ಕಿರುತೆರೆ ಕ್ಷೇತ್ರದಲ್ಲಿ ಶ್ವೇತಾ ಸಾಕಷ್ಟು ಹೆಸರು ಮಾಡಿದ್ದಾರೆ. ಎಸ್.ನಾರಾಯಣ್ ನಿರ್ದೇಶನದ ‘ಸುಮತಿ’ ಧಾರಾವಾಹಿ ಮೂಲಕ ಬಣ್ಣ ಹಚ್ಚಿದ್ದರು ಶ್ವೇತಾ. ‘ಸುಮತಿ, ಸುಕನ್ಯಾ, ಅರುಂಧತಿ, ಕಾದಂಬರಿ, ಸೌಂದರ್ಯ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಲೀಡ್ ಪಾತ್ರದಲ್ಲಿ ನಟಿಸಿದ ಖ್ಯಾತಿ ಶ್ವೇತಾಗೆ ಸಲ್ಲುತ್ತದೆ. ‘ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾರಾ, ಡಾನ್ಸಿಂಗ್ ಸ್ಟಾರ್, ಡಾನ್ಸ್ ಡಾನ್ಸ್ ಜ್ಯೂನಿಯರ್ಸ್’ ಮುಂತಾದ ರಿಯಾಲಿಟಿ ಶೋಗಳಲ್ಲಿ ಅವರು ನಿರೂಪಕರಾಗಿ ಕೆಲಸ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 2’ದ ಸ್ಪರ್ಧಿಯಾಗಿದ್ದರು ಶ್ವೇತಾ. ಅಷ್ಟೇ ಅಲ್ಲದೆ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ಅತ್ಯದ್ಭುತ ನೃತ್ಯಗಳನ್ನು ಶ್ವೇತಾ ಮಾಡಿದ್ದರು.

ತಂದೆಯವರ ಹೆಸರು, ಚೆಂಗಪ್ಪ, ಕೊಡಗು ಜಿಲ್ಲೆಯ, ‘ಸೋಮವಾರಪೇಟೆ’ ಯ ಬಳಿಯ ಗ್ರಾಮದವರು, ತಾಯಿಯವರ ಹೆಸರು,ತಾರಾ. ಶ್ವೇತ ಹಾಗೂ ಅವರ ತಮ್ಮ ‘ಸಾಗರ್,’ ಬೆಂಗಳೂರಿನಲ್ಲೇ ಹುಟ್ಟಿದವರು. ಬೆಂಗಳೂರಿನಲ್ಲಿ ತಂದೆಯವರ ಉದ್ದಿಮೆಯಿದೆ. ಶ್ವೇತಾ ಚೆಂಗಪ್ಪ ‘ಬಿಕಾಂ,’ ಓದುತ್ತೋದುತ್ತಾ ಅಭಿನಯದಲ್ಲೂ ಪಾಲ್ಗೊಂಡು ಬೆಳೆದರು.

ಕಾಲೇಜ್‍ನಲ್ಲಿ ಓದುವ ಸಮಯದಲ್ಲೇ ‘ಆಫರ್ಸ್’ ಬರುತ್ತಿತ್ತು. ‘ಆಡಿಶನ್’ ತೆಗೆದುಕೊಳ್ಳಲು ನಿರ್ದೇಶಕರು ಹುಡುಕುತ್ತಾ ಬಂದರು. ‘ಸುಮತಿ’ಪಾತ್ರಕ್ಕೆ ಒಬ್ಬ ನಟಿಯ ಅವಶ್ಯಕತೆ ಅವರಿಗಿತ್ತು. ಅಳು, ನಗು, ಪರೀಕ್ಷೆಗಳ ನಂತರ, ‘ಒಂದೂವರೆ ಪುಟದ ಡಯಲಾಗ್’ ಹೇಳಲು ಹೇಳಿದರು. ಸುಮತಿ ಆ ಟೆಸ್ಟ್ ಲ್ಲಿ ಸುಲಭವಾಗಿ ಆಯ್ಕೆಯಾದರು. ಎಲ್ಲದರಲ್ಲೂ ‘ಟೈಟಲ್ ರೋಲ್’ ನಲ್ಲಿ ಅಭಿನಯಿಸಿ, ಹೆಸರು ಮಾಡಿರುವ ‘ಶ್ವೇತಾ ಚೆಂಗಪ್ಪ,’ ಮೂಲತಃ ಕೊಡಗಿನವರು. ಶೂಟಿಂಗ್ ವೇಳೆಯಲ್ಲಿ ಶ್ವೇತಾ ಚಂಗಪ್ಪ ಅವರು ಹೈದರಾಬಾದ್ ಶೈಲಿಯ ಧಮ್ ಬಿರಿಯಾನಿಯನ್ನು ತಯಾರಿಸಿದರು ಇದೀಗ ಈ ಸುದ್ದಿ ಹೆಸರುವಾಸಿಯಾಗಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶ್ವೇತಾ ಚಂಗಪ್ಪ ಅವರು ಚಿತ್ರೀಕರಣದ ಶೂಟಿಂಗ್ ನ ಸಮಯದಲ್ಲಿ ಎಲ್ಲರೂ ಒಟ್ಟುಗೂಡಿದಾಗ ಹೊಸ ಯೋಚನೆಯಲ್ಲಿ ಹೈದರಾಬಾದ್ ಶೈಲಿಯ ಧಮ್ ಬಿರಿಯಾನಿಯನ್ನು ಮಾಡಿದರೆ ಹೇಗೆ ಎಂದುಕೊಳ್ಳುತ್ತಾ ಅಲ್ಲಿರುವವರಿಗೆಲ್ಲ ಸೇರಿಸಿ ಬಿರಿಯಾನಿಯನ್ನು ತಯಾರಿಸಿದರು ಹಾಗೂ ಎಲ್ಲರೂ ಸಂತೋಷದಿಂದ ಆಸ್ವಾದಿಸಿದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!