ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು. ಆದ್ದರಿಂದ ನಾವು ಇಲ್ಲಿ 2020-21 ನೇ ಸಾಲಿನ ಬೆಳೆ ಪರಿಹಾರದ ಪೂರ್ಣ ವಿವರವನ್ನು ರೈತರೇ ಸ್ವತಃ ನೋಡಬಹುದು ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಅನೇಕ ಬೆಳೆ ಪರಿಹಾರ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಆನ್ಲೈನ್ ಮೂಲಕ ಈ ವಿವರವನ್ನು ತೆಗೆದುಕೊಳ್ಳಬಹುದು. ಮೊದಲು ಗೂಗಲ್ ಪೇಜ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಲ್ಯಾಂಡ್ ರೆಕಾರ್ಡ್ಸ್ ಅದು ಟೈಪ್ ಮಾಡಿ ಸರ್ಚ್ ನೀಡಬೇಕು. ಅದರಲ್ಲಿ ರೆವೆನ್ಯೂ ಡಿಪಾರ್ಟ್ಮೆಂಟ್ ಎಂಬ ಹೆಡ್ ದೊರಕುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅದರ ಮೇಲೆ ಕ್ಲಿಕ್ ಮಾಡಿದಾಗ ರವಿನ್ಯೂ ಡಿಪಾರ್ಟ್ಮೆಂಟಿನ ಆಫೀಸಲ್ ವೆಬ್ಸೈಟ್ ಓಪನ್ ಆಗುತ್ತದೆ.
ಆಫೀಸಿಯಲ್ ವೆಬ್ಸೈಟ್ನಲ್ಲಿ ಪರಿಹಾರ ಎಂಬ ಆಪ್ಷನ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಪರಿಹಾರ ಲಿಂಕ್ಸ್ ಗಳು ದೊರಕುತ್ತವೆ. ಅದರಲ್ಲಿ ನಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕನ್ನಡ ಟು ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಂಡ ನಂತರ ಕೆಳಗಡೆ ಪರಿಹಾರ ಪೇಮೆಂಟ್ ಎಂಬ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದ ನಂತರ ಪರಿಹಾರ ನಮೂದು ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಯನ್ನು ಕೇಳುತ್ತದೆ. ಅದನ್ನು ಎಂಟ್ರಿ ಮಾಡಿದ ನಂತರ ಯಾವ ತರಹದ ಪರಿಹಾರವೆಂಬ ಆಪ್ಷನ್ ಹೇಳುತ್ತದೆ. ಅದನ್ನು ಹಾಕಿದ ನಂತರ ಯಾವ ವರ್ಷವೆಂದು ಆಪ್ಷನ್ ಹೇಳುತ್ತದೆ. ಅದರಲ್ಲಿ 2020-21 ನೆ ಸಾಲಿನಲ್ಲಿ ಎಂಟ್ರಿ ಮಾಡಿದ ನಂತರ ಆಧಾರ್ ಸಂಖ್ಯೆ ಅಥವಾ ಪರಿಹಾರ ನಮೂದು ಸಂಖ್ಯೆ ಯನ್ನು ಕೇಳುತ್ತದೆ.
ಅದನ್ನು ಎಂಟ್ರಿ ಮಾಡಿ ನಂತರ ಅದರ ಕೆಳಗಡೆ ನೀಡಿರುವ ಕ್ಯಾಪ್ಚರ್ ಸಂಖ್ಯೆಯನ್ನು ಹಾಕಬೇಕು. ಅದನ್ನು ನಮೂದು ಮಾಡಿದನಂತರ ಕೆಳಗಡೆ ವಿವರಗಳನ್ನು ಪಡೆಯಲು ಎಂಬ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಅವರ ಬೆಳೆ ಪರಿಹಾರದ ವಿವರಗಳು ದೊರಕುತ್ತದೆ. ಹಾಗೆ ಇಡೀ ಗ್ರಾಮದ ರಿಪೋರ್ಟ್ ಪಡೆಯುವುದಾದರೆ ಪರಿಹಾರ ಲಿಂಕ್ಸ್ ಯೋಗಿ ಅಲ್ಲಿ ವಿಲೇಜ್ ವಾಯ್ಸ್ ಬೆನಿಫಿಸಿಯರಿ ಬೋರ್ಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಮೊದಲು ಡಿಸ್ಟ್ರಿಕ್ಟ್, ನಂತರ ತಾಲೂಕು ಹಾಗೆ ಹೋಬಳಿ, ನಂತರ ವಿಲೇಜ್ ಅನ್ನು ಸೆಲೆಕ್ಟ್ ಮಾಡಿ ಯಾವ ವರ್ಷವೆಂದು ಸೆಲೆಕ್ಟ್ ಮಾಡಿ ಯಾವ ಸೀಸನ್ ಅನ್ನು ಎಂಟ್ರಿ ಮಾಡಿ ನಂತರ ಯಾವ ವಿಪತ್ತು ಎಂತು ಟೈಪ್ ಮಾಡಿದ ನಂತರ ಗೆಟ್ ರಿಪೋರ್ಟ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿದಾಗ ಗ್ರಾಮದ ಬೆಳೆ ಪರಿಹಾರದ ಪೂರ್ಣ ವಿವರ ದೊರಕುತ್ತದೆ. ಹೀಗೆ ಪ್ರತಿಯೊಬ್ಬರೂ ಕೂಡ ಬೆಳೆ ಪರಿಹಾರದ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.