ಮಾನವರಲ್ಲಿ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ ವಿರಳವಾಗಿ ಮಾರಕವಾಗಬಹುದು. ಕೊರೋನಾ ರೋಗವು ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಸಾವು ಮತ್ತು ನೋವುಗಳು ಸಂಭವಿಸುತ್ತಿದೆ. ಕೊರೋನ ರೋಗಕ್ಕೆ ಸರಿಯಾದ ರೀತಿಯ ಯಾವುದೇ ಔಷಧವನ್ನು ಕಂಡುಹಿಡಿದಿಲ್ಲ. ಆದ್ದರಿಂದ ನಾವು ಇಲ್ಲಿ ಕೊರೋನಾ ರೋಗವನ್ನು ತಡೆಗಟ್ಟುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೊರೊನಾ ಎರಡನೇ ಅಲೆಯು ಬೇರೆ ದೇಶಗಳಿಗಿಂತ ಹೆಚ್ಚಾಗಿ ಭಾರತ ದೇಶದಲ್ಲಿಯೇ ಕಂಡುಬರುತ್ತಿದ್ದು ಜೊತೆಗೆ ಹೆಚ್ಚು ಸಾವು ಮತ್ತು ನೋವುಗಳು ಸಂಭವಿಸುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಬೇರೆ ದೇಶಗಳಲ್ಲಿ ಪ್ರತಿಯೊಬ್ಬರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮೊದಲನೆಯದಾಗಿ ಕೊರೋನಾ ವ್ಯಕ್ತಿಗಳು ಅವರಲ್ಲಿರುವ ಭಯವನ್ನು ತೆಗೆದುಹಾಕಬೇಕು. ಏಕೆಂದರೆ ಈ ರೋಗವನ್ನು ತಡೆಗಟ್ಟಲು ಯಾವುದೇ ಒಂದು ಸರಿಯಾದ ಔಷಧಗಳು ಇಲ್ಲ. ಇದನ್ನು ತಡೆಗಟ್ಟಲು ಮುಖ್ಯವಾಗಿ ಬೇಕಾಗಿರುವುದು ರೋಗನಿರೋಧಕ ಶಕ್ತಿಯಾಗಿದೆ.
ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವೊಂದು ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ ಪ್ರತಿದಿನ ನಾಲ್ಕರಿಂದ ಐದು ಬಗೆಯ ಹಣ್ಣುಗಳನ್ನು ಸೇವಿಸಬೇಕು. ಜೊತೆಗೆ ನಾಲ್ಕರಿಂದ ಐದು ಬಗೆಯ ತರಕಾರಿಗಳನ್ನು ಸೇವಿಸುವುದು ಉತ್ತಮ. ಇದರ ಜೊತೆಗೆ ಪ್ರತಿದಿನವೂ ಒಂದು ಬಗೆಯ ಸೊಪ್ಪನ್ನು ಸೇವಿಸಬೇಕು. ವಾರದ ಪ್ರತಿದಿನವೂ ಒಂದೊಂದು ಬಗೆಯ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿನ ಪ್ರೋಟೀನ್ ಅಂಶವು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ.
ಪ್ರತಿನಿತ್ಯ ಆಹಾರದಲ್ಲಿ ಒಂದೊಂದು ಬಗೆಯ ಸಿರಿಧಾನ್ಯವನ್ನು ಉಪಯೋಗಿಸಬೇಕು. ಸಿರಿಧಾನ್ಯವನ್ನು ಅಷ್ಟು ಸೇರಿಸಿಯೂ ಕೂಡ ಉಪಯೋಗಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದರ ಜೊತೆಗೆ ಮೊಳಕೆ ಬರಿಸಿದ ಕಾಳುಗಳನ್ನು ಕೂಡ ಸೇವಿಸಬೇಕು. ದೇಹಕ್ಕೆ ಡಿಹೈಡ್ರೇಶನ್ ಆಗದಹಾಗೆ ಹೆಚ್ಚು ನೀರನ್ನು ಬಳಸಬೇಕು. ಪ್ರತಿನಿತ್ಯ ಹಾಲು ಹಾಗೂ ಒಂದು ಮೊಟ್ಟೆಯನ್ನು ಸೇವಿಸಬೇಕು. ಹೀಗೆ ಪ್ರತಿನಿತ್ಯ ಮಾಡುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನ್ ಹಾಗೂ ರೋಗ ನಿರೋಧಕ ಶಕ್ತಿಯು ದೊರಕುತ್ತದೆ.
ಇದರ ಜೊತೆಗೆ ಮನೆಯು ಹೆಚ್ಚು ಗಾಳಿಯಾಡುವ ರೀತಿ ಇದ್ದರೆ ಆಕ್ಸಿಜನ್ ಪ್ರಮಾಣ ದೇಹಕ್ಕೆ ಹೆಚ್ಚಾಗಿ ದೊರಕುತ್ತದೆ. ಜೊತೆಗೆ ಕೊರೋನಾ ಬಂದ ರೋಗಿಗಳು ಹೆಚ್ಚಾಗಿ ದೇಹಕ್ಕೆ ವಿಶ್ರಾಂತಿಯನ್ನು ನೀಡಬೇಕು. ಪ್ರತಿನಿತ್ಯ ಯೋಗ ಮಾಡುವುದು ಉತ್ತಮ. ಹೆಚ್ಚು ಚಟುವಟಿಕೆಯಿಂದ ವ್ಯಕ್ತಿಗಳು ಇರಬೇಕು. ಕೊರೋನಾದ ಯಾವುದೇ ಒಂದು ಗುಣ ಲಕ್ಷಣಗಳು ಕಂಡು ಬಂದರೆ ಅದಕ್ಕೆ ಸರಿಯಾದ ಔಷಧವನ್ನು ಪಡೆದುಕೊಳ್ಳಬೇಕು. ಹೀಗೆ ಪ್ರತಿನಿತ್ಯ ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ಕೊರೋನ ರೋಗವನ್ನು ಸಂಪೂರ್ಣವಾಗಿ ನಿರ್ವಹಿಸಬಹುದಾಗಿದೆ.