Ultimate magazine theme for WordPress.

ಕಾಲಿನ ಹಿಮ್ಮಡಿ ಒಡೆದಿದೆಯಾ, ಮನೆಯಲ್ಲೇ ಇದೆ ಮದ್ದು

0 12

ಕಾಲಿನ ಹಿಮ್ಮಡಿ ಒಡೆದುಕೊಳ್ಳುವುದರಿಂದ ತುಂಬಾ ಉರಿಯುತ್ತದೆ ನಮ್ಮ ಮುಖ ಹೇಗೆ ಚೆನ್ನಾಗಿ ಇಬೇಕೆಂದು ನಾವು ಗಮನ ಕೊಡುತ್ತೇವೆ ಅಷ್ಟೇ ನಮ್ಮ ದೇಹದ ಪ್ರತೀ ಅಂಗಗಳಿಗೆ ಕೂಡಾ ಪ್ರಾಮುಖ್ಯತೆ ಕೊಡಬೇಕು. ಚಳಿಗಾಲ ಶುರುವಾದಾಗ ಕಾಲಿನ ಒಡಕುಗಳು ಉಂಟಾಗುತ್ತದೆ ಅಥವಾ ಕೆಲವರಿಗೆ ಎಲ್ಲ ಸಮಯದಲ್ಲಿ ಒಡಕು ಉಂಟಾಗುತ್ತದೆ ಅದಕ್ಕೆ ಒಂದು ಮನೆಮದ್ದು ಇದೆ ಅದರ ಬಗ್ಗೆ ನಾವು ಈ ಲೇಖನದಲ್ಲಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಕಾಲು ಒಡಕು ಆಗದ ಹಾಗೆ ಮಾಡಿಕೊಳ್ಳುವ ಮನೆ ಮದ್ದು ಯಾವುದು ಎಂದು ತಿಳಿದುಕೊಳ್ಳೋಣ.

ಹಿಮ್ಮಡಿ ಒಡಕು ಎಂಬುದು ನೋಡಲು ಸಣ್ಣ ಸಮಸ್ಯೆ. ಆದರೆ ಅದರ ಹಿಂಸೆ ಮಾತ್ರ ಅದನ್ನು ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು. ಈ ಹಿಮ್ಮಡಿ ಒಡಕಿಗೆ ಕಾರಣಗಳು ಸಾಕಷ್ಟು ಇವೆ. ಬರಿಗಾಲಿನಲ್ಲಿ ಧೂಳಿನಲ್ಲಿ ನಡೆಯುವುದು , ಸ್ವಲ್ಪ ಕೂಡಾ ಕೊಬ್ಬು ಇಲ್ಲದ ಆಹಾರ ಸೇವನೆ ಮಾಡುವುದು , ತಂಬಾಕು ಹಾಗೂ ಚಹಾ ಕಾಫಿ ಇವುಗಳ ಅತಿಯಾದ ಸೇವನೆ , ಪಾದಗಳ ಸ್ವಚ್ಚತೆ ಮಾಡಿಕೊಳ್ಳದೆ ಇರುವುದು ಇವೆಲ್ಲಾ ಹಿಮ್ಮಡಿ ಒಡಕಿಗೆ ಕಾರಣಗಳು. ಈ ಹಿಮ್ಮಡಿ ಒಡಕಿಗೆ ಅದೆಷ್ಟೋ ಬಾರಿ ಮನೆಯಲ್ಲಿ ಇರುವ ಧೂಳು ಕೂಡಾ ಕಾರಣ ಆಗಿರುತ್ತದೆ ಹಾಗಾಗಿ ಆದಷ್ಟು ಮನೆಯಲ್ಲಿ ಧೂಳು ಇಲ್ಲದೆ ಇರುವ ಹಾಗೇ ನೋಡಿಕೊಳ್ಳುವುದು ಉತ್ತಮ.

