ಈ ಪ್ರಪಂಚದಲ್ಲಿ ಎಷ್ಟೋ ವಿಧದ ಸಸ್ಯ ಜಾತಿಗಳು ಇವೆ. ಅವುಗಳಲ್ಲಿ ಪ್ರತಿಯೊಂದು ಬೇರೆ ಬೇರೆ ರೀತಿಯ ಗುಣಗಳನ್ನು ಹೊಂದಿದ್ದು ಔಷಧೀಯ ಗುಣಗಳನ್ನು ಹೊಂದಿವೆ. ಮನೆಯಲ್ಲೇ ಎಷ್ಟೋ ವಿಧದ ಸಸ್ಯಜಾತಿಗಳು ಬೆಳೆದಿರುತ್ತವೆ. ಆದರೆ ಅವುಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಏನಾದರೂ ಆದಾಗ ಬೇರೆಯವರು ಹೇಳಿದಾಗ ಮನೆಯಲ್ಲಿ ಇರುವ ಸಸ್ಯಗಳ ಬಗ್ಗೆ ತಿಳಿಯುತ್ತದೆ. ಆದ್ದರಿಂದ ನಾವು ಇಲ್ಲಿ ದೇಹವನ್ನು ತಂಪು ಮಾಡುವ ಲಾವಂಚ ಬೇರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಲಾವಂಚ ಇದು ಒಂದು ಜಾತಿಯ ಹುಲ್ಲಿನ ಬೇರು ಆಗಿದೆ. ಇದನ್ನು ಮಡಿವಾಳ ಬೇರು ಎಂದು ಕೂಡ ಕರೆಯುತ್ತಾರೆ. ಇದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಇದನ್ನು ಹಲವಾರು ರೀತಿಯಲ್ಲಿ ಬಳಕೆ ಮಾಡುತ್ತಿದ್ದರು. ಆದರೆ ಈಗ ಇದರ ಬಗ್ಗೆ ಈಗಿನ ಜನರಿಗೆ ತಿಳಿದಿರುವುದು ಬಹಳ ಕಡಿಮೆ. ಹಿಂದಿನ ಕಾಲದಲ್ಲಿ ಅಂದರೆ ಬ್ರಿಟಿಷರ ಕಾಲದಲ್ಲಿ ಬೇಸಿಗೆಯಲ್ಲಿ ಕಿಟಕಿಗೆ ಇದರ ಪರದೆಯನ್ನು ಮಾಡುತ್ತಿದ್ದರು. ಈ ಪರದೆಗೆ ನೀರನ್ನು ಹೊಡೆಯುತ್ತಿದ್ದರು. ಇದರಿಂದ ತಂಪಿನ ಗಾಳಿ ಬಂದು ದೇಹವು ತಂಪಿರುತ್ತಿತ್ತು.

ಇದು ದೇಹದಲ್ಲಿ ಇರುವ ವೈರಸ್ ಗಳನ್ನು ತೆಗೆದು ಹಾಕುತ್ತದೆ. ಹಾಗೆಯೇ ಇದು ದೇಹದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದೇಹಕ್ಕೆ ತಂಪನ್ನು ನೀಡುತ್ತದೆ. ಬೇಸಿಗೆಯಲ್ಲಿ ಇದನ್ನು ಬಳಕೆ ಮಾಡಬೇಕು. ಇದರ ಕಷಾಯವನ್ನು ಮಾಡಿ ಕುಡಿಯಬೇಕು. ದಿನನಿತ್ಯ ಕೆಲಸಕ್ಕೆ ಹೋಗುವಂಥವರು ಇದನ್ನು ಕಷಾಯ ಮಾಡಿಕೊಂಡು ಬಾಟಲಿಗಳಲ್ಲಿ ಇಟ್ಟುಕೊಂಡು ತೆಗೆದುಕೊಂಡು ಹೋಗಬಹುದು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆಯುರ್ವೇದದ ಔಷಧಿಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಹಾಗೆಯೇ ಒಂದು ಪಾತ್ರೆಗೆ ಸುಮಾರು ನಾಲ್ಕು ಲೋಟದಷ್ಟು ನೀರನ್ನು ಹಾಕಬೇಕು. ಅದಕ್ಕೆ ಸ್ವಲ್ಪ ಲಾವಂಚದ ಬೇರನ್ನು ಹಾಕಿ ಅರ್ಧ ಆಗುವವರೆಗೆ ಚೆನ್ನಾಗಿ ಕುದಿಸಬೇಕು. ನಂತರದಲ್ಲಿ ಇದನ್ನು ಸೋಸಿಕೊಂಡು ಕುಡಿಯಬೇಕು. ಇದು ದೇಹಕ್ಕೆ ಬಹಳ ಒಳ್ಳೆಯದು. ಹಾಗೆಯೇ ಚರ್ಮ ರೋಗಗಳು ಉಂಟಾದಾಗ ಇದನ್ನು ಕುಡಿಯಬೇಕು. ಇದರಲ್ಲಿ ವೈರಸ್ ನಿರೋಧಕ ಶಕ್ತಿ ಇದೆ. ಆದ್ದರಿಂದ ಇದನ್ನು ಬೇಸಿಗೆಯಲ್ಲಿ ವಾರಕ್ಕೆ ಮೂರು ಬಾರಿಯಾದರೂ ಸೇವನೆ ಮಾಡಿದರೆ ಬಹಳ ಒಳ್ಳೆಯದು.

Leave a Reply

Your email address will not be published. Required fields are marked *