ಕೋವಿಡ್ 19 ರೋಗವು ಭಾರತ ದೇಶವನ್ನು ಒಂದೇ ಅಲ್ಲದೆ ಇಡೀ ಜಗತ್ತಿನಾದ್ಯಂತ ಜನರ ಜೀವನವನ್ನು ಅಲ್ಲೋಲಕಲ್ಲೋಲವಾಗಿಸಿದೆ. ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವುದು ವೈರಸಗಳ ಒಂದು ಗುಂಪು. ಮಾನವರಲ್ಲಿ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ ವಿರಳವಾಗಿ ಮಾರಕವಾಗಬಹುದು. ಕೊರೊನಾ ರೋಗ ಬಂದ ವ್ಯಕ್ತಿಗಳು ಮನೆಯಲ್ಲಿಯೇ ಇದು ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೊರೋನಾ ರೋಗವನ್ನು ಹೋಗಲಾಡಿಸಲು ಬಹುಮುಖ್ಯವಾಗಿ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಬೇಕಾಗುತ್ತದೆ. ಕೊರೋನಾ ಬಂದ ರೋಗಿಗಳು ತೀವ್ರತೆಯ ಆಧಾರದ ಮೇಲೆ ತಮ್ಮ ದೇಹದ ತೂಕಕ್ಕೆ 1ರಿಂದ 1.5 ಗ್ರಾಮನಸ್ಟು ಪ್ರೊಟೀನ್ ಪದಾರ್ಥವನ್ನು ಸೇವಿಸುವುದು ಉತ್ತಮವಾಗಿದೆ. ಪ್ರೋಟೀನ್ ಅಂಶವು ಮೀನು, ಮೊಟ್ಟೆ, ಮಾಂಸಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ದೇಹಕ್ಕೆ ಪ್ರೊಟೀನ್ ಅಂಶವನ್ನು ಪಡೆಯಬಹುದು. ಇನ್ನೂ ರೋಗಿಗಳು ಸಸ್ಯಾಹಾರಿಗಳಾಗಿ ಇದ್ದಲ್ಲಿ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿ 24 ಪರ್ಸೆಂಟ್ ನಷ್ಟು ಪ್ರೋಟೀನ್ ದೊರಕುತ್ತದೆ. ಜೊತೆಗೆ ಹಾಲಿನಿಂದ ತಯಾರಿಸಿದ ಆಹಾರವನ್ನು ಸೇವಿಸಬಹುದಾಗಿದೆ.
ಇದರ ಜೊತೆಗೆ ದೇಹವು ಡಿಹೈಡ್ರೇಷನ್ ಗೆ ಗುರಿಯಾಗದೆ ಇರುವಹಾಗೆ ಸರಿಯಾಗಿ ನೀರನ್ನು ಸೇವಿಸಬೇಕಾಗುತ್ತದೆ. ಜೊತೆಗೆ ಉಪ್ಪು, ಖಾರ, ಸಕ್ಕರೆಯನ್ನು ಕಡಿಮೆ ಸೇವಿಸಬೇಕು. ಜೊತೆಗೆ ಫ್ಯಾಟ್ ಕಂಟೆಂಟ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಮದ್ಯಪಾನ ಮತ್ತು ಧೂಮಪಾನವನ್ನು ಮಾಡಬಾರದು. ಇದರ ಜೊತೆಗೆ ಕೊರೋನ ಹಿಡಿದ ವ್ಯಕ್ತಿಗಳು ಸರಿಯಾದ ವೈದ್ಯರ ಮಾರ್ಗದರ್ಶನವನ್ನು ಪಡೆದು ಅದನ್ನು ಬಳಸಿಕೊಳ್ಳುವುದು ಉತ್ತಮವಾಗಿದೆ. ಎರಡನೇ ಅಲೆಯು ತುಂಬಾ ಬೇಗನೆ ಹರಡುತ್ತಿದ್ದು ಇದು ಮನುಷ್ಯನ ಶ್ವಾಸಕೋಶದ ಮೇಲೆ ಬೇಗನೆ ಪರಿಣಾಮ ಬೀರುತ್ತಿದೆ.
ಇದರ ಪರಿಣಾಮವಾಗಿ ಪ್ರತಿಯೊಬ್ಬ ವ್ಯಕ್ತಿಗಳು ಹಾಕ್ಸಿಮೀಟರ್ ನ ಸಹಾಯ ಬಳಸಿ ಆಕ್ಸಿಜನ್ ಪ್ರಮಾಣವನ್ನು ಪರೀಕ್ಷಿಸುತ್ತಿರಬೇಕು. ದೇಹದ ಆಕ್ಸಿಜನ್ ಪ್ರಮಾಣವೂ ಕಡಿಮೆ ಇದ್ದ ಪಕ್ಷದಲ್ಲಿ ವೈದ್ಯರನ್ನು ಸಂಪರ್ಕಿಸಿ ಔಷಧವನ್ನು ಮಾಡಿಕೊಳ್ಳುವುದು ಸೂಕ್ತವಾಗಿದೆ. ಇದರ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಕೊರೋನಾ ರೋಗವನ್ನು ನಿರ್ಲಕ್ಷಿಸದೆ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. ಹೊರಗಡೆ ಹೋಗುವುದನ್ನು ನಿಲ್ಲಿಸಬೇಕು ಜೊತೆಗೆ ಸಾನಿಟೈಸರ್ ಬಳಸುವುದರ ಜೊತೆಗೆ ಕೈ ಅನ್ನು ಆಗಾಗ್ಗೆ ಸ್ವಚ್ಛವಾಗಿ ತೊಳೆಯುತ್ತಿರಬೇಕು. ಅಗತ್ಯ ವಸ್ತುಗಳ ಖರೀದಿಗೆ ಹೊರ ಹೋದಾಗ ಅಗತ್ಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಕೊರೋನ ರೋಗವನ್ನು ತಡೆಗಟ್ಟಬಹುದು.