ಕಾಲು ಒಡಕಿಗೆ ಮನೆ ಮದ್ದು ನೋಡುವುದಾದರೆ, ಮೊದಲಿಗೆ ಒಂದು ಪಾತ್ರೆಗೆ ಬಿಸಿನೀರು ಕಾಯಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಾಲುಗಳ ಎರಡು ಪಾದಗಳನ್ನು ಐದು ನಿಮಿಷಗಳ ಕಾಲ ನೀರಿನ ಒಳಗೆ ಹಾಕಬೇಕು ಹೀಗೆ ಮಾಡುವುದರಿಂದ ಕಾಲಿನಲ್ಲಿರುವ ಒಡಕುಗಳು ಕಡಿಮೆಯಾಗುತ್ತಾ ಹೋಗುತ್ತದೆ. ನಂತರ ಒಂದು ಬೌಲ್ ಗೆ ಒಂದು ಚಮಚ ವ್ಯಾಸಲಿನ್ ಹಾಗೂ ಒಂದು ಚಮಚ ಅಲವೇರ ಹಾಕಬೇಕು ನಂತರ ಒಂದು ಚಮಚ ಗ್ಲಿಸರಿನ್ ಹಾಕಬೇಕು ಇದನ್ನು ಚೆನ್ನಾಗಿ ಬೆರೆಸಿಕೊಂಡು ಕಾಲಿಗೆ ಹಚ್ಚಿದರೆ ಯಾವ ಒಡಕುಗಳು ಬರುವುದಿಲ್ಲ ಕಾಲು ಚೆನ್ನಾಗಿ ಕಾಣುತ್ತದೆ ಹಾಗೂ ತಂಪಾಗಿರುತ್ತದೆ.

ಮುಖ್ಯವಾಗಿ ನಾವು ಎತ್ತರದ ಚಪ್ಪಲಿಗಳನ್ನು ಧರಿಸುವುದರಿಂದ ಕೂಡಾ ನಮಗೆ ಹಿಮ್ಮಡಿ ನೋವು , ಕಾಲು ಬೆನ್ನು ನೋವು ಬರುತ್ತದೆ ಹಾಗಾಗಿ ಆದಷ್ಟು ಎತ್ತರದ ಚಪ್ಪಲಿಗಳನ್ನು ಧರಿಸದೆ ಆದಷ್ಟು ಹಿಮ್ಮಡಿ ಮುಚ್ಚುವ ಚಪ್ಪಲಿಗಳನ್ನು ಧರಿಸುವುದು ಉತ್ತಮ. ಒಡೆದ ಹಿಮ್ಮಡಿಗಳಿಗೆ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಕಾಲು ತೊಳೆದು ಯಾವುದಾದರೂ ಕೋಲ್ಡ್ ಕ್ರೀಮ್ ಅಥವಾ ಮಾಯಿಶ್ಚರೈಸರ್ ಹಚ್ಚಿದರೆ ಕಾಲು ಒಡೆಯುವುದು ಹೋಗುತ್ತದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಆದರೂ ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಪಾದಗಳನ್ನು ನೆನೆಸಿಕೊಂಡು ನಂತರ ಪಾದಗಳನ್ನು ಉಜ್ಜಿ ತೊಳೆಯುತ್ತಾ ಇರಬೇಕು ಹೀಗೇ ಮಾಡುವುದರಿಂದ ಸತ್ತ ಜೀವಕೋಶಗಳು ನಾಶವಾಗುತ್ತವೆ. ಅರ್ಧ ಭಾಗ ನಿಂಬೆ ಹಣ್ಣಿಗೆ ಉಪ್ಪು ಮತ್ತು ಸಕ್ಕರೆ ಬೆರೆಸಿ ಚೆನ್ನಾಗಿ ಉಜ್ಜಿ ತೊಳೆಯುವುದರಿಂದ ಸಹ ಕಾಲಿನ ಕಪ್ಪಾದ ಭಾಗ ಹೋಗುತ್ತದೆ ಚರ್ಮ ಹೊಳೆಯುತ್ತದೆ. ಇನ್ನು ರಾತ್ರಿ ಮಲಗುವಾಗ ತೆಂಗಿನ ಎಣ್ಣೆ ಆಲೀವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಕಾಲಿಗೆ ಹಚ್ಚಿ ಮಸಾಜ್ ಮಾಡಿ ಸಾಕ್ಸ್ ಧರಿಸಿ ಮಲಗಿದರೆ ಹಿಮ್ಮಡಿ ಒಡಕು ಕ್ರಮೇಣ ದೂರ ಆಗುವುದು.

