿಲ್ಲ. ನಾವು ಈರುಳ್ಳಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳು ನಮ್ಮ ದೇಹಕ್ಕೆ ಇದೆ. ಆಂಗ್ಲ ಭಾಷೆಯಲ್ಲಿ ಆನಿಯನ್ ಎಂದು ಕರೆಯಲ್ಪಡುವ ಈರುಳ್ಳಿಯ ಗುಣ ಧರ್ಮಗಳು ಸಾಕಷ್ಟು ಇವೆ ಅವುಗಳನ್ನು ನಾವು ಈ ಲೇಖನದಲ್ಲಿ ನೋಡೋಣ.
ಆದರೆ ಆಧ್ಯಾತ್ಮ ಸಾಧಕರು ಈರುಳ್ಳಿಯನ್ನು ತಿನ್ನಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಕಾಮೋತ್ತೇಜಕ. ಇದು ದೇಹದಲ್ಲಿ ಕಾ’ಮ ಉತ್ತೇಜಿಸುತ್ತದೆ. ಆಧ್ಯಾತ್ಮ ಸಾಧನೆಗೆ ತೊಂದರೆ ಆಗಬಾರದು ಎಂದು ಈರುಳ್ಳಿಯನ್ನು ತಿನ್ನುವುದಿಲ್ಲ. ಆದರೆ ಸಂಸಾರಸ್ಥರು ಈರುಳ್ಳಿಯ ಬಳಕೆ ಮಾಡಿದರೆ ಯಾವುದೇ ತೊಂದರೆ ಇಲ್ಲ. ಬ್ರಹ್ಮಚರ್ಯ ಪಾಲನೆ ಮಾಡುವವರು ಭಗವಂತನಲ್ಲಿ ಲೀನ ಆಗಬೇಕು ಎನ್ನುವಂತವರು ಈರುಳ್ಳಿಯ ಬಳಕೆ ಕಡಿಮೆ ಮಾಡುವುದು ಒಳಿತು. ಆದರೆ ನಿಜಕ್ಕೂ ಈರುಳ್ಳಿಯ ಪ್ರಯೋಜನ ಬಹಳ ಇದೆ. ಇದನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ತೂಕ ಕಡಿಮೆ ಆಗುತ್ತದೆ. ಈರುಳ್ಳಿ ಜೀರ್ಣಕಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ತಲೆಯಲ್ಲಿರುವ ಕ್ರಿಮಿ ಕೀಟಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಬಳಸಲಾಗುತ್ತದೆ. ತಲೆಯಲ್ಲಿ ಇರುವ ಹೊಟ್ಟು ಹೋಗಲಾಡಿಸಲು ಇದು ಒಂದು ಒಳ್ಳೆಯ ಮದ್ದು ಎಂದೇ ಹೇಳಬಹುದು. ಇದರ ರಸವನ್ನು ತಲೆಗೆ ಹಚ್ಚುವುದರಿಂದ ಹೊಟ್ಟು, ಹೇನುಗಳಿಂದ ಮುಕ್ತಿ ಪಡೆಯಬಹುದು.
ಡಯಟ್ ಮತ್ತು ವ್ಯಾಯಾಮ ಮಾಡುವ ವ್ಯಕ್ತಿಗಳಿಗೆ ಅಂತೂ ಈರುಳ್ಳಿ ತೂಕ ಇಳಿಸಿಕೊಳ್ಳುವುದರ ಸಲುವಾಗಿ ಬಹಳ ಪ್ರಯೋಜನಕಾರಿ. ಅದರಲ್ಲೂ ನಾವು ಬಳಸುವ ಸ್ಪ್ರಿಂಗ್ ಆನಿಯನ್ ಇದು ಬಹಳ ಉತ್ತಮ. ಪ್ರತೀ ದಿನ ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನ ಆರೋಗ್ಯವನ್ನು ಸಹ ಹೆಚ್ಚಿಸುತ್ತದೆ. ನಾವು ಪ್ರತೀ ನಿತ್ಯ ಕನಿಷ್ಠ ಮೂರು ನಿಮಿಷವಾದರೂ ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನಲ್ಲಿ ಇರುವ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ. ಇನ್ನು ನಿದ್ರಾ ಹೀನತೆಯಿಂದ ಬಳಲುತ್ತಾ ಇರುವವರು ಪ್ರತೀ ದಿನ ರಾತ್ರಿ ಈರುಳ್ಳಿ ಸೂಪ್ ಮಾಡಿ ಕುಡಿಯುವುದರಿಂದ ಬೇಗ ನಿದ್ರೆ ಬರುತ್ತದೆ ನಿದ್ರಾ ಹೀನತೆ ದೂರವಾಗುತ್ತದೆ.