ಇನ್ನು ಹಿಮ್ಮಡಿ ಒಡಕು ಕಡಿಮೆ ಆಗಲು ನಾವು ಸೇವಿಸುವ ಆಹಾರ ಹೇಗೆ ಇರಬೇಕು ಎಂದು ನೋಡುವುದಾದರೆ , ದೇಹದಲ್ಲಿ ವಾಟ ದೋಷ ಹೆಚ್ಚಾದಾಗ ಕಾಲು ಒಡೆಯುತ್ತದೆ. ಹಾಗಾಗಿ ವಾತ ಶಮನ ಆಗಲು ಒಳ್ಳೆಯ ಕೊಬ್ಬಿನ ಅಂಶ ಇರುವ, ಜಿಡ್ಡಿನ ಪದಾರ್ಥಗಳೂ ಕೊಬ್ಬರಿ ಎಣ್ಣೆ ಎಳ್ಳೆಣ್ಣೆ ಶೇಂಗಾ ಎಣ್ಣೆ ಇವುಗಳನ್ನು ಸೇವಿಸುವುದು ಉತ್ತಮ. ಅತಿಯಾದ ಕರಿದ ಪದಾರ್ಥಗಳು ಹಾಗೂ ಖಾರದ ಪದಾರ್ಥಗಳ ಸೇವನೆಯಿಂದ ಸಹ ಕಾಲು ಒಡಕು ಉಂಟಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಬುದುಗುಂಬಳ ಕಾಯಿ , ತೆಂಗಿನ ಕಾಯಿ ಹಾಗೂ ಅದರ ಹಾಲು , ಮನೆಯಲ್ಲೇ ತಯಾರಿಸಿದ ಬೆಣ್ಣೆ , ಸಪೋಟ ಹಾಗೂ ಎಳೆನೀರು ಇವುಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.

ಕಾಲು ಒಡೆದ ಜಾಗಕ್ಕೆ ಚೆನ್ನಾಗಿ ಎಣ್ಣೆ ಅಥವಾ ಉರಿ ಹೆಚ್ಚಾಗಿ ಇದ್ದರೆ ತುಪ್ಪ ಹಚ್ಚಿ ಮಸಾಜ್ ಮಾಡಿ ಸ್ವಲ್ಪ ಕಾಲ ಬಿಸಿ ನೀರಿನಲ್ಲಿ ಕಾಲುಗಳನ್ನು ಇಟ್ಟುಕೊಳ್ಳಬೇಕು. ಕಾಲು ಒಡೆದು ರಕ್ತ ಬರುತ್ತಾ ಇದ್ದರೆ ಬೇವಿನ ಎಣ್ಣೆ , ಎಳ್ಳೆಣ್ಣೆ ಮತ್ತು ಅರಿಶಿಣ ಇವುಗಳ ಮಿಶ್ರಣವನ್ನು ಕಾಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ನಂತರ ಜಾಜಿ ಮಲ್ಲಿಗೆ ಎಲೆಯ ಪೇಸ್ಟ್ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು , ಆಲ , ಅತ್ತಿ , ಅಷ್ವತ್ತ ಮರಗಳ ತೊಗಟೆಯ ಕಷಾಯ ಮಾಡಿಟ್ಟುಕೊಂಡು ಅದರಲ್ಲಿ ಹತ್ತು ನಿಮಿಷಗಳ ಕಾಲ ಕಾಲನ್ನು ನೆನೆಸಿ ಇಟ್ಟುಕೊಳ್ಳಬೇಕು. ಈ ಮೂರು ಮರದ ತೊಗಟೆಗಳು ಸಿಗದೇ ಇದ್ದರೆ ಯಾವುದೇ ಒಂದನ್ನು ಆದರೂ ಬಳಸಬಹುದು. ಇನ್ನು ಕಾಲುಗಳಿಗೆ ಪ್ರತೀ ದಿನ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕಾಲು ಒಡಕು ಬರುವುದಿಲ್ಲ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ಕಾಲು ನೋವು ಮತ್ತು ಕಾಲು ಒಡಕು ಇದಕ್ಕೆ ಈ ಮನೆಮದ್ದುಗಳನ್ನು ಮಾಡಿ ಪ್ರಯೋಜನ ಪಡೆದುಕೊಳ್ಳಿ.

Leave A Reply

Your email address will not be published.