ಈರುಳ್ಳಿ ಬರೀ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವರ್ಧಕ ಕೂಡಾ ಹೌದು. ಕೂದಲಿನ ಆರೈಕೆಗೆ ಕೂಡಾ ಇದು ಪ್ರಯೋಜನಕಾರಿ. ಇದರಲ್ಲಿ ಎ ಹಾಗೂ ಇ ವಿಟಮಿನ್ ಗಳು ಇರುವುದರಿಂದ ಈರುಳ್ಳಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚುತ್ತಾ ಬಂದರೆ ಕ್ರಮೇಣವಾಗಿ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ನಿಲ್ಲುತ್ತದೆ. ಅಷ್ಟೇ ಅಲ್ಲದೆ ರಕ್ತ ಸಂಚಾರ ಕೂಡಾ ಸುಗಮವಾಗುತ್ತದೆ. ಈರುಳ್ಳಿ ಚರ್ಮಕ್ಕೆ ಕೂಡಾ ಒಳ್ಳೆಯದು. ಮುಖದ ಮೇಲೆ ಪಿಂಪಲ್ಸ್ ಆಗಿದ್ದರೆ ಈರುಳ್ಳಿ ಸಿಪ್ಪೆಯನ್ನು ಸ್ವಲ್ಪ ಜಜ್ಜಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಪಿಂಪಲ್ ಕಡಿಮೆ ಆಗುವುದು. ಒಂದು ವೇಳೆ ಜೇನುಹುಳ ಕಚ್ಚಿದರೆ , ಜೇನುಹುಳ ಕಚ್ಚಿದ ಜಾಗಕ್ಕೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಅದರಿಂದ ಆದ ನೋವು ಬೇಗ ಕಡಿಮೆ ಆಗುವುದು.
ಈರುಳ್ಳಿ ಬರೀ ನಮ್ಮ ಸೌಂದರ್ಯ ವರ್ಧಕ ಆಗಿ ಅಥವಾ ಆರೋಗ್ಯಕ್ಕೆ ಸಹಾಯಕಾರಿ ಆಗಿ ಕೆಲಸ ಮಾಡುವುದು ಮಾತ್ರವಲ್ಲದೆ ಅಡುಗೆ ಮನೆಯ ಕೆಲವು ವಸ್ತುಗಳಿಗೂ ಇದು ಪ್ರಯೋಜನಕಾರಿ. ತುಕ್ಕು ಹಿಡಿದ ಚಾಕು ಇದ್ದರೆ ಅದಕ್ಕೆ ಇರುಳ್ಳಿಯಿಂದ ಉಜ್ಜಿದರೆ ಚಾಕುವಿಗೆ ಹಿಡಿದ ತುಕ್ಕು ಹೋಗುವುದು. ಇನ್ನು ಹೊಸದಾಗಿ ನೆಲಕ್ಕೆ ಪೇಂಟ್ ಮಾಡಿದ್ದರೆ ಪೇಂಟ್ ವಾಸನೆ ಹೋಗದೆ ಇದ್ದರೆ ಈರುಳ್ಳಿ ಆಗ ರೂಂ ಫ್ರೇಶ್ನರ್ ಆಗಿ ಕೂಡಾ ಕೆಲಸ ಮಾಡುತ್ತದೆ. ಒಂದು ನೀರು ತುಂಬಿದ ಪಾತ್ರೆಯಲ್ಲಿ ಈರುಳ್ಳಿಯನ್ನು ತುಂಬಿ ಯಾವ ಕೋಣೆಯಲ್ಲಿ ಇಟ್ಟರೂ ಅದು ಅಲ್ಲಿ ರೂಂ ಪ್ರೆಶರ್ ಆಗಿ ಕೆಲಸ ಮಾಡುತ್ತದೆ. ಈ ರೀತಿಯಾಗಿ ಈರುಳ್ಳಿಯ ಉಪಯೋಗಗಳು ಹಲವಾರು ಇದೆ ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.